Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಸಿಎಸ್ ಶಿವಳ್ಳಿ ನೆನೆದು ಕಣ್ಣೀರಿಟ್ಟ ಸಚಿವ ಡಿ.ಕೆ.ಶಿವಕುಮಾರ್ – ಕಹಳೆ ನ್ಯೂಸ್

ಹುಬ್ಬಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶಿವಳ್ಳಿ ಪತ್ನಿ, ಕುಸುಮಾ ಶಿವಳ್ಳಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅದ್ರಂತೆ ಇಂದು ಇಂಗಳಗಿ ಗ್ರಾಮದಲ್ಲಿ ಪ್ರಚಾರ ನಡೆಸ್ತಿದ್ದಾಗ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ನೆನೆದು ಭಾವುಕರಾದು. ಪ್ರಚಾರದ ವೇಳೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಸಿ.ಎಸ್.ಶಿವಳ್ಳಿ ಜಾತಿ ಧರ್ಮ ಭೇದ ಭಾವ ಮಾಡಿಲ್ಲ. ಆತ ನಿಮಗೆ ಯಾವತ್ತೂ ಕಿರುಕುಳ ನೀಡಿದ್ನಾ ಅಂತಾ ನೀವೇ ಹೇಳಿ. ಪಾಪ ಶಿವಳ್ಳಿ...
ರಾಜಕೀಯಸುದ್ದಿ

ನನಗೆ ಸಿಎಂ ಆಗೋ ಯಾವ ಆಸೆಯೂ ಇಲ್ಲ, ಯೋಗ ಬಂದ್ರೆ ಯಾರೂ ತಡೆಯೋಕಾಗಲ್ಲ’ – ಕಹಳೆ ನ್ಯೂಸ್

ಬೆಂಗಳೂರು: ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಮಂತ್ರಿಯಾಗಿದ್ದೇ ಸಾಕು ನನಗೆ, ಇದರಲ್ಲೇ ಒಳ್ಳೆಯ ಕೆಲಸ ಮಾಡುತ್ತೇನೆ ಅಂತಾ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿರೋ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಹೆಚ್‍ಡಿ ರೇವಣ್ಣ, ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಅಂತಹ ಯೋಗ ಬಂದಾಗ ಅದನ್ನು ಯಾರೂ ತಡೆಯೋಕಾಗಲ್ಲ ಎಂದರು. ನನ್ನದು ಸ್ವಾತಿ ನಕ್ಷತ್ರ. ನನಗೆ ಮಾಟ ಮಂತ್ರ ಮಾಡಲು...
ರಾಜಕೀಯಸುದ್ದಿ

ಗೂಂಡಾಗಿರಿ ಮಾಡಲು ಇದು ಕನಕಪುರ ಅಲ್ಲ, ನಮ್ಮ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ; ಡಿಕೆಶಿಗೆ ಜಗದೀಶ್​ ಶೆಟ್ಟರ್ ಎಚ್ಚರಿಕೆ – ಕಹಳೆ ನ್ಯೂಸ್

ಹುಬ್ಬಳ್ಳಿ: ಬಾಲಾಕೋಟ್ ಏರ್ ಸ್ಟ್ರೈಕ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಸಾಕ್ಷ್ಯ ಕೇಳುತ್ತಿದ್ದರು. ಇಟಲಿಯ ಪತ್ರಕರ್ತತು ಈ ಬಗ್ಗೆ ತನಿಖಾ ವರದಿ ಪ್ರಕಟಿಸಿ, 120 ಉಗ್ರರ ಹತ್ಯೆ ಆಗಿದೆ ಎಂದು ಖಾತ್ರಿ ಪಡಿಸಿದ್ದಾರೆ. ಸೋನಿಯಾ ಗಾಂಧಿ ಅವರ ದೇಶದ ಪತ್ರಕರ್ತರೇ ಸಂಶೋಧನೆ ಮಾಡಿದ್ದಾರೆ. ಸೈನಿಕರಿಗೆ ಅಪಮಾನ ಮಾಡುವ ಪದ್ಧತಿಯನ್ನು ಕಾಂಗ್ರೆಸ್ ಕೈ ಬಿಡಬೇಕು ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ರಾಹುಲ್ ಗಾಂಧಿ...
ರಾಜಕೀಯಸುದ್ದಿ

ಮೋದಿ ಮತ್ತುಯೋಗಿ ಆದಿತ್ಯನಾಥ್‌ ಅವರನ್ನು ಅಧಿಕಾರದಿಂದ ಇಳಿಸುವವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ: ಬಿಎಸ್‌ಪಿ ಅಧಿನಾಯಕಿ ಮಾಯಾವತಿ – ಕಹಳೆ ನ್ಯೂಸ್

ಅಝಂಗಡ : ನರೇಂದ್ರ ಮೋದಿ ಮತ್ತುಯೋಗಿ ಆದಿತ್ಯನಾಥ್‌ ಅವರನ್ನು ಅಧಿಕಾರದಿಂದ ಇಳಿಸುವವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಬುಧವಾರ ಹೇಳಿಕೆ ನೀಡಿದ್ದಾರೆ. ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಅವರು ಕಣಕ್ಕಿಳಿದಿರುವ ಅಝಂಗಡದಲ್ಲಿ ಚು ನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ನೀವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಮೈತ್ರಿಯನ್ನು ಮುರಿಯಲು ಸಾಧ್ಯವಿಲ್ಲ. ಸುಧೀರ್ಘ‌ ಹಾದಿಯಲ್ಲಿ ಮೈತ್ರಿ ಸಾಗಬೇಕಾಗಿದೆ. ನಾವು ಮೈತ್ರಿಯನ್ನು ಕೇವಲ ಮೋದಿ ವಿರುದ್ಧ ಮಾಡಿಲ್ಲ....
ರಾಜಕೀಯಸುದ್ದಿ

ವಿಹಾರಕ್ಕೆ ಯುದ್ಧ ನೌಕೆಯನ್ನು ಬಳಸಿದ್ದ ರಾಜೀವ್ ಗಾಂಧಿ: ಪ್ರಧಾನಿ ನರೇಂದ್ರ ಮೋದಿ ಹೊಸ ಆರೋಪ – ಕಹಳೆ ನ್ಯೂಸ್

ಹೊಸದಿಲ್ಲಿ : ಭಾರತದ ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆ ವಿಶೇಷ ದ್ವೀಪಕ್ಕೆ ವಿಹಾರಕ್ಕಾಗಿ ತೆರಳಲು ವೈಯಕ್ತಿಕ ಟ್ಯಾಕ್ಸಿಯಾಗಿ ಬಳಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಆರೋಪ ಮಾಡಿದ್ದಾರೆ. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಸಾಗರ ಗಡಿಯನ್ನು ಕಾಯಲು ನಿಯೋಜಿಸಿದ್ದ ಈ ವಿಶೇಷ ಹಡಗನ್ನು ವಾಪಸ್ ಕರೆಸಿಕೊಂಡು 10 ದಿನಗಳ ಕಾಲ ಗಾಂಧಿ...
ರಾಜಕೀಯಸುದ್ದಿ

ಪ್ರಚಾರ ಕಾರ್ಯದಲ್ಲಿ ಕೈ ನಾಯಕರು ಗೈರು : ಕಾಂಗ್ರೆಸ್ ಹೈಕಮಾಂಡ್ ಫುಲ್ ಗರಂ – ಕಹಳೆ ನ್ಯೂಸ್

ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು. ಪ್ರಚಾರ ಕಾರ್ಯವನ್ನ ನಡೆಸುವ ಯೋಚನೆಯನ್ನು ರಾಜಕೀಯ ಪಕ್ಷಗಳು ಮಾಡಿಕೊಂಡಿದೆ. ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಗೈರು ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗೆ ಯಾರು ಗೈರಾಗಿದ್ದಾರೆ. ಅವರು ಯಾಕೆ ಪ್ರಚಾರಕ್ಕೆ ಬಂದಿಲ್ಲ...
ರಾಜಕೀಯಸುದ್ದಿ

ನಾಳೆ ತೇಜ್ ಬಹದೂರ್ ಅರ್ಜಿ ಪರಿಶೀಲನೆ – ಕಹಳೆ ನ್ಯೂಸ್

'ನನ್ನ ನಾಮ ಪತ್ರವನ್ನು ತಪ್ಪಾಗಿ ರದ್ದುಗೊಳಿಸಲಾಗಿದೆ. ಎಲ್ಲ ಪುರಾವೆಗಳನ್ನು ಸಲ್ಲಿಸಿದಾಗಲು ಕೂಡ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದ್ದರಿಂದ ಇದನ್ನು ಪ್ರಶ್ನಿಸಿ ನಾನು ಸುಪ್ರೀಂಕೋರ್ಟ್ ಗೆ ಹೋಗುತ್ತೇನೆ 'ಎಂದು ಯೋಧ ತೇಜ್ ಬಹದೂರ್ ಯಾದವ್ ತಿಳಿಸಿದ್ದರು. ಇವರು ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದ್ದು ಅದಕ್ಕೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಆಯೋಗಕ್ಕೆ ಇಂದು ತಿಳಿಸಿದೆ. ಪ್ರಧಾನಿ ಮೋದಿಯವರನ್ನು ಸುಲಭವಾಗಿ ಗೆಲ್ಲಿಸುವ ನಿಟ್ಟಿನಲ್ಲಿ ತಮ್ಮ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ...
ರಾಜಕೀಯಸುದ್ದಿ

ಚೌಕಿದಾರ್ ಚೋರ್ ಹೇಳಿಕೆ: ಬೇಷರತ್ ಕ್ಷಮೆ ಕೋರಿದ ರಾಹುಲ್ ಗಾಂಧಿ – ಕಹಳೆ ನ್ಯೂಸ್

ನವದೆಹಲಿ: “ಚೌಕಿದಾರ್ ಚೋರ್ ಹೇ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ” ಅಂತ ಹೇಳಿಕೆ ನೀಡಿ ನೋಟಿಸ್ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್ ಸಲ್ಲಿಸಿರೋ ರಾಹುಲ್ ಬೇಷರತ್ ಕ್ಷಮೆ ಕೋರಿದ್ದಾರೆ. ಸುಪ್ರೀಂ ಕೋರ್ಟ್‍ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಎಂದು ರಾಹುಲ್ ಗಾಂಧಿ ಅಫಿಡವಿಟ್‍ನಲ್ಲಿ ಹೇಳಿದ್ದಾರೆ. ರಫೇಲ್ ಆದೇಶಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಅಮೇಥಿಯಲ್ಲಿ...
1 177 178 179 180 181 232
Page 179 of 232