Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಮೀರತ್‌ನಲ್ಲಿ ಬೃಹತ್ ರ್ಯಾಲಿ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – ಕಹಳೆ ನ್ಯೂಸ್

ಮೀರತ್ : ''ಭಾರತದ 130 ಕೋಟಿ ಜನರು ಈಗಿನ ಸರಕಾರವನ್ನೇ ಮತ್ತೆ ಚುನಾಯಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಈ ಬಾರಿಯ ಚುನಾವಣೆಯು ಚೌಕೀದಾರ್(ಕಾವಲುಗಾರ)ಹಾಗೂ ದಾಗ್‌ದಾರ್(ಭ್ರಷ್ಟ)ನಡುವಿನ ಹೋರಾಟವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಪ್ರದೇಶದ ಮೀರತ್‌ನಲ್ಲಿ ಗುರುವಾರ ಬೃಹತ್ ರ್ಯಾಲಿ ನಡೆಸುವ ಮೂಲಕ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು. ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿರುವ ದಿಲ್ಲಿಯಿಂದ 70 ಕಿ.ಮೀ. ದೂರದಲ್ಲಿರುವ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಆರಂಭಿಸಲಾಗಿದೆ. ನಾನು...
ರಾಜಕೀಯಸುದ್ದಿ

ಬಿಗ್ ನ್ಯೂಸ್: ‘ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ’ ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು: ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಇದೀಗ ಬಿಜೆಪಿ ಸಹ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಿಲೀಸ್ ಮಾಡಿದೆ. ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿಜೆಪಿಯ 36 ಮಮದಿ ಘಟಾನುಘಟಿ ನಾಯಕರ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್, ವಿ.ಶ್ರೀನಿವಾಸ್ ಪ್ರಸಾದ್, ಬಿ.ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ,...
ರಾಜಕೀಯಸುದ್ದಿ

ನಟಿ ಜಯಪ್ರದ ಅಧಿಕೃತವಾಗಿ ಬಿಜೆಪಿ ಸೇರ್ಪಡೆ – ಕಹಳೆ ನ್ಯೂಸ್

ಬೆಂಗಳೂರು: ಬಹುಭಾಷಾ ನಟಿ ಜಯಪ್ರದಾ ಸದ್ಯ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇಂದು ದೆಹಲಿಯಲ್ಲಿ ಬಿಜೆಪಿ ಮುಖಂಡ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ ಈ ನಟಿ. ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಯಲ್ಲಿ ಜಯಪ್ರದಾ ಸೇರ್ಪಡೆಯಾಗಿದ್ದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ. ಸ್ಟಾರ್ ನಟರ ಜೊತೆ ನಟಿಸಿ ಮನೆ ಮಾತಾಗಿದ್ದ ನಟಿ ಜಯಪ್ರದಾ ಇದೀಗ ಕಮಲ ಪಾಳಯದಲ್ಲಿದ್ದಾರೆ. ಎಂಪಿಯಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಈ ನಟಿ ಇದೀಗ ಮತ್ತೆ ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ...
ರಾಜಕೀಯಸುದ್ದಿ

ಮತ್ತೆ ಮೋದಿಯವರನ್ನು ಪ್ರಧಾನ ಮಂತ್ರಿ ಆಗುವಂತೆ ಮಾಡುವುದು ನಮ್ಮ ಕರ್ತವ್ಯ: ರೂಪಾಲಿ ನಾಯ್ಕ – ಕಹಳೆ ನ್ಯೂಸ್

ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕಿನ ಶಿರಗುಂಜಿ, ಹೊನ್ನಳ್ಳಿ, ಅಗಸೂರಿನ ಸರಳೆಬೈಲ್, ವಾಸರೆ, ವಾಸರಕುದ್ರಿಗಿಯ ಕೋಡ್ಸಣಿ, ಸುಂಕಸಾಳದ ಹೆಬ್ಬುಳ ಬಿಜೆಪಿ ಬೂತ್ ಕಮಿಟಿ ಕಾರ್ಯಕರ್ತರ ಸಭೆಯನ್ನು ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರು ಭಾನುವಾರ ಕೈಗೊಂಡರು. ಈ ವೇಳೆ ಮಾತನಾಡಿದ ಅವರು, "ಸುಳ್ಳು ಭರವಸೆಗಳನ್ನು ಕೊಟ್ಟು ಹೋಗುವವಳು‌ ನಾನಲ್ಲ. ಈ ಐದು ವರ್ಷಗಳಲ್ಲಿ ಏನೂ ಸಾಧನೆ ಮಾಡದೇ ನಿಮ್ಮ ಮುಂದೆ ಮತ್ತೆ ಮತ ಕೇಳಲು ನಾನು ಬರುವುದಿಲ್ಲ. ನನ್ನ...
ರಾಜಕೀಯಸುದ್ದಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಯುವ ನ್ಯಾಯವಾದಿ ತೇಜಸ್ವಿ ಸೂರ್ಯ ಆಯ್ಕೆ – ಕಹಳೆ ನ್ಯೂಸ್

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಸರತ್ತು ಕೊನೆಗೂ ಅಂತ್ಯ ಕಂಡಿದ್ದು, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುವ ನ್ಯಾಯವಾದಿ ತೇಜಸ್ವಿ ಸೂರ್ಯ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಳೆದ ಕೆಲದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಆದರೆ ಈ ಕ್ಷೇತ್ರದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಅನಂತ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್...
ರಾಜಕೀಯಸುದ್ದಿ

ಆಂಧ್ರ ಪ್ರದೇಶದ ಅರಾಕು ಲೋಕಸಭೆಯಲ್ಲಿ ತಂದೆ ಮತ್ತು ಮಗಳ ನಡುವೆ ಜಿದ್ದಾಜಿದ್ದಿ – ಕಹಳೆ ನ್ಯೂಸ್

ಈ ಲೋಕಸಭಾ ಕ್ಷೇತ್ರದಲ್ಲಿ ತಂದೆ ಮತ್ತು ಮಗಳ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಆಂಧ್ರ ಪ್ರದೇಶದ ಅರಾಕು ಲೋಕಸಭೆಯಲ್ಲಿ ತಂದೆ ಮತ್ತು ಮಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಮಗಳು ಶ್ರುತಿ ದೇವಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದರೆ ತಂದೆ ವೈರಿಚರ್ಲಾ ಕಿಶೋರ್ ಚಂದ್ರದೇವ್ ತೆಲಗು ದೇಶಂ ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ವೈರಿಚರ್ಲಾ ಕಿಶೋರ್ ತಿಂಗಳ ಹಿಂದಷ್ಟೆ ಕಾಂಗ್ರೆಸ್ ತೊರೆದು ಟಿಡಿಪಿ ಸೇರಿದ್ದರು. ಆರು ಬಾರಿ ಸಂಸತ್ ಪ್ರವೇಶ ಮಾಡಿದ್ದ ಕಿಶೋರ್...
ರಾಜಕೀಯಸುದ್ದಿ

ಡಿ ವಿ ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ನಾಮಪತ್ರ ಸಲ್ಲಿಸಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ. ಮೈಸೂರು ಬ್ಯಾಂಕ್ ವೃತ್ತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಡಿವಿಎಸ್ಗೆ ಬಿಜೆಪಿ ನಾಯಕರು ಬೆಂಬಲ ನೀಡಿದರು. ತೆರೆದ ವಾಹನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಿ.ವಿ ಸದಾನಂದಗೌಡ ಕಳೆದ ಐದು ವರ್ಷ ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿರುವೆ. ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿ ಅಂತಾಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೇಂದ್ರ ಸಚಿವ ಡಿ.ವಿ...
ರಾಜಕೀಯಸುದ್ದಿ

ಬಿಜೆಪಿ ಅಧ್ಯಕ್ಷ ಯಡಿಯೂರಪ್ಪರನ್ನು ಭೇಟಿಯಾದ ಸುಮಲತಾ ಅಂಬರೀಶ್ – ಕಹಳೆ ನ್ಯೂಸ್

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾಲರ್ಸ್ ಕಾಲನಿ ನಿವಾಸದಲ್ಲಿ ಭೇಟಿಯಾದರು. ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಸುಮಲತಾ, ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬೆಂಬಲಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಥ್ಯಾಂಕ್ಸ್ ಹೇಳಿ ಆಶೀರ್ವಚನ ಪಡೆಯಲು ಬಂದಿದ್ದೇನೆ. ಪ್ರಚಾರಕ್ಕೆ ಬರುವ ಕುರಿತಂತೆ ಅವರೊಂದಿಗೆ ಯಾವುದೇ ಮಾತುಕತೆ ಮಾಡಿಲ್ಲ ಎಂದರು. ಬಿಜೆಪಿಯವರು ನಮಗೆ ಬೇಷರತ್ ಬೆಂಬಲ ಕೊಟ್ಟಿದ್ದಾರೆ. ನಾವು ಅಂಬರೀಶ್ ಮೇಲಿನ...
1 185 186 187 188 189 232
Page 187 of 232