ಚೀನಾ ಆಕ್ರಮಣಕ್ಕೆ ಹುತಾತ್ಮರಾದ ಯೋಧರಿಗೆ ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಅಮರ್ ಜವಾನ್ ಜ್ಯೋತಿ ಬಳಿ ಗೌರವ ಸಮರ್ಪಣೆ – ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ – ಕಹಳೆ ನ್ಯೂಸ್
ಪುತ್ತೂರು: ಭಾರತ ದೇಶದ ವೀರ ಸೈನಿಕರು ಸಾಯುವುದಿಲ್ಲ. ದೇಶದ ಗಡಿ ಭಾಗದಲ್ಲಿ ದೇಶಕ್ಕಾಗಿ ಹೋರಾಟ ಮಾಡುತ್ತಾರೆ. ಚೀನಾ ಪಡೆ ವಿರುದ್ಧ ನಡೆದ ಘರ್ಷಣೆಯಲ್ಲಿ ನಮ್ಮ ಸೈನಿಕರು ಬಲಿದಾನ ಆಗಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡಾ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶದ ಒಳಗಿನ ಯೋಧರಾಗಿ ಹೋರಾಟ ಮಾಡೋಣ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಅವರು ಹೇಳಿದರು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ...



