Thursday, May 14, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಡಿ.17 ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿದ ಶಾಸಕ ಹರೀಶ್ ಪೂಂಜ -ಕಹಳೆ ನ್ಯೂಸ್

ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ,ಬಜರಂಗದಳ ರೆಖ್ಯ ಘಟಕದ ನೇತೃತ್ವದಲ್ಲಿ ಡಿ.17 ರಂದು ನಡೆಯಲಿರುವ 2 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹರೀಶ್ ಪೂಂಜ ಅವರು ಅನಾವರಣ ಗೊಳಿಸಿದರು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ಮುಖಂಡರಾದ ಶ್ರೀ ಅಖಿಲ್ ರೆಖ್ಯ, ಅರಸಿನಮಕ್ಕಿ ಗ್ರಾ. ಪಂ...
ದಕ್ಷಿಣ ಕನ್ನಡರಾಜಕೀಯಸುದ್ದಿಸುಳ್ಯ

ವಿಧಾನಸಭಾ ಚುನಾವಣೆ : ಸುಳ್ಯ ಕ್ಷೇತ್ರದಿಂದ ಕೈ ನಾಯಕ ಕೆ. ಶರಚ್ಚಂದ್ರವರಿಗೆ ಟಿಕೆಟ್ ಪಕ್ಕಾ..? ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಕೈ ನಾಯಕರಿಗೆ ಸಿಗುತ್ತಾ ಗೆಲುವು..? – ಕಹಳೆ ನ್ಯೂಸ್

ವಿಧಾನಸಭಾ ಚುನಾವಣೆಗೆ ಆಯಾ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸಿದ್ದತೆ ನಡೆಯುತ್ತಿದೆ. ಪೈಪೋಟಿಯಲ್ಲಿ ಮತದಾರರು ಮಾತ್ರ ಮೌನವಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಸರಿ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ ಜನ ನಾಯಕರು ಹಾಗೂ ಇಡೀ ರಾಜ್ಯದ ಚಿತ್ತ ಹೊರಳಿದೆ.ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಈ ಕುತೂಹಲಕ್ಕೆ ಕಾರಣವಾಗಿದ್ದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಹಾಗೂ ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯ...
ದಕ್ಷಿಣ ಕನ್ನಡರಾಜ್ಯಸಂತಾಪಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು, ನ 30 : ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88) ಅವರು ಅ. 30 ರ ಬುಧವಾರ ನಿಧನರಾಗಿದ್ದಾರೆ.ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ್ದ ಇವರು, ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ...
ಉಡುಪಿದಕ್ಷಿಣ ಕನ್ನಡಬೆಂಗಳೂರುರಾಜಕೀಯರಾಜ್ಯಸುದ್ದಿ

ಹಿಜಾಬ್ ವಿವಾದ ಬೆನ್ನಲ್ಲೇ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕ ಮುಸ್ಲಿಂ ಹೆಣ್ಣುಮಕ್ಕಳ 10 ಕಾಲೇಜು ಸ್ಥಾಪನೆಗೆ ಮುಂದಾದ‌ ರಾಜ್ಯ ವಕ್ಫ್ ಬೋರ್ಡ್ ; ಸರಕಾರದ ಅನುಮೋದನೆ ಪ್ರಸ್ತಾಪ – ಕಹಳೆ ನ್ಯೂಸ್

ರಾಜ್ಯದಲ್ಲಿ 10 ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ,ಉಡುಪಿ ಕಲಬುರಗಿ,ಯಾದಗರಿ, ರಾಯಚೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ 10 ಕಾಲೇಜುಗಳನ್ನು ಸ್ಥಾಪನೆಗೆ ಶೀಘ್ರವೇ ಕಾರ್ಯತಂತ್ರ ನಡೆಯಲಿದೆ ಎನ್ನಲಾಗಿದೆ. ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾಪ ಸಲ್ಲಿಸಿತ್ತು.ಇದಕ್ಕೆ ಸರಕಾರದ ಅನುಮೋದನೆ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರತಿ ಕಾಲೇಜಿಗೆ 2.5 ಕೋಟಿ...
ದಕ್ಷಿಣ ಕನ್ನಡರಾಜ್ಯಸುದ್ದಿ

ಮತ್ತೆ ಕ್ರೂಸ್‌ ಪ್ರವಾಸೋದ್ಯಮಕ್ಕೆ ಕಳೆ : 271 ಪ್ರವಾಸಿಗರನ್ನು ಹೊತ್ತ ಹಡಗು ಮಂಗಳೂರಿಗೆ ; ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರ ಸ್ವಾಗತ – ಕಹಳೆ ನ್ಯೂಸ್

ಪಣಂಬೂರು: ಎರಡು ವರ್ಷ ಕೊರೊನಾ ಹೊಡೆತದಿಂದ ನಲುಗಿದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೆದರುವ ಲಕ್ಷಣ ಕಂಡು ಬಂದಿದೆ. ಸೋಮವಾರ ನವಮಂಗಳೂರು ಬಂದರಿಗೆ 271 ಪ್ರವಾಸಿಗರು ಮತ್ತು 373 ಮಂದಿ ಸಿಬಂದಿಯನ್ನು ಹೊತ್ತ ಎಂಎಸ್‌ ಯುರೋಪಾ 2 ಆಗಮಿಸಿತು. ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಬಸ್‌ ಹಾಗೂ ಖಾಸಗೀ ಪ್ರವಾಸಿ ಕಾರು ಗಳಲ್ಲಿ ಪ್ರವಾಸಿಗರನ್ನು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಕದ್ರಿ ದೇವಸ್ಥಾನ,...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಡಿ.05 ರಂದು ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆ ; 15 ಸ್ಥಾನಗಳಿಗೆ 20 ಮಂದಿ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಪುತ್ತೂರು: ಡಿ.5ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಶಾಖೆಯ ಚುನಾವಣೆ ನಾಮಪತ್ರ ಸಲ್ಲಿಕೆಯ ಸಮಯ ಕೊನೆಗೊಂಡಾಗ 15 ಹುದ್ದೆಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಂದು ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಹುದ್ದೆಗಳಿಗೆ ಎರಡು ನಾಮಪತ್ರ, ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ ಎರಡು ನಾಮಪತ್ರ, ಕಾರ್ಯದರ್ಶಿ ಎರಡು ಹುದ್ದೆಗೆ ಎರಡು ನಾಮಪತ್ರ, ಕೋಶಾಧಿಕಾರಿ ಒಂದು ಹುದ್ದೆಗೆ ಎರಡು ನಾಮಪತ್ರ,...
ದಕ್ಷಿಣ ಕನ್ನಡಸುದ್ದಿ

“ನಮ್ಮ ನಡೆ ಪೊಳಲಿ ಅಮ್ಮನೆಡೆ” ಯಶಸ್ವಿಗೆ ಶ್ರಮಿಸಿದ ಪ್ರಮುಖರಿಗೆ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕೇಸರಿ ಫ್ರೆಂಡ್ಸ್ ಪಡುಕಾಪೆಟ್ಟು, ಸಂಘ ಹಾಗೂ ಎಲ್ಲಾ ಸಂಸ್ಥೆಗಳ ಕೂಡುವಿಕೆಯಲ್ಲಿ 20/11/2022 ಭಾನುವಾರ ನಡೆದ ಪಡುಕಾಪೆಟ್ಟು ಪಾಂಡುರಂಗ ಭಜನ ಮಂದಿರದಿಂದ ಪಡು ಬದಿನಡಿ ಪೆರ್ಮಂಕಿ, ಮಲ್ಲೂರು, ಕಲಾಯಿ, ಅಮ್ಮುಂಜೆ ಮಾರ್ಗವಾಗಿ ಪೊಳಲಿ ದೇವಸ್ಥಾನಕ್ಕೆ ನಡೆದ "ನಮ್ಮ ನಡೆ ಪೊಳಲಿ ಅಮ್ಮನೆಡೆ" ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಪ್ರಮುಖರಿಗೆ ಭಾನುವಾರ ಪಾಂಡುರಂಗ ಭಜನ ಮಂದಿರದ ಕಾಪೆಟ್ಟು ಪಡು ಬೊಂಡಂತಿಲ ಇಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪೂರ್ಣ ಸಹಕಾರ ನೀಡಿದ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಮಾರವಾಂಡಿ ಕೊಡಮಣಿತ್ತಾಯ ಬೈದರ್ಕಳ ದೇವಸ್ಥಾನ ಮುದ್ದಾಡಿ ಮೆಟ್ಟಿಲಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಬೆಳ್ತಂಗಡಿ ತಾಲೂಕು ಶ್ರೀ ಮಾರವಾಂಡಿ ಕೊಡಮಣಿತ್ತಾಯ ಬೈದರ್ಕಳ ದೇವಸ್ಥಾನ ಮುದ್ದಾಡಿ ಮೆಟ್ಟಿಲಿನಲ್ಲಿ ಸುಮಾರು 10ಲಕ್ಷ ರೂ ವೆಚ್ಚದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿಯವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ರು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು....
1 555 556 557 558 559 731
Page 557 of 731