Tuesday, April 28, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಸುದ್ದಿ

ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿಯರಾದ ಶೃತಿ ಸಿ ಹಾಗೂ ತೇಜಸ್ವಿನಿ ಪಿ ಎಂ ಗೆ ಇನ್ಫೋಸಿಸ್ ನಿಂದ ಸನ್ಮಾನ, ಪ್ರಾಧ್ಯಾಪಕ ದೀಕ್ಷಿತ್ ಕುಮಾರ್ ರವರಿಗೆ ಗೌರವಾರ್ಪಣೆ – ಕಹಳೆ ನ್ಯೂಸ್

ಜಗತ್ತಿನ ಖ್ಯಾತ ಸಂಸ್ಥೆಯಾದ ಇನ್ಫೋಸಿಸ್ ತನ್ನ ಆನ್ಲೈನ್ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮೂಲಕ ನೀಡುವ ಕೋರ್ಸುಗಳಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯಧಿಕ ಕೋರ್ಸುಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಟ್ಟಂಪಾಡಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರಾದ ಕುಮಾರಿ ಶೃತಿ ಸಿ ಮತ್ತು ಕುಮಾರಿ ತೇಜಸ್ವಿನಿ ಪಿಎಂ ಇವರನ್ನು ಇನ್ಫೋಸಿಸ್ ಸಂಸ್ಥೆಯು ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಿದೆ.  ಮೇ 2ರಂದು ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆದ ಸೆಲೆಬ್ರೇಟಿಂಗ್ ಟಾಪ್ ಲರ್ನರ್ಸ್ ಆನ್ ಇನ್ಫೋಸಿಸ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಳೆ ಅವಾಂತರ : ಡಾಮಾರು ರಸ್ತೆಯಲ್ಲಿ ತುಂಬಿಕೊಂಡ ಮಣ್ಣು : ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜದಿಂದ ಕುರಿಯ ಸಂಪರ್ಕ ರಸ್ತೆ ಸ್ಧಿತಿ ಅಯೋಮಯ – ಕಹಳೆ ನ್ಯೂಸ್

ಮಳೆಗಾಲ ಆರಂಭವಾಗುತ್ತಾ ಇದ್ದಂತೆ ಹಲವಾರು ಕಡೆಗಳಲ್ಲಿ ರಸ್ತೆ ಸಮಸ್ಯೆಗಳು ತಲೆದೂರಲಾರಂಭಿಸಿದೆ. ಅಂತೆಯೇ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜದಿಂದ ಕುರಿಯ ಸಂಪರ್ಕಿಸುವ ಡಾಮಾರು ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ತುಂಬಿ ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪರ್ಪುಂಜದಿಂದ ಕುರಿಯ ಹಾಗೂ ಮುಂಡೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ಮಳೆ ಪ್ರಾರಂಭವಾಗುತ್ತಿದ್ದಂತೆ ರಸ್ತೆಯ ಸ್ಧಿತಿ ಹೀಗಾದ್ರೆ, ಮುಂದೆ ಈ ರಸ್ತೆಯಲ್ಲಿ ಸಂಚಾರ ಮಾಡೋದಾದರೂ ಹೇಗೆ...
ದಕ್ಷಿಣ ಕನ್ನಡಯಕ್ಷಗಾನ / ಕಲೆಸುದ್ದಿ

ಮೇ 29ಕ್ಕೆ ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ – 2022 ; ಟ್ರಸ್ಟ್ ನ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ಕನ್ಯಾನ ಮಾರ್ಗದರ್ಶನದಲ್ಲಿ, ಶಶಿಧರ ಶೆಟ್ಟಿ ಬರೋಡಾ ಅವರ ಸಂಭ್ರಮಾಧ್ಯಕ್ಷತೆಯಲ್ಲಿ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು : ಯಕ್ಷಗಾನ ಕಲಾವಿದರ ಪಾಲಿನ ಕಾಮಧೇನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವಾರ್ಷಿಕ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಇಲ್ಲವಾಗಿತ್ತು. ಈ ವರ್ಷ ಭಾರೀ ವಿಜ್ರಂಭಣೆಯಿಂದ ಅಟ್ಟಣೆಗೊಂಡಿದೆ. ಮೇ 29 ಆದಿತ್ಯವಾರ ಬೆಳಗ್ಗೆ 8. ೦೦ ರಿಂದ ರಾತ್ರಿ 12.00 ಘಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ದೇಶ ವಿದೇಶಗಳಿಂದ ಗಣ್ಯರು ಭಾಗಿಯಾಗಲಿದ್ದಾರೆ. ಟ್ರಸ್ಟ್ ನ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ಕನ್ಯಾನ ಮಾರ್ಗದರ್ಶನದಲ್ಲಿ, ಶಶಿಧರ ಶೆಟ್ಟಿ ಬರೋಡಾ ಅವರ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಕೆದಿಲ ಸತ್ತಿಕಲ್ಲಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಗೋ ವಧೆ : ಅಕ್ರಮ ಕಸಾಯಿಖಾನೆ ವಶಪಡಿಸಿಕೊಂಡ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು : ಕೆದಿಲ ಸತ್ತಿಕಲ್ಲಿನಲ್ಲಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ಖಾಸಯಿಕಾನೆಗಳು ನಡೆಯುತ್ತಿದೆ. ಹಲವು ಬಾರಿ ಪೋಲೀಸರು ಕಸಾಯಿಖಾನೆಯನ್ನ ವಶಪಡಿಸಿಕೊಂಡರೂ ಮತ್ತೆ ಮತ್ತೆ ಇದೇ ದಂಧೆ ನಡೆಯುತ್ತಲೆ ಇದೆ. ಈ ಬಗ್ಗೆ ಹಿಂದು ಜಾಗರಣ ವೇದಿಕೆಯು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದು, ಇಂದು ಪುತ್ತೂರು ನಗರ ಠಾಣೆಯ ಪಿಎಸ್‌ಐ ರಾಜೇಶ್ ನೇತ್ರತ್ವದ ತಂಡ ದಾಳಿ ನಡೆಸಿದೆ. ಸತ್ತಿಕಲ್ಲು ಬೈಲು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ಹಲವು ಸಮಯದಿಂದ ನಡೆಸುತ್ತಿರುವ ಅಕ್ರಮ...
ದಕ್ಷಿಣ ಕನ್ನಡಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು ಜಲ್ಲಿಗುಡ್ಡೆ ಸಾಯಿ ಜನರಲ್ ಸ್ಟೋರ್ ಬಳಿಯಿಂದ ಮೈರಗುತ್ತುವರೆಗಿನ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯ ನಾಗರಿಕರು ಮನವಿ ಸಲ್ಲಿಸಿದಂತೆ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದೇವೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದ್ದು ಸಾರ್ವಜನಿಕರ ಸಹಕಾರದಿಂದ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು...
ದಕ್ಷಿಣ ಕನ್ನಡಸುದ್ದಿ

ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರ ಮಂಡಲದ ನೀರುಮಾರ್ಗ ಮಹಾಶಕ್ತಿ ಕೇಂದ್ರದ ವತಿಯಿಂದ, ಡಾ.ಭರತ್ ಶೆಟ್ಟಿಯವರ ಸಾರಥ್ಯದಲ್ಲಿ ಅಡ್ಯಾರ್ ಮೈದಾನದಲ್ಲಿ ಕಾರ್ಯಕರ್ತರಿಗಾಗಿ ನಡೆದ ಕ್ರೀಡಾಹಬ್ಬ – ಕಹಳೆ ನ್ಯೂಸ್

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರ ಮಂಡಲದ ನೀರುಮಾರ್ಗ ಮಹಾಶಕ್ತಿ ಕೇಂದ್ರದ ವತಿಯಿಂದ ಮಹಾಶಕ್ತಿ ಕೇಂದ್ರದ 9 ಶಕ್ತಿಕೇಂದ್ರದ ಕೂಡುವಿಕೆಯಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರ ಸಾರಥ್ಯದಲ್ಲಿ ಕ್ರೀಡಾ ಹಬ್ಬವನ್ನು ಆಯೋಜಿಸಲಾಯಿತು. ಅಡ್ಯಾರ್ ಮೈದಾನದಲ್ಲಿ ನಡೆದ ಕ್ರೀಡಾಹಬ್ಬದಲ್ಲಿ ಕಾರ್ಯಕರ್ತರಿಗಾಗಿ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ ಸಹಿತ ವಿವಿಧ ಪಂದ್ಯಾವಳಿಗಳು ನಡೆದವು. ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗಣ್ಯರು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಭಾಜಪಾ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದಿರೆ, ಶಾಸಕರಾದ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೂವತ್ತೆಂಟು ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೆಲ್ಯಾಡಿ ಸುರಕ್ಷಾ ಆರೋಗ್ಯಾಧಿಕಾರಿ ಕೆ. ಪುಷ್ಪವಲ್ಲಿ ನಿವೃತ್ತಿ – ಕಹಳೆ ನ್ಯೂಸ್

ಉಪ್ಪಿನಂಗಡಿ: ಮೂವತ್ತೆಂಟು ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇಲ್ಲಿನ ಪೆರಿಯಡ್ಕದ ಕೆ. ಪುಷ್ಪವಲ್ಲಿ ಅವರು ಎ.30ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದಾರೆ. 1988ರಲ್ಲಿ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಇವರು ಬೆಳಗಾಂನಲ್ಲಿ 3 ವರ್ಷ, ಉಪ್ಪಿನಂಗಡಿಯಲ್ಲಿ 9 ಹಾಗೂ 26 ವರ್ಷಗಳ ಕಾಲ ನೆಲ್ಯಾಡಿ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ತನ್ನ ಸೇವಾ ಅವಧಿಯಲ್ಲಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭದಲ್ಲಿ ಎಂ.ಆರ್.ಪಿ. ಎಲ್. ನ ಸಿ.ಎಸ್. ಆರ್. ನಿಧಿಯಿಂದ 66.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ’10 ಕೊಠಡಿಗಳ ಕಾಮಗಾರಿಗಳ ಉದ್ಘಾಟನಾ ಸಮಾರಂಭ’ ಮತ್ತು ಶಾಲಾ‘ಶತಮಾನೋತ್ಸವ’ ಕಾರ್ಯಕ್ರಮ -ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭದಲ್ಲಿ ಎಂ.ಆರ್.ಪಿ. ಎಲ್. ನ ಸಿ.ಎಸ್. ಆರ್. ನಿಧಿಯಿಂದ 66.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ’10 ಕೊಠಡಿಗಳ ಹಾಗೂ ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಸುಮಾರು 10.5 ಲಕ್ಷ ವೆಚ್ಚದಲ್ಲಿ ಮಾಡಿದ ಶಾಲಾ ಕಟ್ಟಡಕ್ಕೆ ಸಮತಟ್ಟು, ಶಾಲಾ ಕಟ್ಟಡಕ್ಕೆ ಮುಖಮಂಟಪ ಹಾಗೂ ಆಟದ ಮೈದಾನ ವಿಸ್ತರಣಾ ಕಾಮಗಾರಿಗಳ ಉದ್ಘಾಟನಾ ಸಮಾರಂಭ’ ಮತ್ತು ಶಾಲಾ‘ಶತಮಾನೋತ್ಸವ’ ಕಾರ್ಯಕ್ರಮ...
1 608 609 610 611 612 725
Page 610 of 725