ರಾಜ್ಯ ಡಾಡ್ಜ್ ಬಾಲ್ ಕ್ರೀಡಾಕೂಟದಲ್ಲಿ ವಿಜೇತರಾದ ಅಕ್ಷಯ ಕಾಲೇಜಿನ ತಂಡಕ್ಕೆ ‘ಅಕ್ಷಯಾಭಿನಂದನಾ’ ಕಾರ್ಯಕ್ರಮ- ಕಹಳೆ ನ್ಯೂಸ್
ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಅಕ್ಷಯಾಭಿನಂದನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಸುದಾನ ವಸತಿ ಶಾಲೆಯ ಸಂಚಾಲಕರಾದ ವಿಜಯ್ ಹಾರ್ವಿನ್‍ರವರು ಉದ್ಘಾಟಿಸಿ, ಭಾರತದ ಮಾನವ ಸಂಪನ್ಮೂಲದ ವೃತ್ತಿಯಲ್ಲಿ ಮುಂದುವರಿಸಲು ಈ ಕಾಲೇಜಿನಲ್ಲಿರುವ ವೃತ್ತಿಪರ ಕೋರ್ಸ್‍ಗಳು ಮಹತ್ವದ ಪಾತ್ರವಹಿಸುತ್ತದೆ ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕ್ರೀಡಾಕ್ಷೇತ್ರದಲ್ಲಿ ಪುತ್ತೂರಿನ ಹಿರಿಮೆಯನ್ನು ಉತ್ತುಂಗಕ್ಕೇರಿಸಿದ ಡಾಡ್ಜ್ ಬಾಲ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾದ ಶ್ರೀ ಸುರೇಶ್ ಎನ್.ಕೆ...







