Monday, April 27, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ-ಕಹಳೆ ನ್ಯೂಸ್

ಬೆಳ್ತಂಗಡಿ : - 2025-2026ನೇ ಸಾಲಿಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಗಳಲ್ಲಿ ನಿರಂತರವಾಗಿ ಸುರಿದ ಬೀಕರ ಮಳೆಯಿಂದಾಗಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು ಸಾರ್ವಜನಿಕ ಸಂಪರ್ಕ ರಸ್ತೆಗಳು, ಸೇತುವೆಗಳು, ಕಾಲು ಸಂಕಗಳು, ವಿದ್ಯುತ್ ಸಂಪರ್ಕಗಳು, ಶಾಲಾ ಕಟ್ಟಡಗಳು , ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ಮತ್ತು ಜಮೀನುಗಳು ತೀರಾ ಅಪಾಯದ ಮಟ್ಟದಲ್ಲಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ/ಕುಸಿತಕ್ಕೊಳಗಾಗುವ ಸಾಧ್ಯತೆ ಇರುವುದರಿಂದ ಆ ಭಾಗದಲ್ಲಿ ಅಗತ್ಯವಾಗಿ...
ದಕ್ಷಿಣ ಕನ್ನಡಸುದ್ದಿ

ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ 59, ಮರಳುಗಾರಿಕೆಗೆ 42 ಪರವಾನಿಗೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.-ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳುಗಾರಿಕೆ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಈಗಾಗಲೇ 59 ಪರವಾನಿಗೆ ನೀಡಲಾಗಿದೆ. 42 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಸಲು ಮಾರ್ಚ್ ಒಳಗೆ ಪರವಾನಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈಗಾಗಲೇ 19 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇನ್ನೂ 42 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಮುಂದಿನ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾರನ್ನು ಭೇಟಿಯಾದ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು – ಕಹಳೆ ನ್ಯೂಸ್

ಪುತ್ತೂರು : ಮಾಜಿ ಪುತ್ತಿಲ ಪರಿವಾರದ ಅಧ್ಯಕ್ಷ, ಪ್ರಸ್ತುತ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾರನ್ನು ಭಾನುವಾರ ನಡೆದ ಪುತ್ತಿಲ ಪರಿವಾರ ನೇತೃತ್ವದ ಶ್ರೀನಿವಾಸ ಕಲ್ಯಾಣಕ್ಕೆ ಹೋದ ಸಂದರ್ಭದಲ್ಲಿ ಅವರನ್ನು ಕಾರ್ಯಕ್ರಮಕ್ಕೆ ಹೋಗದಂತೆ ಕಾರ್ಯಕರ್ತರು ತಡೆದ ಘಟನೆ ನಡೆದಿತ್ತು. ಇದೀಗ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ರವರು ಭೇಟಿ ನೀಡಿ ಪ್ರಸನ್ನ ಕುಮಾರ್ ಮಾರ್ತಾ ರಿಗೆ ಸಾಂತ್ವನ ಹೇಳಿದ್ದಾರೆ. ಸಂದರ್ಭದಲ್ಲಿ ಪುತ್ತೂರು ನಗರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕೈಂತಿಲ ಸಾಲಿಯಾನ್ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ (ರಿ.) ತಲೆಂಬಿಲ ಅಮ್ಮಾಡಿ ಇದರ ವಿಭಾಗ ಮುಖ್ಯಸ್ಥರ ಸಮಿತಿ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೈಂತಿಲ ಸಾಲಿಯಾನ್ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ (ರಿ.) ತಲೆಂಬಿಲ ಅಮ್ಮಾಡಿ ಇದರ ವಿಭಾಗ ಮುಖ್ಯಸ್ಥರ ಸಮಿತಿಯ ಆಯ್ಕೆ ಮಾಡಲಾಯಿತು. ನ. 30 ನೇ ಅದಿತ್ಯವಾರ ನಡೆದ ಎಲ್ಲಾ ವಿಭಾಗ ಮುಖ್ಯಸ್ತರ ಸಭೆಯಲ್ಲಿ ಆಡಳಿತ ಟ್ರಸ್ಟ್ರಿ ಗಿರೀಶ್ ಪೂಜಾರಿ ಬಸ್ರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು. ಅಧ್ಯಕ್ಷರಾಗಿ ನಿತ್ಯಾನಂದ ಪೂಜಾರಿ ಬಸ್ರಾ, ಕಾರ್ಯದರ್ಶಿಯಾಗಿ ಸುನಿಲ್ ಅಮ್ಮಾಡಿ ಆಯ್ಕೆಯಾದರು. ಸದಸ್ಯರಾಗಿ ವಿವಿಧ ವಿಭಾಗಗಳಾದ ಅಂಡೆಪುಣಿ ವಿಭಾಗದಿಂದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನಿ, ಶಿರ್ವ ಇದರ “ಸುವರ್ಣ ಮಹೋತ್ಸವ” – ಕಹಳೆ ನ್ಯೂಸ್

 ಮಂಗಳೂರು : ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನಿ. ಶಿರ್ವ ಇದರ "ಸುವರ್ಣ ಮಹೋತ್ಸವ" ವರ್ಷದ ಪ್ರಯುಕ್ತ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ನ. 30 ರಂದು ಮುದರಂಗಡಿ ಚರ್ಚ್ ಹಾಲ್ ಇಲ್ಲಿ ಆಯೋಜಿಸಲಾದ "ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮುದರಂಗಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಧರ್ಮಗುರುಗಳಾದ ರೆl...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶೇರಾದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ; ಮಕ್ಕಳ ಶಿಸ್ತು ಮತ್ತು ಮೌಲ್ಯಯುತ ಜೀವನಕ್ಕೆ ಸರಕಾರಿ ಶಾಲೆಗಳು ಮೂಲ ಅಡಿಪಾಯ.. ಧನರಾಜ್ ಆಚಾರ್ಯ -ಕಹಳೆ ನ್ಯೂಸ್

ಕಲ್ಲಡ್ಕ: ಮಕ್ಕಳ ಶಿಸ್ತು ಮತ್ತು ಮೌಲ್ಯಯುತ ಜೀವನಕ್ಕೆ ಸರಕಾರಿ ಶಾಲೆಗಳು ಮೂಲ ಅಡಿಪಾಯವಾಗಿದೆ, ಶಿಕ್ಷಣದ ಜೊತೆಗೆ ಬುದ್ಧಿವಂತಿಗೆ ಬಹಳ ಮುಖ್ಯ, ದಾನಿಗಳು ಸಂಘ-ಸಂಸ್ಥೆಗಳು ಮಾಡುವ ಸಹಕಾರವು ಸರಕಾರಿ ಶಾಲಾ ಮಕ್ಕಳ ಜೀವನಕ್ಕೆ ಕೊಡುವ ಆಸರೆಯಾಗಿದೆ ಎಂದು ಚಲನಚಿತ್ರ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಾಳು ಧನರಾಜ್ ಆಚಾರ್ಯ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಡಿ. 1 ರಂದು ಮರಿಕೇಸ್ ಪ್ಯಾರಡೈಸ್ ನ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಪುತ್ತೂರು : ತ್ರಿನೇತ್ರ ಕಾಂಪ್ಲೆಕ್ಸ್, ಆದರ್ಶ ಆಸ್ಪತ್ರೆ ಎದುರು ಎಪಿಎಂಸಿ ರಸ್ತೆ, ಪುತ್ತೂರಿನಲ್ಲಿ ಡಿ. 1 ರಂದು ಮರಿಕೇಸ್ ಪ್ಯಾರಡೈಸ್ ನ ನೂತನ ಸಂಸ್ಥೆಯ ಉಧ್ಘಾಟನಾ ಸಮಾರಂಭ ನಡೆಯಲಿದೆ. ಸಮಾರಂಭದ ದೀಪ ಪ್ರಜ್ವಲನೆಯನ್ನು ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷರು, ವ್ಯವಸ್ಥಪನಾ ಸಮಿತಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಪುತ್ತೂರು ಇವರು ನೆರವೇರಿಸಲ್ಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಪ್ರಕಾಶ್ ರಾವ್ ಕಲ್ಬಾವಿ, ಕಲ್ಬಾವಿ ಕನ್ಸ್ಯೂಮರ್ ಫುಡ್ ಪ್ರೈವೆಟ್ ಲಿಮಿಟೆಡ್ ಮಂಗಳೂರು, ಹಾಗೂ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ) ವಿಟ್ಲ ತಾಲೂಕು ಪೆರ್ನೆ ವಲಯದ ಕರ್ವೇಲು ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ವಿಟ್ಲ: ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ) ವಿಟ್ಲ ತಾಲೂಕು ಪೆರ್ನೆ ವಲಯದ ಕರ್ವೇಲು ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ಮಹೇಶ್ ಪಡಿವಾಳ್ ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ದೈಹಿಕ ಶಿಕ್ಷಕಿ ವಂದನಾ ರೈ ಮುದಲಾಜೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಭಾಗವಹಿಸಿ ಗ್ರಾಮದಲ್ಲಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದಿಂದಾದ ಬದಲಾವಣೆಗಳನ್ನು ನೆನಪಿಸಿ ಇತಿಹಾಸವನ್ನು ಎಂದಿಗೂ ಮರೆಯದೇ ಇನ್ನು...
1 37 38 39 40 41 725
Page 39 of 725