Friday, April 24, 2026
ಬೆಳ್ತಂಗಡಿ

ಎಂ.ಎಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಡಾ| ಅಂಕಿತಾ ಜಿ.ಭಟ್-ಕಹಳೆ ನ್ಯೂಸ್

ಬೆಳ್ತಂಗಡಿ: ಉಜಿರ ಬೆನಕ ಹೆಲ್ತ್ ಸೆಂಟರ್‍ನ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ಮತ್ತು ಡಾ| ಭಾರತೀ ಜಿ.ಕ.ದಂಪತಿ ಪುತ್ರಿ ಡಾ| ಅಂಕಿತಾ ಜಿ.ಭಟ್ ರವರು ಬೆಂಗಳೂರಿನ ಬಿ.ಎಂ.ಸಿ.ಆರ್.ಐ. ಮಡಿಕಲ್ ಕಾಲೇಜಿನಲ್ಲಿ ಎಂ.ಎಸ್, ಓ.ಬಿ.ಜಿ. ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪದವಿಗಳಿಸಿದ್ದಾರೆ.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಶಿಕ್ಷಣ ಪಡೆದು, ಸಿ.ಇ.ಟಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 47ನೇ ಸ್ನಾನಗಳಿಸಿ ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಮಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮುಗಿಸಿದರು. ಪಿ.ಜಿ. ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ 1400ನೇ ಸ್ನಾನ ಪಡೆದು ಬೆಂಗಳೂರಿನ ಪ್ರತಿಷ್ಠಿತ ಗವರ್ನಮೆಂಟ್ ಮಡಿಕಲ್ ಕಾಲೇಜು-ಬಿ.ಎಂ.ಸಿ.ಆರ್.ಐ.ಯಲ್ಲಿ ಎಂ.ಎಸ್., ಓ.ಬಿ.ಜಿ ವ್ಯಾಸಂಗ ಮುಗಿಸಿದ್ದಾರೆ. ಪ್ರಸ್ತುತ ಉಜಿರೆಯ ಬೆನಕ ಹೆಲ್ತ್ ಸೆಂಟರ್‍ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ನಡೆದು ಉತ್ತಮ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು