ಕೂಡಲೇ ಮನೆ ಖಾಲಿ ಮಾಡಿ: 1.5 ತಿಂಗಳಾದರೂ ಸರ್ಕಾರಿ ಮನೆ ಮರಳಿಸದ ಮಾಜಿ ಡಿಸಿಎಂ – ಪರಮೇಶ್ವರ್ ಗೆ ಬಿಡಿಎ ನೋಟಿಸ್ – ಕಹಳೆ ನ್ಯೂಸ್
ಬೆಂಗಳೂರು : ಅವಧಿ ಮುಗಿದ ನಂತರವೂ ಸರ್ಕಾರಿ ನಿವಾಸ ಖಾಲಿ ಮಾಡದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ವಾರದೊಳಗೆ ನಿವಾಸ ಖಾಲಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೋಟಿಸ್ ಜಾರಿಗೊಳಿಸಿದೆ. ರಾಜ್‍ಮಹಲ್ ವಿಲಾಸ 2ನೇ ಹಂತದ ಸದಾಶಿವನಗರದಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಗೃಹ (94/ಎ)ವನ್ನು ಬಾಡಿಗೆ ಆಧಾರದ ಮೇಲೆ ಸರ್ಕಾರಕ್ಕೆ ಹಂಚಿಕೆ ಮಾಡಲಾಗಿದೆ. ಸದರಿ ವಸತಿ ಗೃಹವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕಚೇರಿ ಉಪಯೋಗಕ್ಕಾಗಿ...







