Thursday, May 14, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಸುದ್ದಿ

ಸೆಪ್ಟೆಂಬರ್ 2 ಪ್ರಧಾನಿ ಮೋದಿ ಆಗಮನ ಹಿನ್ನಲೆ ಸಾಗಿದೆ ಭರದ ಸಿದ್ಧತೆ ; ಸಂಸದ ನಳಿನ್‌ ಕುಮಾರ್‌ ಕಟೀಲ್ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ – ಕಹಳೆ ನ್ಯೂಸ್

ಮಂಗಳೂರು, ಅ 25 : ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡಲಿದ್ದು ಅವರನ್ನು ಬರಮಾಡಿಕೊಳ್ಳಲು ಜಿಲ್ಲಾಡಳಿತದಿಂದ ಭರದ ಸಿದ್ಧತೆ ಆರಂಭಗೊಂಡಿದೆ. ಪ್ರಧಾನಿ ಮೋದಿ ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸರಣಿ ಸಭೆ ನಡೆಸಲಾಗುತ್ತಿದ್ದು, ಈಗಾಗಲೇ ಸಂಸದ ನಳಿನ್‌ ಕುಮಾರ್‌ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಸೋಮವಾರ ನಡೆಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಭದ್ರತೆ ಸೇರಿದಂತೆ ಪೂರಕ ಸಿದ್ಧತೆಗಳ ಸಭೆ ನಡೆಸತೊಡಗಿದ್ದಾರೆ. ಸಮಾವೇಶ ನಡೆಯಲಿರುವ ಗೋಲ್ಡ್‌ಪಿಂಚ್‌ ಸಿಟಿ,...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿಗೆ ಬರಲಿದೆಯಂತೆ ಪಬ್ : ರಾತ್ರಿ 12ರ ವರೆಗೂ ಕಂಠಪೂರ್ತಿ ಕುಡಿದು, ಯುವಕ – ಯುವತಿಯರು ಅರೆಬೆತ್ತಲೆ ಬಟ್ಟೆತೊಟ್ಟು ಡಿಂಗ್ ಡಾಂಗ್ ಡ್ಯಾನ್ಸ್..!? – ಕಹಳೆ ನ್ಯೂಸ್

ಪುತ್ತೂರು : ನಗರದ ಎಳ್ಮುಡಿಯ ಪ್ರತಿಷ್ಠಿತ ಕಟ್ಟಡವೊಂದರಲ್ಲಿ ಪುತ್ತೂರಿನ ಮೊದಲ ಪಬ್ ಬರಲಿದೆ ಎಂದ ವಿಷಯ ಗುಸು‌ ಗುಸು ಪುತ್ತೂರಿನಲ್ಲಿ ಹಬ್ಬುತ್ತಿದೆ. ಮಣಿಪಾಲ ಮೂಲದ ಪಬ್ ಒಂದರ ಮಾಲೀಕರು ಈಗಾಲೇ ಪುತ್ತೂರಿಗೆ ಬಂದು ಸ್ಥಳ ವೀಕ್ಷಣೆ ನಡೆಸಿ, ಎಗ್ರಿಮೆಂಟ್ ಮಾಡಿಕೊಳ್ಳಲು‌ ಮುಂದಾಗಿದ್ದಾರೆ ಎಂಬ ಖಚಿತ ಮಾಹಿತಿ ಬ್ರೋಕರ್ ಮೂಲಗಳಿಂದ ಬಂದಿದ್ದು, ಮುಂದೇನಾಗುತ್ತೇ ಕಾದುನೋಡಬೇಕಿದೆ. ಸುಸಂಸ್ಕೃತ ಪುತ್ತೂರಿನಲ್ಲೋಂದು ಇಂತಹ ಪಬ್ ಆರಂಭದ ಪರಿಣಾಮ ಏನು ಎಂಬುದರ ಕುರಿತ ಸಜ್ಜನ ನಾಗರಿಕರು ಕಳವಳ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ – ವಿಟ್ಲ ಕೆಲಿಂಜ ಸಮೀಪ ರಸ್ತೆಗುರುಳಿದ ಮರ, ವಿದ್ಯುತ್ ಕಂಬ – ಸಂಚಾರಕ್ಕೆ ಅಡಚಣೆ – ಕಹಳೆ ನ್ಯೂಸ್

ಬಂಟ್ವಾಳ, ಅ 25 : ಬುಧವಾರ ಬೆಳಿಗ್ಗೆಯಿಂದ ಸುರಿದ ಬಾರಿ ಗಾಳಿ ಮಳೆಗೆ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜ್ಜೊನಿ ಎಂಬಲ್ಲಿ ರಸ್ತೆಗೆ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ. ಕಲ್ಲಡ್ಕ – ವಿಟ್ಲ ರಸ್ತೆ ಯ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಿಂಜ ಸಮೀಪದ ಕೋಡಪದವು ಕ್ರಾಸ್ ನ ಮಜ್ಜೊನಿ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಬೃಹತ್ ಗಾತ್ರದ ಮರವೊಂದು ಸಂಜೆ ಸುಮಾರು 4.30 ರ...
ದಕ್ಷಿಣ ಕನ್ನಡಬೆಂಗಳೂರುಮೈಸೂರುರಾಜ್ಯಸುದ್ದಿ

ವಾರದಲ್ಲಿ ಆರು ದಿನ ಮೈಸೂರು ಮಾರ್ಗವಾಗಿ ಬೆಂಗಳೂರು – ಮಂಗಳೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮತಿ ; ಸಂಸದ ನಳಿನ್ ಕುಮಾರ್ ಕಟೀಲ್ ಪ್ರಯತ್ನದ ಪ್ರತಿಫಲ..! – ಕಹಳೆ ನ್ಯೂಸ್

ಬೆಂಗಳೂರು, ಆಗಸ್ಟ್ 24: ಬೆಂಗಳೂರು-ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯ ಸಂತೋ‍ದ ಸುದ್ದಿ ನೀಡಿದೆ. ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು, ಆರು ದಿನಗಳಿಗೆ ಹೆಚ್ಚಿಸುವಂತೆ ನೈಋತ್ಯ ರೈಲ್ವೆಯ ಪ್ರಸ್ತಾವನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ವಾರದಲ್ಲಿ ಆರು ದಿನ ಬೆಂಗಳೂರು-ಮಂಗಳೂರು ರೈಲು ಮೈಸೂರು ಮಾರ್ಗವಾಗಿ ಸಂಚರಿಸಲಿದೆ. ರೈಲು ಸಂಖ್ಯೆ 16585/586 ರ ಸಂಚಾರವನ್ನು ಹೆಚ್ಚಿಸಲು ನೈಋತ್ಯ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಆ. 27ರಂದು ಪುತ್ತೂರು ಬಂಟರ ಭವನದಲ್ಲಿ ದಂಬೆಕ್ಕಾನ ಸದಾಶಿವ ರೈಯವರಿಂದ ರಚಿತ “ಬಂಟ ಮದುವೆ” (ಬಂಟ ಗುರಿಕ್ಕಾರನ ಕೈಪಿಡಿ) ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಆ. 27ರಂದು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಡಾ. ಪಿ. ಬಿ. ರೈ ಪ್ರತಿಷ್ಠಾನ, ನೂಜಿ ತರವಾಡು ಕೆಯ್ಯೂರು, ಪುತ್ತೂರು ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ದಂಬೆಕ್ಕಾನ ಸದಾಶಿವ ರೈಯವರಿಂದ ರಚಿತ “ಬಂಟ ಮದುವೆ” (ಬಂಟ ಗುರಿಕ್ಕಾರನ ಕೈಪಿಐ) ಬಿಡುಗಡೆ ಹಾಗೂ ಇವರು ಕೊಡುಗೆಯಾಗಿ ನೀಡಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಮತ್ತು ಡಾ. ಪಿ....
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಬೆಳ್ಳಾರೆಯ ಪದವಿಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರೂ ವರ್ಗಾವಣೆ..! ಸಂಕಷ್ಟದಲ್ಲಿ ವಿದ್ಯಾರ್ಥಿಗಳು –  ಕಹಳೆ ನ್ಯೂಸ್

ಸುಳ್ಯ : ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪದವಿಪೂರ್ವ ಕಾಲೇಜು ವಿಭಾಗದ ಎಲ್ಲ ಉಪನ್ಯಾಸಕರಿಗೂ ವರ್ಗಾವಣೆಯಾಗಿದೆ. ಉಪನ್ಯಾಸಕರ ಹುದ್ದೆ ಸಂಪೂರ್ಣ ಖಾಲಿಯಾಗಿರುವ ಪರಿಣಾಮ ಕಾಲೇಜಿನ 258 ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಬೆಳ್ಳಾರೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಗೌಡ ಅವರಿಗೆ ಸುಳ್ಯ ಜೂನಿಯರ್‌ ಕಾಲೇಜಿಗೆ ವರ್ಗಾವಣೆಯಾಗಿದೆ. ಸ್ವಲ್ಪ ಸಮಯ ಬೆಳ್ಳಾರೆಯಲ್ಲಿ ಇರುವಂತೆ ಅವರನ್ನು ವಿನಂತಿಸಲಾಗಿದೆ. ಈ ಹಿಂದೆ ಇದ್ದ 6 ಮಂದಿ ಉಪನ್ಯಾಸಕರಲ್ಲಿ ಹಸೀನಾ ಬಾನು ಸುಳ್ಯ ಜೂನಿಯರ್‌ ಕಾಲೇಜಿಗೆ, ಗೌತಮ್‌ ಕೆ....
ದಕ್ಷಿಣ ಕನ್ನಡಯಕ್ಷಗಾನ / ಕಲೆಸುದ್ದಿ

ಸಂಜೆ 5.30ರಿಂದ ರಾತ್ರಿ 10.30ವರೆಗೆ ಯಕ್ಷಗಾನ ಸೇವೆ – ಕಟೀಲು ಮೇಳಗಳಿಂದ ಕಾಲಮಿತಿ ಯಕ್ಷಗಾನ : ದೇವರ ಎದುರು ಕಾಲಮಿತಿ ಯಕ್ಷಗಾನ ಬಗ್ಗೆ ಹೂಪ್ರಶ್ನೆ..! – ಕಹಳೆ ನ್ಯೂಸ್

ಮಂಗಳೂರು, ಆ 23 : ಸರಕಾರ ರಾತ್ರಿವೇಳೆಯಲ್ಲಿ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕಟೀಲು ಕ್ಷೇತ್ರದ ಯಕ್ಷಗಾನ ಮೇಳಗಳ ಯಕ್ಷ ಪ್ರದರ್ಶನದ ಸಮಯದವನ್ನು ಬದಲಾವಣೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸಲ್ಪಡುವ 6 ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ತರಲು ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ 10.30 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ...
ಆರೋಗ್ಯದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೌಷ್ಟಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಆ. 17ರಂದು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೌಷ್ಟಿಕ ಆಹಾರದ ಕಿಟ್ ವಿತರಣೆ...
1 568 569 570 571 572 731
Page 570 of 731