ಪ್ರಧಾನಿ ನರೇಂದ್ರ ಮೋದಿ ಸುಮಲತಾ ಹೆಸರು ಪ್ರಸ್ತಾಪ – ಬಿಜೆಪಿ ಪರ ಎಂದು ಬಿಂಬಿತವಾದ ಸುಮಲತಾ ಅಂಬರೀಶ್ – ಕಹಳೆ ನ್ಯೂಸ್
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪಾರಂಭವಾಗಿದ್ದು, ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತ್ತೋದು ಕೋಲಾಹಲವೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ತಮ್ಮ ಮೈಸೂರು ಚುನಾವಣಾ ಪ್ರಚಾರದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿರುವುದು ಎಲ್ಲ ಪಕ್ಷದ ನಾಯಕರಿಗೂ ಅಚ್ಚರಿ ತಂದಿತ್ತು. ಈಗ ಇದೇ ನಡೆ ಸುಮಲತಾ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಗೂ ಕಾರಣವಾಗಲಿದೆ ಎನ್ನಲಾಗುತ್ತಿದೆ. ಜಾತ್ಯಾತೀತ ಜನತಾದಳ...







