Sunday, September 27, 2026
ಜಿಲ್ಲೆಸುದ್ದಿಹಾಸನ

ಹಾಸನದಲ್ಲಿ ನವವಿವಾಹಿತೆ ನಿಗೂಢ ನಾಪತ್ತೆ ಕೇಸ್ : 8 ದಿನಗಳ ಬಳಿಕ ಹೇಮಾವತಿ ನಾಳೆಯಲ್ಲಿ ಮೃತದೇಹ ಪತ್ತೆ! – ಕಹಳೆನ್ಯೂಸ್

ಹಾಸನ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಹಾಗೂ ಅನುಮಾನಕ್ಕೆ ಕಾರಣವಾಗಿದ್ದ ನವವಿವಾಹಿತೆ ಪ್ರಿಯಾಂಕಾ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ದುರಂತಾಂತ್ಯ ಕಂಡಿದೆ. ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದ ಪ್ರಿಯಾಂಕಾ ಅವರ ಮೃತದೇಹ ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಬಳಿ ಇರುವ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ ಬಳಿಕ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೆಪ್ಟೆಂಬರ್ 19ರ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ಪ್ರಿಯಾಂಕಾ ಅವರು ಪತಿ ರಾಜಶೇಖರ್ ಕಣ್ಣೆದುರಲ್ಲೇ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು. ಘಟನೆ ನಡೆದ ದಿನದಿಂದಲೂ ಪ್ರಿಯಾಂಕಾ ಅವರ ಪತ್ತೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 8 ದಿನಗಳಿಂದ ನಾಲೆಯಲ್ಲಿ ಸುದೀರ್ಘ ಹುಡುಕಾಟ ನಡೆಸಿದ್ದರು. ಪ್ರಿಯಾಂಕಾ ಸಾವು ಎರಡೂ ಕುಟುಂಬಗಳ ನಡುವೆ ಭಾರಿ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಪ್ರಿಯಾಂಕಾ ಅವರ ಪೋಷಕರು ಇದು ಆತ್ಮಹತ್ಯೆಯಲ್ಲ, ಪತಿ ರಾಜಶೇಖರನೇ ಆಕೆಯನ್ನು ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ರಾಜಶೇಖರ್ ಪೋಷಕರು ಈ ಆರೋಪವನ್ನು ಅಲ್ಲಗಳೆದಿದ್ದು, ಪ್ರಿಯಾಂಕಾಗೆ ಮೊದಲೇ ಮದುವೆಯಾಗಿತ್ತು ಹಾಗೂ ಆಕೆಗೆ ಈಜು ಕೂಡ ಬರುತ್ತಿತ್ತು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸದ್ಯ ಮೃತದೇಹ ಸಿಕ್ಕಿರುವುದರಿಂದ ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.