Thursday, May 14, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

(ನ.19) ಇಂದಿನಿಂದ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ; ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್‌ ಪೂಂಜ ವಸ್ತುಪ್ರದರ್ಶನ ಉದ್ಘಾಟನೆ – ಕಹಳೆ ನ್ಯೂಸ್

ಧರ್ಮಸ್ಥಳ: ಪರಂಪರಾಗತ ಆಚಾರ ವಿಚಾರಗಳು, ಸಂಸ್ಕೃತಿ-ಸಾಹಿತ್ಯ ಪ್ರಕಾರಗಳ ಜತೆಗೆ ಈ ನಾಡಿನ ಕಲೆಗಳಾದಿಗಳು ಒಂದೆಡೆ ಕೇ೦ದ್ರೀಕೃತವಾಗುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರವರೆಗೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಲಕ್ಷದೀಪೋತ್ಸವ ನೆರವೇರಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನೆರವೇರಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನ, ಮುಖ್ಯದ್ವಾರ...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಹಾನ್ ಮಲತಂದೆ ಬಂಧನ – ಕಹಳೆ ನ್ಯೂಸ್

ಬಂಟ್ವಾಳ, ನ 18 :  ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಹಾನ್ ತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.ತುಂಬೆ ರಾಮ ನಿವಾಸಿಯೇ ಆರೋಪಿಯಾಗಿದ್ದಾನೆ.ಆರೋಪಿ ತುಂಬೆಯಲ್ಲಿ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಬಾಲಕಿಗೆ್ ಈತ ಮಲತಂದೆಯಾಗಿದ್ದು, ಬಾಲಕಿಯ ತಂದೆ ಅಪಘಾತದಲ್ಲಿ ಮರಣಹೊಂದಿದ ನಂತರ ಬಾಲಕಿಯ...
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಅಮ್ಮೆ ಅವುಲುಲ ಇಜ್ಜೆ ಮೂಲುಲ ಇಜ್ಜೆ, ಕೋರಿದ ಗೂಡುಡುಲ ಇಜ್ಜೆ – ಹೊರಬಿತ್ತು ಬೆಳ್ತಂಗಡಿ ಕಾಂಗ್ರೆಸ್ ನ ಬಣ ರಾಜಕೀಯ ; ವಸಂತ ಬಂಗೇರರಿಗೆ ಟಿಕೇಟ್ ಕೊಡಿ ಇಲ್ಲದಿದ್ರೆ ನನಗೆ ಟಿಕೇಟ್ ಕೊಡಿ, ರಕ್ಷಿತ್ ಶಿವರಾಮ್ ಗೆ ಬೇಡ ಎಂದ ಗಂಗಾಧರ ಗೌಡ – ಕಹಳೆ ನ್ಯೂಸ್

ಬೆಳ್ತಂಗಡಿ : ' ಅಮ್ಮೆ ಅವುಲುಲ ಇಜ್ಜೆ ಮೂಲುಲ ಇಜ್ಜೆ, ಕೋರಿದ ಗೂಡುಡುಲ ಇಜ್ಜೆ ' ಈ ಜಾನಪದ ಗಾದೆ ಮಾತಿನಂತೆ ಒಂದು ಘಟನೆ ಬೆಳ್ತಂಗಡಿ ಕಾಂಗ್ರೆಸ್ ನ ಒಳಗೆ ಘಟಿಸಿದೆ. ಬೆಳ್ತಂಗಡಿ ಕಾಂಗ್ರೆಸ್ ನ ಬಣ ರಾಜಕೀಯ ಬಹಿರಂಗಗೊಂಡಿದೆ. ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದು, ಈಗಾಗಲೇ ಬೆಳ್ತಂಗಡಿಯಿಂದಲೂ ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತ್ ಶಿವರಾಮ್ ಸೇರಿದಂತೆ ಇನ್ನೂ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ ಎಂಬ...
ಉದ್ಯೋಗದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಅರ್ಜಿ ಆಹ್ವಾನ – ಕಹಳೆ ನ್ಯೂಸ್

ಮಂಗಳೂರು,ನ 15 : ಭಾರತೀಯ ವಾಯುಪಡೆಯು ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗೆ ಅಗ್ನಿಪಥ್ ಯೋಜನೆಯಡಿ ವಾಯು ಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು 2023ನೇ ಜನವರಿಯಲ್ಲಿ ನಡೆಯುವ ಆನ್‍ಲೈನ್ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಯಲ್ಲಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50% ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50% ಅಂಕಗಳೊಂದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ ಯುವತಿಯರು 2002ನೇ ಜೂನ್ 27ರಿಂದ 25ರ ಡಿಸೆಂಬರ್...
ದಕ್ಷಿಣ ಕನ್ನಡರಾಜ್ಯಸುದ್ದಿ

ಅಕ್ಷರ ಸಂತನಿಗೆ ಗ್ರಾಮದ ಗೌರವ ; ಹರೇಕಳ ಗ್ರಾ.ಪಂ. ಕಟ್ಟಡದಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಚಿತ್ರ – ಕಹಳೆ ನ್ಯೂಸ್

ಉಳ್ಳಾಲ, : ಹರೇಕಳ ಗ್ರಾಮಕ್ಕೆ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ ಪೂರ್ತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಚಿತ್ರವನ್ನು ರಚಿಸುವ ಮೂಲಕ ಗ್ರಾಮದ ಹೆಸರನ್ನು ಜಗತ್ತಿಗೆ ಪಸರಿಸಿದ ಅಕ್ಷರ ಸಂತನಿಗೆ ಗೌರವ ನೀಡಲಾಗಿದೆ. ಶಾಸಕರ ವಿಶೇಷ ಹಾಗೂ ವಿವಿಧ ಅನುದಾನದಡಿ ಹರೇಕಳ ಗ್ರಾಮಕ್ಕೆ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಕಾಮಗಾರಿ ಇದೀಗ ಸಮಾರೋಪಾದಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆ ಹಂತಕ್ಕೆ ತಲುಪಿದೆ. ಕಟ್ಟಡದ ಒಂದು ಅಂತಸ್ತಿನ ಗೋಡೆ...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ 2004ರ ಸಾಲಿನ ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ -ಕಹಳೆ ನ್ಯೂಸ್

ವಿಟ್ಲ : ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ 2004ರ ಸಾಲಿನ ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉಪನ್ಯಾಸಕರ ಘನ ಉಪಸ್ಥಿತಿಯೊಂದಿಗೆ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. 2004 ರ ಅವಧಿಯಲ್ಲಿ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣ ಸರ್ ನಾವೆಲ್ಲರೂ ಪರಸ್ಪರ ಸಹಕಾರದಿಂದ ಪ್ರೀತಿಯಿಂದ ಬದುಕೋಣ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ರಾಧಾಕೃಷ್ಣ ಭಟ್,ತಾರಾ ಯು ರಾವ್,ಶ್ರೀಮತಿ ಚಕ್ರೇಶ್ವರಿ,ಡಾ|| ನವೀನ್ ಕೋಣಾಜೆ,ಬಾಲಕೃಷ್ಣ ನಾಯಕ್,ದಾಮೋದರ್ ಉಪಸ್ಥಿತರಿದ್ದು, ಸಮಯೋಚಿತವಾಗಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ದಂಬೆಕಾನ ಸದಾಶಿವ ರೈ ಅವರಿಗೆ ಒಲಿದ ಕರ್ನಾಟಕ ಸರಕಾರದ ಸಹಕಾರ ರತ್ನ ಪ್ರಶಸ್ತಿ : ನ.18 ರಂದು ಪ್ರಶಸ್ತಿ ಪ್ರಧಾನ –ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತವು, ರಾಜ್ಯಮಟ್ಟದ ರೋಯಲ್ ಸೌಹಾರ್ದ ಸಹಕಾರಿ ಪುತ್ತೂರು ಇದರ ಸ್ಥಾಪಕಾಧ್ಯಕ್ಷ, ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಅವರನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದಂಬೆಕಾನ ಸದಾಶಿವ ರೈ ಇವರು ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿ ಪ್ರದಾನ...
ದಕ್ಷಿಣ ಕನ್ನಡರಾಜ್ಯಸುದ್ದಿ

ನ.19 ರಂದು ಮಂಗಳೂರಿನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ ; ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿಕೆ – ಕಹಳೆ ನ್ಯೂಸ್

ಮಂಗಳೂರು: ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ(Kedambadi Ramaiah Gowda) ಕಂಚಿನ ಪ್ರತಿಮೆ ನ.19ರ ಶನಿವಾರ ಮುಖ್ಯಮಂತ್ರಿಗಳಿಂದ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್(Vedavyas Kamath) ಅವರು ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ವೇದವ್ಯಾಸ ಕಾಮತ್ ಮಾತನಾಡಿದರು.  ಜನಸಾಮಾನ್ಯರ ಮತ್ತು...
1 559 560 561 562 563 731
Page 561 of 731