ಮತ್ತೆ ಅಪಾಯದಲ್ಲಿದೆ ಮಡಿಕೇರಿ – ಮಂಗಳೂರು ಹೈವೇ ; ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ – ಕಹಳೆ ನ್ಯೂಸ್
ಮಡಿಕೇರಿ: ಮೈಸೂರು – ಬಂಟ್ವಾಳ ರಾಷ್ಟ್ರೀಯ ರಸ್ತೆ ಮಾರ್ಗದಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡುಪಾಲ ಸಮೀಪ ಇರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದ್ದು, ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ. ಇತ್ತೀಚೆಗೆ ಸುರಿದ ಮಳೆಯ ಪರಿಣಾಮದಿಂದ ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದೆ. ನಿರಂತರವಾಗಿ ಭಾರೀ ವಾಹನಗಳು ಸಂಚಾರ ಮುಂದುವರಿಸಿದಲ್ಲಿ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಮಳೆಗಾಲದ...






