ವರ್ತಮಾನದ ಅಗತ್ಯಗಳಿಗೆ ಅನುಸಾರವಾಗಿ ಅನುಷ್ಠಾನಗೊಳಿಸುವುದು ಗುರುಗಳಿಗೆ ಸಲ್ಲಿಸುವ ನಿಜವಾದ ಗುರುಪೂಜೆ : ಪ್ರೇಮನಾಥ್ ಕೆ -ಕಹಳೆ ನ್ಯೂಸ್
ಬಂಟ್ವಾಳ : ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂದರೆ ಇಂದು ‘ಶಿಕ್ಷಣ’ ಮತ್ತು ‘ಉದ್ಯೋಗ’ ಎಂಬ ಸೀಮಿತ ಅರ್ಥವಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನು ನಿಯಂತ್ರಿಸುತ್ತಿವೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆಗಳು ಮಾತ್ರ ನಮ್ಮನ್ನು ಕಾಪಾಡಬಹುದು. ಪಕ್ಷಪಾತಿಗಳ ದಾಸರಾಗದಂತೆ ತಡೆಯಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್...







