Monday, April 27, 2026

ಜಿಲ್ಲೆ

ಚಿಕ್ಕಮಂಗಳೂರುಜಿಲ್ಲೆಸುದ್ದಿ

ಸ್ವಂತ ಕಾರಿಗೆ ಪೊಲೀಸ್ ನಾಮಫಲಕ: ಎಎಸ್‌ಐಗೆ ದಂಡ ಹಾಕಿದ ಪೊಲೀಸರು – ಕಹಳೆ ನ್ಯೂಸ್

ಮೂಡಿಗೆರೆ : ಕುಟುಂಬದೊಂದಿಗೆ ಕಾರಿನಲ್ಲಿ ಪ್ರವಾಸ ತೆರಳುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕಾರಿಗೆ 'ಪೊಲೀಸ್‌' ನಾಮಫಲಕ ಹಾಕಿಕೊಂಡಿದ್ದಕ್ಕೆ ಸ್ಥಳೀಯ ಪೊಲೀಸರು ಅವರಿಗೆ ದಂಡ ವಿಧಿಸಿದ ಘಟನೆ ಕೊಟ್ಟಿಗೆಹಾರದ ಚೆಕ್ ಪೋಸ್ಟ್‌ನಲ್ಲಿ ಗುರುವಾರ ನಡೆದಿದೆ. ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಖಾಸಗಿ ವಾಹನದ ಮುಂಭಾಗಕ್ಕೆ 'ಪೊಲೀಸ್' ಎಂಬ ನಾಮ ಫಲಕ ಹಾಕಿ ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬದೊಂದಿಗೆ ಪ್ರವಾಸ ತೆರಳುತ್ತಿದ್ದರು. ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಬಣಕಲ್ ಸಬ್‌ ಇನ್‌ಸ್ಪೆಕ್ಟರ್...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಹ ಭೋಜನ ಕಾರ್ಯಕ್ರಮ – ಕಹಳೆ ನ್ಯೂಸ್

ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ವತಿಯಿಂದ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಸಂಜೆ ಮಹಾ ಸಾಂಘಿಕ, ಸಹ ಭೋಜನ ಕಾರ್ಯಕ್ರಮ ನಡೆಯಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಜನ ಸಹಭೋಜನದಲ್ಲಿ ಭಾಗವಹಿಸಿದ್ದರು. ಮುಖ್ಯ ವಕ್ತಾರರಾಗಿ ಮಾತನಾಡಿದ ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಸಹ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ, 'ಕುಟುಂಬ ಪ್ರಭೋಧನ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ, ಸಾಮಾಜಿಕ ಸಾಮರಸ್ಯ ಹಾಗೂ ಸ್ವದೇಶಿ ಬಳಕೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಾಂಗ್ಲಾದೇಶದಲ್ಲಿ ನಡೆದ ದೀಪು ಚಂದ್ರ ದಾಸ್ ಹತ್ಯೆ ಸಜೀವ ದಹನ ಖಂಡಿಸಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ವತಿಯಿಂದ ಡಿ.26(ಇಂದು) ರಂದು ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಪುತ್ತೂರು: ಬಾಂಗ್ಲಾದೇಶದಲ್ಲಿ ನಡೆದ ದೀಪುಚಂದ್ರ ದಾಸ್ ಹತ್ಯೆ ಸಜೀವ ದಹನ ಖಂಡಿಸಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ವತಿಯಿಂದ ಡಿ.26(ಇಂದು)ರಂದು ಸಂಜೆ 5ಗಂಟೆಗೆ ದರ್ಬೆ ವೃತದ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ....
ಜಿಲ್ಲೆಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ – ಕಹಳೆ ನ್ಯೂಸ್

ಮೈಸೂರು : ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ಬೆನ್ನಲ್ಲೇ ರಾಜ್ಯದಲ್ಲಿ ಕೂಡ ಹೈ ಅಲರ್ಟ್ ಘೋಷಿಸಲಾಗಿದ್ದು, ಇನ್ನು ನಿನ್ನೆ ಮೈಸೂರು ಅರಮನೆ ಆವರಣದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಕಾರಣ ಏನೆಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಇದೀಗ ಮೈಸೂರು ಪೊಲೀಸರು ಎಫ್​ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಹೀಲಿಯಂ ಗ್ಯಾಸ್ ತುಂಬುವ ವೇಳೆ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ....
ಉಡುಪಿಕಾಪುಜಿಲ್ಲೆಪ್ರಾದೇಶಿಕಸುದ್ದಿ

ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ; ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ -ಕಹಳೆ ನ್ಯೂಸ್

ಕಾಪು : ಸಂಘಟನೆಗಳು ಒಂದು ಕುಟುಂಬ ವಾಗಿ ನಿಂತು ಸಹಕರಿಸಿದಾಗ ಮಾತ್ರ ಉದ್ದೇಶಗಳಿಗೆ ಫಲ ಬರುವುದು. ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು. ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ 2025- 27 ಸಾಲಿನ ನೂತನ ಅಧ್ಯಕ್ಷ ಸಂತೋಷ್‌ ನಾಯ್ಕ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬಂಟ್ವಾಳ ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ -ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ) ಬಂಟ್ವಾಳ ಇದರ ಬಿಸಿ ರೋಡು ವಲಯದ ಕಾರ್ಯಕ್ಷೇತ್ರದ ಜ್ಞಾನ ವಿಕಾಸಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳುಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಭಂಡಾರಿ ಬೆಟ್ಟು ವ್ಯಾಯಾಮ ಶಾಲೆ ಯಲ್ಲಿ ಪ್ರಾರಂಭಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ಪ್ರತಿಷ್ಠಿತ ಜಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ವರ್ಷಾಂತ್ಯದ ಕೊಡುಗೆಗಳು

ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಗಳನ್ನು ಘೋಷಿಸಿದೆ. ಚಿನ್ನದ ಬೆಲೆ ಗಗನಮುಖಿಯಾಗುತ್ತಿರುವ ನಡುವೆ ಜಿಲ್ ಆಚಾರ್ಯ ಜ್ಯುವೆಲ್ಲರ್‍ಸ್ ಚಿನ್ನಾಭರಣಗಳ ತಯಾರಿಕಾ ವೆಚ್ಚದ (ಮೇಕಿಂಗ್ ಚಾರ್ಜ್) ಮೇಲೆ ಪ್ರತೀ ಗ್ರಾಂಗೆ 400 ರೂ. ವರೆಗೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ ಡಿ.25 ರಿಂದ ಪ್ರಾರಂಭವಾಗಿದ್ದು, ಡಿ.31ರ ವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 8748877360 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಸಂಸ್ಥೆಯಲ್ಲಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಶಾಂತಿಗೋಡು ಕೈಲಾಜೆ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ-ಕಹಳೆ ನ್ಯೂಸ್ 

ಪುತ್ತೂರು:ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಕೊಯಕ್ಕುಡೆ- ಗಾಣಂತಿ-20 ಕೈಲಾಜೆ ಮತ್ತು ಹೊಸಮನೆ ಭಾಗಕ್ಕೆ ತೆರಳುವ ರಸ್ತೆಯನ್ನು ಖಾಸಗಿ ವ್ಯಕ್ತಿ ಬಂದ್ ಮಾಡಿದ್ದು ಈ ಬಗ್ಗೆ ಆ ಭಾಗದ ನಿವಾಸಿಗಳು ಶಾಸಕ ಅಶೋಕ್ ರೈ ಗೆ ಮನವಿ ಸಲ್ಲಿಸಿ ರಸ್ತೆ ನಿರ್ಮಾಣಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ. ನಾವು ಸುಮಾರು ಮನೆಯವರು ಅನೇಕ ವರ್ಷಗಳಿಂದ ಸಂಚಾರ ಮಾಡಿಕೊಂಡಿರುವ ನಮ್ಮ ರಸ್ತೆಯನ್ನು ಸಂಪರ್ಕಿಸುವ ಪಂಚಾಯತ್ ರಸ್ತೆಯ ಕಾಡಮನೆ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ...
1 52 53 54 55 56 957
Page 54 of 957