Tuesday, September 8, 2026

ಉಡುಪಿ

ಉಡುಪಿಜಿಲ್ಲೆಸುದ್ದಿ

ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ನೀರು ಪೂರೈಕೆ ಸ್ಥಗಿತದ ಎಚ್ಚರಿಕೆ -ಕಹಳೆ ನ್ಯೂಸ್

ಉಡುಪಿ : ಹಲವು ಬೇಡಿಕೆಗಳನ್ನು ಮುಂದಿಟ್ಟು ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿಗೆ ಇಳಿದಿದ್ದಾರೆ. ಉಡುಪಿ ನಗರಸಭೆ ಮುಂಭಾಗ ಇಂದು ಧರಣಿ ಆರಂಭಗೊಂಡಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು,ವಾಹನ ಚಾಲಕರು, ಸೂಪರ್‌ವೈಸರ್ಸ್‌, ಕಂಪ್ಯೂಟರ್ ಆಪರೇಟರ್ಸ್ ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನೇರ...
ಉಡುಪಿಜಿಲ್ಲೆಸುದ್ದಿ

ಗೃಹ ಮಂತ್ರಿಗಳೇ ಆಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಅಮಾಯಕರ ಜೀವ ಬಲಿ ಬೇಕು…? : ಅನ್ಸಾರ್ ಅಹಮದ್ ಉಡುಪಿ -ಕಹಳೆ ನ್ಯೂಸ್

ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮುಗಲಭೆ ನಡೆಯುತ್ತಿದ್ದು, ಅದೆಷ್ಟೋ ಅಮಾಯಕರು ಜೀವ ತೆತ್ತಿರುತ್ತಾರೆ. ಮೊನ್ನೆಯಷ್ಟೇ ಸುಹಾಸ್ ಶೆಟ್ಟಿಯವರ ಕೊಲೆ ನಡೆದಾಗ ಮಾನ್ಯ ಗೃಹ ಮಂತ್ರಿಗಳು ಇಂತಹ ಪ್ರಕರಣಗಳು ಮರುಕಳಿಸದಂತೆ ಆಂಟಿ ಕಮ್ಯುನಲ್ ಫೋರ್ಸ್ ರಚಿಸಲಾಗುವುದು ಎಂದು ಭರವಸೆ ನೀಡಿ ನೀಡಿದ್ದರು. ಆ ಘಟನೆ ನಡೆದ ನಂತರ ಈಗ ಇನ್ನೊಬ್ಬ ಅಮಾಯಕನ ಕೊಲೆ ನಡೆದಿದೆ. ಗೃಹ ಮಂತ್ರಿಗಳೇ ತಾವು ಹೇಳಿರುವ ಆಂಟಿ ಕಮ್ಯುನಲ್ ಫೋರ್ಸ್ ರಚಿಸಲು ಇನ್ನೆಷ್ಟು...
ಉಡುಪಿಸುದ್ದಿ

ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ, ವಿವಿಧೆಡೆ ಹಾನಿ – ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯಾದ್ಯಂತ ಶನಿವಾರವೂ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. ಉಡುಪಿ ನಗರ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಅಂಬಲಪಾಡಿ ಸರ್ವಿಸ್‌ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡಿದರು. ಕೊಡವೂರು ವಾರ್ಡಿನ ತೋಂದುಬೆಟ್ಟಿನಲ್ಲಿ ಭಾರಿ ಗಾಳಿ, ಮಳೆಗೆ ಗಿರಿಜಾ ಮಡಿವಾಳ್ತಿ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು. ಉಡುಪಿ ತಾಲ್ಲೂಕಿನ ಪೆರ್ಡೂರಿನ ಮುದ್ದು...
ಉಡುಪಿಜಿಲ್ಲೆಮೂಡಬಿದಿರೆಶಿಕ್ಷಣಸುದ್ದಿ

ಸಿಇಟಿ ಫಲಿತಾಂಶ : ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್-ಕಹಳೆ ನ್ಯೂಸ್

ಮೂಡುಬಿದಿರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ಶಿಶಿರ್ ಹೆಚ್ ಶೆಟ್ಟಿ ಇ೦ಜಿನಿಯರಿ೦ಗ್ ವಿಭಾಗದಲ್ಲಿ ೪ ನೇ ರ‍್ಯಾಂಕ್, ನೂತನ್ ಕೃಷ್ಣ ಬಿ ಬಿ ಎನ್ ವೈ ಎಸ್ ನಲ್ಲಿ ೪ ನೇ ರ‍್ಯಾಂಕ್, ಬಿ ಫಾರ್ಮ ಮತ್ತು ಫಾರ್ಮಾ ಡಿ ನಲ್ಲಿ ೫ ನೇ ರ‍್ಯಾಂಕ್, ಬಿ...
ಉಡುಪಿಕುಂದಾಪುರಜಿಲ್ಲೆಸುದ್ದಿ

ಎಸ್.ಎಸ್.ಎಲ್.ಸಿ.ಮರು ಮೌಲ್ಯ ಮಾಪನ: ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಗೆ ರಾಜ್ಯ ಮಟ್ಟದ 7 ರ್‍ಯಾಂಕ್-ಕಹಳೆ ನ್ಯೂಸ್

ಕುಂದಾಪುರ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ(ರಿ.) ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್‍ಯಾಂಕ್ ಗಳಿಸಿದ್ದಾಳೆ. ಮರು ಮೌಲ್ಯ ಮಾಪನದಲ್ಲಿ ಅಪೇಕ್ಷಾ ಎನ್. ಶೆಟ್ಟಿ ಮತ್ತು ಸುಖಿ ಎಸ್ ಶೆಟ್ಟಿ 620 ಅಂಕಗಳೊಂದಿಗೆ 6ನೇ ಸ್ಥಾನ, ಕನ್ನಿಕಾ 617 ಅಂಕ ಗಳಿಸಿ 9ನೇ ಸ್ಥಾನ ಪಡೆದಿರುತ್ತಾಳೆ.ಸಂಸ್ಥೆಯ ಪ್ರಾವ್ಯ ಪಿ.ಶೆಟ್ಟಿ 623...
ಉಡುಪಿಕ್ರೀಡೆಜಿಲ್ಲೆಸುದ್ದಿ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕಿ ಗೀತಾ ಎ ಶೆಟ್ಟಿ ಆಯ್ಕೆ -ಕಹಳೆ ನ್ಯೂಸ್

ಉಡುಪಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ 18,19, 20 ನೇ ಮೇ-2025 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣ ದಲ್ಲಿ ಜರುಗಿತ್ತು. ಈ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ಕನ್ನಡ ಭಾಷಾ ಶಿಕ್ಷಕಿ ಗೀತಾ ಆನಂದ ಶೆಟ್ಟಿ ಅವರು 100 ಮೀಟರ್ ಮತ್ತು 200...
ಉಡುಪಿಕುಂದಾಪುರಜಿಲ್ಲೆಸುದ್ದಿ

ಕುಂಭಾಸಿ: ಉಚಿತ ಕಿವಿಯ ಶ್ರವಣ ತಪಾಸಣೆ ; ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ-ಕಹಳೆ ನ್ಯೂಸ್

ಕುಂದಾಪುರ : ಪ್ರಸ್ತುತ ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ದೇವಳದಲ್ಲಿ ಬೇರೆ ಬೇರೆ ಶಿಬಿರಗಳು ನಡೆಯುತ್ತಿರುತ್ತದೆ. ಕಿವಿಗೆ ಸಂಬಂಧಪಟ್ಟಂತೆ ಶಿಬಿರಗಳು ಆಗುವುದು ಅಪರೂಪ. ಶ್ರವಣ ತಪಾಸಣೆಯ ಸೌಲಭ್ಯವನ್ನು ಅವಶ್ಯಕತೆ ಇರುವ ಫಲಾನುಭವಿಗಳು ಪಡೆದುಕೊಳ್ಳಬೇಕು, ಈಶ್ವರ ಮಲ್ಪೆಯವರು ಪ್ರಾಣದ ಹಂಗನ್ನು ತೊರೆದು ಇನ್ನೊಬ್ಬರ ಪ್ರಾಣ ಉಳಿಸಲು ಸನ್ನದ್ಧವಾಗಿರುವ ವ್ಯಕ್ತಿ. ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಈಶ್ವರ ಮಲ್ಪೆಯವರ ಸೇವಾಧರ್ಮ ಅನುಕರಣೀಯ ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದಶರ್ಿ ಕೆ.ಶ್ರೀರಮಣ...
ಉಡುಪಿಜಿಲ್ಲೆಸುದ್ದಿ

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ – ಕಹಳೆ ನ್ಯೂಸ್

ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮಂಗಳವಾರ (ಮೇ.20) ಮುಂಜಾನೆಯಿಂದಲೇ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಅದರಂತೆ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ನಗರ ಸಭೆ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್‌ ಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಲಾಗಿತ್ತು. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿತ್ತು. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಮಧ್ಯದಲ್ಲಿ ನೀರು ತುಂಬಿಕೊಂಡಿತ್ತು....
1 25 26 27 28 29 124
Page 27 of 124