Sunday, September 6, 2026

ಹಾಸನ

ಸುದ್ದಿಹಾಸನ

ಸಾರಿಗೆ ಬಸ್, ಪಿಕಪ್ ವಾಹನದ ನಡುವೆ ಭೀಕರ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಾಯ – ಕಹಳೆ ನ್ಯೂಸ್

ಹಾಸನ: ಸಾರಿಗೆ ಬಸ್ ಹಾಗೂ ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ  ತಾಲೂಕಿನ ಮಾರನಹಳ್ಳಿ ಸಮೀಪ ನಡೆದಿದೆ. ದಿನೇಶ್ (38) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಹಾಗೂ ದುರ್ಗಾಪ್ರಸಾದ್ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಬೊಲೆರೋ ಪಿಕಪ್ ವಾಹನ ಎಟಿಎಂಗಳಿಗೆ ಹಣ ತುಂಬಲು ಬರುತ್ತಿತ್ತು. ಈ ವೇಳೆ ಮಂಗಳೂರಿನಿಂದ...
ಜಿಲ್ಲೆಸುದ್ದಿಹಾಸನ

ಪೊಲೀಸ್‌ ಜೀಪ್‌ ಬೆನ್ನಟ್ಟಿದ ಪುಂಡಾನೆ : ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐ – ಕಹಳೆ ನ್ಯೂಸ್

ಹಾಸನ: ಕಾಡಾನೆ  ಸೆರೆ ಕಾರ್ಯಾಚರಣೆ ವೇಳೆ ಪೊಲೀಸ್   ಜೀಪನ್ನು ಒಂಟಿ ಸಲಗ ಅಟ್ಟಾಡಿಸಿದ ಘಟನೆ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಬೇಡಿ ಎಸ್ಟೇಟ್‌ ಬಳಿ ನಡೆದಿದೆ. ಜೀಪಿನಲ್ಲಿದ್ದ ಪಿಎಸ್‌ಐ ಶೋಭಾ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ಯಾಚರಣೆಯ ಭದ್ರತೆಗಾಗಿ ಅರೆಹಳ್ಳಿ ಪಿಎಸ್‌ಐ ಶೋಭಾ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ, ಕಾಡಾನೆ ರಸ್ತೆ ದಾಟುವಾಗ ಅಲ್ಲಿದ್ದ ಪಿಎಸ್‌ಐ ಜೀಪ್‌ನ್ನು ಅಟ್ಟಾಡಿಸಿದೆ. ಬಳಿಕ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ...
ಜಿಲ್ಲೆಸುದ್ದಿಹಾಸನ

ಕಾರಿನ ಮೇಲೆ ಕಾಡಾನೆ ದಾಳಿ – ಚಾಲಕನ ಸಮಯಪ್ರಜ್ಞೆಯಿಂದ ಕುಟುಂಬ ಪಾರು – ಕಹಳೆ ನ್ಯೂಸ್

ಹಾಸನ: ಬೇಲೂರಿನ  ದೋಲನಮನೆ ಗ್ರಾಮದಲ್ಲಿ ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಮಹಮ್ಮದ್ ಜಾಹಿದ್ ಎಂಬವರು ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬದೊಂದಿಗೆ ಸೋಮವಾರ ಮಧ್ಯರಾತ್ರಿ ವೇಳೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾರಿನ ಹಿಂಭಾಗ ಕಾಡಾನೆ ದಾಳಿಯಿಂದ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಮಹಮ್ಮದ್ ಜಾಹಿದ್ ತಾಯಿ, ಅಕ್ಕ ಅವರ ಮಕ್ಕಳು ಕಿರುಚಾಡಿದ್ದಾರೆ. ಆದರೂ ಸ್ಥಳದಿಂದ ಕದಲದ...
ಜಿಲ್ಲೆಸುದ್ದಿಹಾಸನ

ಸಕಲೇಶಪುರದಲ್ಲಿ ಆಫ್ ರೋಡ್ ಪುಂಡಾಟ: ಬೆಂಗಳೂರಿನ 7 ಥಾರ್ ಜಪ್ತಿ – ಕಹಳೆ ನ್ಯೂಸ್

ಹಾಸನ: ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್‌) ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿ ಏಳು ಮಹೀಂದ್ರ ಥಾರ್‌  ಜೀಪ್‌ಗಳಲ್ಲಿ ಆಫ್ ರೋಡ್  ಸಾಹಸ ನಡೆಸುತ್ತಿದ್ದ ಬೆಂಗಳೂರಿನ  ಪ್ರವಾಸಿಗರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ಏಳು ಜೀಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ತಂಡವು ಹೊಡಚಳ್ಳಿ ಗ್ರಾಮದ ಸರ್ವೆ ಸಂಖ್ಯೆ 20, 21 ಹಾಗೂ 28ರ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿತ್ತು....
ಜಿಲ್ಲೆರಾಜ್ಯಸುದ್ದಿಹಾಸನ

ಟೋಲ್‌ ಸಿಬ್ಬಂದಿಗೆ ಗನ್‌, ಲಾಂಗ್‌ ತೋರಿಸಿ ಬೆದರಿಕೆ : ಸುಂಕ ಕಟ್ಟದೆ ಬ್ಯಾರಿಯರ್‌ಗೆ ಕಾರು ಗುದ್ದಿಸಿಕೊಂಡು ಹೋದ ಪುಂಡರು – ಕಹಳೆ ನ್ಯೂಸ್

ಹಾಸನ: ಆಲೂರಿನ ಚೌಲಗೆರೆ ಟೋಲ್‌ನಲ್ಲಿ  ಹಣ ಕೇಳಿದ್ದಕ್ಕೆ ಪುಂಡರ ಗ್ಯಾಂಗ್‌ ಸಿಬ್ಬಂದಿಗೆ ಗನ್, ಲಾಂಗ್ ತೋರಿಸಿ ಬೇದರಿಕೆ ಹಾಕಿದ ಘಟನೆ ನಡೆದಿದೆ. ಮಾರುತಿ 800 ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಟೋಲ್‌ನಲ್ಲಿ ಅವರ ಬಳಿ ಸಿಬ್ಬಂದಿ ಸುಂಕ ಕೇಳಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಪುಂಡರು, ಸುಂಕ ಕಟ್ಟುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಬ್ಯಾರಿಯರ್‌ ತೆಗೆಯುವಂತೆ ಅವಾಚ್ಯ ಶಬ್ದಗಳಿಂದ ಟೋಲ್ ಸಿಬ್ಬಂದಿಗೆ ನಿಂದಿಸಿ, ಗನ್‌ ಹಾಗೂ ಲಾಂಗ್‌ ತೋರಿಸಿ ಬೆದರಿಸಿದ್ದಾರೆ....
ಜಿಲ್ಲೆದಕ್ಷಿಣ ಕನ್ನಡಸುದ್ದಿಹಾಸನ

ಇಂದು ದೇವೇಗೌಡರ ಪತ್ನಿ ಚೆನ್ನಮ್ಮ ಉತ್ತರ ಕ್ರಿಯಾದಿ ಕಾರ್ಯ – ಕಹಳೆ ನ್ಯೂಸ್

ಹಾಸನ: ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ  ಧರ್ಮಪತ್ನಿ ಚೆನ್ನಮ್ಮ  ಅವರ ಉತ್ತರ ಕ್ರಿಯಾದಿ ಕಾರ್ಯ ನೆರವೇರಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ  ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ತಿಥಿ ಕಾರ್ಯ ನಡೆಯಲಿದೆ. ಕುಟುಂಬಸ್ಥರು 11ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಒಕ್ಕಲಿಗ ಸಂಪ್ರದಾಯದ ಮುಳ್ಳುಗೌಡ ಪರಂಪರೆಯಂತೆ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದ್ದು, ಇಂದು ಬೆಳಿಗ್ಗೆ 10-30 ಕ್ಕ ಕುಟುಂಬ ಸದಸ್ಯರಿಂದ ಪೂಜೆ ನೆರವೇರಲಿದೆ....
ಜಿಲ್ಲೆಸುದ್ದಿಹಾಸನ

ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ – 15 ಲಕ್ಷ ಮೌಲ್ಯದ ಮದ್ಯ ಮಣ್ಣುಪಾಲು – ಕಹಳೆ ನ್ಯೂಸ್

ಹಾಸನ: ಇಲ್ಲಿನ ದೊಡ್ಡಪುರ ಗ್ರಾಮದ ಬಳಿ ಬಿಯರ್ (Beer) ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ (Hassan) ನಗರದ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ತುಂಬಿದ ಲಾರಿ ತೆರಳುತ್ತಿತ್ತು. ದೊಡ್ಡಪುರ ಗ್ರಾಮದ ಬಳಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ. ಲೆಜೆಂಡ್, ರಾಯಲ್, ಪವರ್ ಕೂಲ್, ಸನ್ನಿ...
ಜಿಲ್ಲೆಹಾಸನ

ಭೀಮನ ಮೇಲೆ ಕಲ್ಲು ತೂರಾಟ : ಅಸ್ಸಾಂ ಮೂಲದ ಪುಂಡನ ವಿರುದ್ಧ ಸ್ಥಳೀಯರು ಗರಂ – ಕಹಳೆ ನ್ಯೂಸ್

ಹಾಸನ: ಜನರ ಅಚ್ಚುಮೆಚ್ಚಿನ ಕಾಡಾನೆ ಭೀಮನ ಮೇಲೆ ಅಸ್ಸಾಂ ಮೂಲದ ಕಾರ್ಮಿಕನೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ಸಕಲೇಶಪುರದ ಒಸ್ಸೂರು ಎಸ್ಟೇಟ್‌ನಲ್ಲಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಭೀಮ ಘೀಳಿಟ್ಟು ಕಾರ್ಮಿಕನತ್ತ ನುಗ್ಗಲು ಯತ್ನಿಸಿದೆ. ಅಸ್ಸಾಂನಿಂದ ಬಂದ ಕಾರ್ಮಿಕ ನೆಲೆಸಿದ್ದ ಲೈನ್‌ ಮನೆಗಳ ಬಳಿ ಇಂದು (ಜು.14) ಬೆಳಿಗ್ಗೆ ಕಾಡಾನೆ ಭೀಮ ಸಾಗುತ್ತಿತ್ತು. ಈ ವೇಳೆ ಕಾಡಾನೆಗೆ ಕಲ್ಲುಗಳಿಂದ ಹೊಡೆದು ಹುಚ್ಚಾಟ ಪ್ರದರ್ಶಿಸಿದ್ದಾನೆ. ಪದೇ ಪದೇ ಕಲ್ಲು ತೂರಿ ಕೀಟಲೆ...
1 2 3 15
Page 1 of 15