Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ಎಚ್.ಡಿ ದೇವೇಗೌಡ ಪ್ರಧಾನಿಯಾಗೋಲ್ಲ ಎಂದ ಎಚ್.ಡಿ.ಕೆ – ಕಹಳೆ ನ್ಯೂಸ್

ಮಂಗಳೂರು : ಕೇಂದ್ರದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗೋಲ್ಲ. ಅವರು ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಲೋಕಸಭಾ ಚುನಾವಣೆ 2019  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಪ್ರಧಾನಿಯಾಗುವ ಇಂಗಿತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯಗೂ ಜಗ್ಗುತ್ತಿಲ್ಲ: ಮಂಡ್ಯದಲ್ಲಿ ಮೈತ್ರಿಧರ್ಮ ಔಟ್ ಆಫ್ ಕಂಟ್ರೋಲ್ ಅವರು ಸರ್ಕಾರದ ಸಲಹೆಗಾರರಾಗಿ, ಈ ದೇಶದ ಹಿತಾಸಕ್ತಿಯನ್ನು ಕಾಪಾಡುತ್ತಾರೆ. ಯಾರು ಪ್ರಧಾನಿಯಾಗುತ್ತಾರೆ ಎಂಬುದು ಬೇರೆ...
ರಾಜಕೀಯಸುದ್ದಿ

ಮಂಡ್ಯದಲ್ಲಿ ಸುಮಲತಾ ಅಭಿಮಾನಿಗಳ ಮುಂದೆ ಅತ್ತದ್ದು ಯಾಕೆ ಗೊತ್ತಾ..? – ಕಹಳೆ ನ್ಯೂಸ್

ಮಂಡ್ಯ : ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಯುಗಾದಿ ದಿನವೂ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ಬಾರಿ ಹಬ್ಬ ಆಚರಿಸಬಾರದು ಅಂದುಕೊಂಡಿದ್ದೆ. ನಿಮ್ಮ ಪ್ರೀತಿಗೆ ಇನ್ನು ಮುಂದೆ ಇಲ್ಲಿಯೇ ಹಬ್ಬ ಆಚರಿಸಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಲೇ ಅವರು ಕಣ್ಣೀರಿಟ್ಟಿದ್ದು, ಅಭಿಮಾನಿಗಳು ಸಮಾಧಾನಪಡಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಸುಮಾರು ೨೮ ಹಳ್ಳಿಗಳಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದ್ದಾರೆ. ದೊಡ್ಡಗರುಡನಹಳ್ಳಿ ಬೀರಪ್ಪಸ್ವಾಮಿ ದೇವಾಲಯದ ಬಳಿ ಪ್ರಚಾರ ನಡೆಸುವಾಗ, ಅಂಬರೀಶ್ ನೆನೆದು ಕಣ್ಣೀರಿಟ್ಟಿದ್ದಾರೆ....
ರಾಜಕೀಯಸುದ್ದಿ

ಕದ್ರಿ ಪಾರ್ಕ್ ಬಳಿ ಮತಯಾಚಿಸಿದ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ – ಕಹಳೆ ನ್ಯೂಸ್

ಮಂಗಳೂರು: ನಗರದ ಕದ್ರಿ ಪಾರ್ಕ್ ಬಳಿ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಶ್ರೀ ನಾಗರಾಜ ಶೆಟ್ಟಿ, ಮಾಜೀ ಶಾಸಕ ಯೋಗೀಶ್ ಭಟ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಾ.ನ.ಪಾ ಸದಸ್ಯರಾದ ಸುಧೀರ್ ಶೆಟ್ಟಿ, ಪ್ರೇಮಾನಂದ್ ಶೆಟ್ಟಿ, ರೂಪ ಬಂಗೇರ, ಪಕ್ಷದ ಮುಖಂಡರಾದ ರಾಜ್ ಗೋಪಾಲ್ ರೈ,...
ರಾಜಕೀಯಸುದ್ದಿ

ಮಹತ್ವಾಕಾಂಕ್ಷೆಯ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್‌ : ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಸೋನಿಯಾ ಗಾಂಧಿ – ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್‌ ಪಕ್ಷ ಮಂಗಳವಾರ ಭಾರೀ ಮಹತ್ವಾಕಾಂಕ್ಷೆಯ ಪ್ರಣಾಳಿಕೆ ಬಿಡುಗಡೆ ಮಾಡಿತಾದರೂ, ಪ್ರಣಾಳಿಕೆಯ ಮುಖಪುಟ ವಿನ್ಯಾಸದ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೇದಿಕೆಯ ಮೇಲೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪ್ರಣಾಳಿಕೆ ಬಿಡುಗಡೆಗೂ ಮುನ್ನ ಸೋನಿಯಾ ಗಾಂಧಿ ಅವರು ಪ್ರಣಾಳಿಕೆ ಉಸ್ತುವಾರಿ ಹೊತ್ತಿದ್ದರು ಎನ್ನಲಾದ ಕರ್ನಾಟಕದ ಸಂಸದ, ಎಐಸಿಸಿ ಸಂಶೋಧನಾ ಘಟಕದ ಮುಖ್ಯಸ್ಥ ಪ್ರೊ. ರಾಜೀವ್‌ ಗೌಡ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಟೀವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ....
ರಾಜಕೀಯಸುದ್ದಿ

ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ಅನಂತ್​ಕುಮಾರ್​ ಅವರ ಪತ್ನಿ ತೇಜಸ್ವಿನಿ​​​ ನೇಮಕ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ಅನಂತ್​ಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತ್​ಕುಮಾರ್​​ ನೇಮಕವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ. ತೇಜಸ್ವಿನಿ ಅನಂತ್​ಕುಮಾರ್​ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕ ಮಾಡಿರುವುದು ನನಗೆ ಸಂತೋಷವಾಗಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುವುದಾಗಿ ಯಡಿಯೂರಪ್ಪ ಟ್ವಿಟ್ ನಲ್ಲಿ ತಿಳಿಸಿದ್ದಾರೆ....
ರಾಜಕೀಯಸುದ್ದಿ

ಸುಮಲತಾರವರು ಅಧಿಕಾರವಿಲ್ಲದೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ- ಸಿಎಂ ಕುಮಾರಸ್ವಾಮಿ- ಕಹಳೆ ನ್ಯೂಸ್

ಮಂಡ್ಯ : ಮಂಡ್ಯದಲ್ಲಿ ಸುಮಲತಾರಿಗೆ ನಮ್ಮನ್ನು ಎದುರಿಸುವ ಶಕ್ತಿ ಇಲ್ಲ. ಅಧಿಕಾರವಿಲ್ಲದೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ತುಮಕೂರಿನಲ್ಲಿ ಎಚ್. ಡಿ. ದೇವೇಗೌಡ ಪರ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸುಮಲತಾ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕುತಂತ್ರದ ಮೂಲಕ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಮಾಧು ಸ್ವಾಮಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ...
ರಾಜಕೀಯಸುದ್ದಿ

ಶರದ್ ಪವಾರ್ ಸೋಲಿನ ಭೀತಿಯಿಂದ ಸ್ಪರ್ಧಾ ಕಣದಿಂದ ದೂರ ಉಳಿದಿದ್ದಾರೆ: ನರೇಂದ್ರ ಮೋದಿ – ಕಹಳೆ ನ್ಯೂಸ್

ವಾಧ್ರಾ - ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಸಂಸ್ಥಾಪಕ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ದುರ್ಬಲ ನಾಯಕರಾಗಿದ್ದು ಪಕ್ಷದ ಹಿಡಿತ ಅವರ ಕೈ ತಪ್ಪುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮಹಾರಾಷ್ಟ್ರದಲ್ಲಿ ವಾಧ್ರಾದಲ್ಲಿಂದು ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷದ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶರದ್ ಪವಾರ್ ಮಹಾರಾಷ್ಟ್ರದ ಜನಪ್ರಿಯ ನಾಯಕರೇ ಆಗಿದ್ದರೇ...
ರಾಜಕೀಯಸುದ್ದಿ

ರಾಹುಲ್‍ಗಾಂಧಿಯು ಇನ್ನೊಬ್ಬರ ವಿರುದ್ಧ ಸುಳ್ಳು, ಆಧಾರರಹಿತ ಆರೋಪ ಮಾಡುವುದೇ ಅಭ್ಯಾಸವಾಗಿದೆ: ಯಡಿಯೂರಪ್ಪ – ಕಹಳೆ ನ್ಯೂಸ್

ಬೆಳಗಾವಿ - ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಹಣ ನೀಡಿರುವುದು ಸಾಬೀತಾದರೆ ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಯ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಡೈರಿ ಬಗ್ಗೆ ಈಗಾಗಲೇ ಐಟಿ ಅಧಿಕಾರಿಗಳೇ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಹುಲ್‍ಗಾಂಧಿ ಪ್ರಚಾರಕ್ಕಾಗಿ ನನ್ನ ವಿರುದ್ದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಹಣ ನೀಡಿದ್ದೇನೆ...
1 183 184 185 186 187 232
Page 185 of 232