ಮಾಣಿ: ಏಕಲವ್ಯ ಪ್ರಶಸ್ತಿ ಪಡೆದ ದ.ಕ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ-ಕಹಳೆ ನ್ಯೂಸ್
ಬಂಟ್ವಾಳ: ವಿಶ್ವಕಪ್ ನಲ್ಲಿ ಕಬಡ್ಡಿ ಆಟವಾಡಿದ ಖ್ಯಾತ ಕಬಡ್ಡಿ ಆಟಗಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಉದಯ ಚೌಟ ಅವರು ಅರೋಗ್ಯ ಸಮಸ್ಯೆಯಿಂದ ಮೇ.21 ರಂದು ನಿಧನರಾದರು. ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾದ ಉದಯ ಚೌಟ ರವರು ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆ ನಿವಾಸಿ. 2007ರ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಭಾರತ ತಂಡ ಇರಾನ್ ತಂಡವನ್ನು 29-19 ಅಂತರದಿಂದ ಗೆದ್ದು ದ್ವಿತೀಯ ಬಾರಿ ಗೆಲುವು ಸಾಧಿಸಿತು. ಭಾರತ ತಂಡದಲ್ಲಿ...







