ಕಾಪು ಕ್ಷೇತ್ರದ ‘ಸುರೇಶ್ ಶೆಟ್ಟಿ ಜಾತಿಧರ್ಮಗಳ ಭೇದವಿಲ್ಲದ ಸಜ್ಜನ ರಾಜಕಾರಣಿ’ ; ಕಾಪುವಿನ ನಾನಾ ಕಡೆಗಳಲ್ಲಿ ಮತಯಾಚನೆಯಲ್ಲಿ ಪಾಲ್ಗೊಂಡ ಪ್ರಮೋಧ್ ಮಧ್ವರಾಜ್ – ಕಹಳೆ ನ್ಯೂಸ್
ಕಾಪು, ಏ 01 : ಕಾಪು ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಜಾತಿಧರ್ಮಗಳ ಭೇದವಿಲ್ಲದ ಪರೋಪಕಾರಿ ಸಜ್ಜನ ರಾಜಕಾರಣಿ. ಕ್ಷೇತ್ರದಲ್ಲಿ ಅವರಿಂದ ಯಾರಿಗೂ ಎಂದೂ ತೊಂದರೆಯಾ ಗದು. ಕ್ಷೇತ್ರದಲ್ಲಿ ಜಾತಿ ಧರ್ಮಗಳ ಆಧಾರದಲ್ಲಿ ಮತ ಕೇಳುವವರನ್ನು ತಿರಸ್ಕರಿಸಿ ಗುರ್ಮಯವರ ಪರವಾಗಿ ಮತ ಚಲಾಯಿಸಿ ಎಂದು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಕಾಪುವಿನ ನಾನಾ ಕಡೆಗಳಲ್ಲಿ ಮತಯಾಚನೆಯಲ್ಲಿ ಪಾಲ್ಗೊಂಡು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4 ಹೊಸ ಅಭ್ಯರ್ಥಿಗಳನ್ನು...







