Wednesday, September 9, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ) ವಿಟ್ಲ ತಾಲೂಕು ಪೆರ್ನೆ ವಲಯದ ಕರ್ವೇಲು ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ವಿಟ್ಲ: ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ) ವಿಟ್ಲ ತಾಲೂಕು ಪೆರ್ನೆ ವಲಯದ ಕರ್ವೇಲು ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ಮಹೇಶ್ ಪಡಿವಾಳ್ ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು.

ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ದೈಹಿಕ ಶಿಕ್ಷಕಿ ವಂದನಾ ರೈ ಮುದಲಾಜೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಭಾಗವಹಿಸಿ ಗ್ರಾಮದಲ್ಲಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದಿಂದಾದ ಬದಲಾವಣೆಗಳನ್ನು ನೆನಪಿಸಿ ಇತಿಹಾಸವನ್ನು ಎಂದಿಗೂ ಮರೆಯದೇ ಇನ್ನು ಮುಂದೆಯೂ ಕ್ಷೇತ್ರದ ಕಾರ್ಯಕ್ರಮಗಳನ್ನು ಅನುಷ್ಠಾನಿಸಿ ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ದ.ಕ 2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ರವರು ಒಕ್ಕೂಟದ ಬಲವರ್ಧನೆಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸುರೇಶ್ ಗೌಡ ತಾಲೂಕು ಯೋಜನಾಧಿಕಾರಿಗಳು, ಗೀತಾ ವಿ ನೋಂಡಾ ದಾಮಸ್ ಕೋಡಿ, ರೋಹಿತಾಕ್ಷ ಬಾಣಬೆಟ್ಟು ಜನಜಾಗೃತಿ ವೇದಿಕೆ ವಲಯಾಧ್ಯಕ್ಷರು, ಸತೀಶ ಗೌಡ ಅಮಾಸೆ, ಕುಶಾಲಪ್ಪ ಹತ್ತು ಕಳಸೆ, ಶೌರ್ಯ ಕ್ಯಾಪ್ಟನ್ ಸುರೇಶ್ ಭಾಗವಹಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಲಯ ಮೇಲ್ವಿಚಾರಕಿ ಶಾರದಾ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ವೇಲು ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾದರಿ ಸ್ವ ಸಹಾಯ ಸಂಘ, ನಿಕಟಪೂರ್ವ ಒಕ್ಕೂಟದ ಅಧ್ಯಕ್ಷರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಹಿರಿಯ ಸದಸ್ಯರು, ಹಿಂದೆ ಸೇವೆ ಸಲ್ಲಿಸಿದ ಸೇವಾಪ್ರತಿನಿಧಿಗಳು, ಶೌರ್ಯ ಘಟಕದ ಸ್ವಯಂ ಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಬಿಳಿಯೂರು ಮಾಡತ್ತಾರು ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿಭೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರುಗಳಾದ ತನಿಯಪ್ಪ ಪೂಜಾರಿ, ಶೀನಪ್ಪ ಗೌಡ, ವಿಜಯ ನಾಯ್ಕ ಹೊಳೆಬದಿ, ಕೃಷ್ಣಪ್ಪ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳಾದ ಲಲಿತಾ ಬಾಣಬೆಟ್ಟು, ನಳಿನಿ, ಕುಶಾಲಪ್ಪ ಹಾಗೂ ಪುಷ್ಪಾವತಿ, ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಸಾಧನಾ ವರದಿಯನ್ನು ಅಶ್ಮಿತಾ ಮಂಡನೆ ಮಾಡಿದರು. ತನಿಯಪ್ಪ ಪೂಜಾರಿ ಸ್ವಾಗತಿಸಿ 20 ವರ್ಷಗಳ ಸೇವಾನುಭವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ರೇಶ್ಮಾ ಶೆಟ್ಟಿ ವಂದನಾರ್ಪಣೆ ಮಾಡಿದರು.