ನೆಲ್ಯಾಡಿ: ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ರಿಕ್ಷಾ ಪಲ್ಟಿ..! : ದನ ಮತ್ತು ಹೋರಿಗಳ ರಕ್ಷಣೆ – ಕಹಳೆ ನ್ಯೂಸ್
ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ರಿಕ್ಷಾ ನೆಲ್ಯಾಡಿ ಗ್ರಾಮದ ತೋಟದಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದ್ದು, ಪ್ರಕರಣದಲ್ಲಿ ಚಾಲಕ ರಿಕ್ಷಾ ಸಮೇತ ಪರಾರಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಕೊಕ್ಕಡ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಲಂಕಾರಿನಿಂದ ಹೋರಿ ಹಾಗೂ ದನವೊಂದನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕದ್ದು ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಕೊಕ್ಕಡಕ್ಕೆ ಸಾಗಾಟ ಮಾಡುತ್ತಿದ್ದ ವೇಳೆ ರಿಕ್ಷಾ ನೆಲ್ಯಾಡಿ...







