ಸಾಹಿತಿ ಡಾ.ಶ್ರೀಧರ ಎಚ್.ಜಿ. ಅವರಿಗೆ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು: ಕಲಬುರುಗಿಯ ಪ್ರೊ.ಮಲ್ಲೇಪುರಂ ಸಾಂಸ್ಕøತಿಕ ಪ್ರತಿಷ್ಟಾನವು ಕೊಡಮಾಡುವ 2021ನೇ ಸಾಲಿನ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಪುತ್ತೂರಿನ ಸಾಹಿತಿ, ಹಿರಿಯ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ.ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಈ ಕುರಿತಾಗಿ ಪ್ರತಿಷ್ಟಾನದ ಅಧ್ಯಕ್ಷ ಡಾ.ಶ್ರೀಶೈಲ ನಾಗರಾಳ ಹಾಗೂ ಗೌರವ ಕಾರ್ಯದರ್ಶಿ ಡಾ.ಎಂ.ಬಿ.ಕಟ್ಟಿ ಅಧಿಕೃತ ಘೋಷಣೆ ಮಾಡಿರುತ್ತಾರೆ. ಡಾ.ಶ್ರೀಧರ್ ಅವರ ಇತ್ತೀಚೆಗಿನ ಕಾದಂಬರಿ ‘ಚಪಡ’ ಪ್ರಶಸ್ತಿ ದೊರಕುವಲ್ಲಿ ಪ್ರಮುಖ ಪರಿಣಾಮ...







