Monday, April 27, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಡಿ. 20 ರಂದು ಪುತ್ತೂರಲ್ಲಿ ‘ಕಲಾರ್ಣವ-2025’ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಸಹಯೋಗ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಸಹಕಾರದಲ್ಲಿ ಡಿಸೆಂಬರ್ 20ರಂದು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಗಡಿ- ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸುವ ‘ಕಲಾರ್ಣವ-2025’ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಶನಿವಾರ ಪುತ್ತೂರಲ್ಲಿ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಲ್ಲಿ ಎಲ್ಲರ ಸಹಕಾರ ಅತ್ಯವಶ್ಯಕ....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ಬೋಳಂತೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಕೂಸಪ್ಪ ಮಾಸ್ಟರ್ ಪ್ರಭುಗಳ ಬೆಟ್ಟು – ಕಹಳೆ ನ್ಯೂಸ್

ಕಲ್ಲಡ್ಕ : ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ಬೋಳಂತೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಬಿಲ್ಲವ ಸಂಘ (ರಿ.) ಕಲ್ಲಡ್ಕ ಇದರ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕೂಸಪ್ಪ ಮಾಸ್ಟರ್ ಪ್ರಭುಗಳ ಬೆಟ್ಟು, ಉಪಾಧ್ಯಕ್ಷರಾಗಿ ಚೆನ್ನಪ್ಪ ಪೂಜಾರಿ ಗುಂಡಿಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್ ಗಾಣದ ಬೆಟ್ಟು , ಜತೆ ಕಾರ್ಯದರ್ಶಿಯಾಗಿ ಭಾಸ್ಕರ್ ಕೊಕ್ಕಪುಣಿ, ಕಿರಣ್ ಪ್ರಭುಗಳ ಬೆಟ್ಟು, ಕೋಶಾಧಿಕಾರಿಯಾಗಿ ಸಂಜೀವ ಪೂಜಾರಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ವಿದ್ಯಾ ಕೇಂದ್ರದ ಅಟಲ್ ಪ್ರಯೋಗಾಲಯದಲ್ಲಿ ಅಟಲ್ ಟಿಂಕರಿಂಗ್ ಫೆಸ್ಟ್ 2025-26 – ಕಹಳೆ ನ್ಯೂಸ್

ಡಿ. 3  ರಂದು ಶ್ರೀ ರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಅಟಲ್ ಟಿಂಕರಿಂಗ್  ಫೆಸ್ಟ್ ಸಮಾರೋಪ ಸಮಾರಂಭ ಕಾರ್ಯಕ್ರಮವು ಸಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಕೃಷ್ಣಪ್ರಸಾದ್ ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪದವಿ ವಿಭಾಗದ ಪ್ರಾಂಶುಪಾಲರು ವಹಿಸಿದ್ದರು. ಶ್ರೀ ರಾಮ ಆಡಳಿತ ಮಂಡಳಿಯ ಸದಸ್ಯರಾದ ಶೀಮತಿ ಲಕ್ಷ್ಮಿ ರಘುರಾಜ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಳ್ಳಾಲ್ , ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ.ಗೋಪಾಲ್ ಮತ್ತು ಶ್ರೀ ರಾಮ ಇಂಗ್ಲೀಷ್...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭೆಯ ಅಧ್ಯಕ್ಷರೂ ಆದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ನಿಷೇಧಿತ ಮಾದಕವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪಿ ಬಂಧನ-ಕಹಳೆ ನ್ಯೂಸ್

ಕಬಕ ಗ್ರಾಮದ ಮುರ ಪ್ರದೇಶದಲ್ಲಿರುವ ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಕಲಂ 8(C), 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ-ಕಹಳೆ ನ್ಯೂಸ್

ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು ಡಿಸೆಂಬರ್ 14ರಂದು ಜೆ ಎಲ್ ಆಡಿಟೋರಿಯಂ ವಿಟ್ಲದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಬಣೆಯಿಂದ ನಡೆಯಲಿದೆ. ಬೆಳಗ್ಗೆ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ, ರವಿಶಂಕರ್ ಸಿ ಮೂಡಂಬೈಲು ಸಮಾರಂಭದ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಅಧ್ಯಕ್ಷರು ಸ್ವರ ಸಿಂಚನ ಸಂಗೀತ ಶಾಲೆ ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ...
ದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಡಿ.12 ರಂದು ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ತುಳು ಚಿತ್ರ ‘ಪಿಲಿ ಪಂಜ’- ಕಹಳೆ ನ್ಯೂಸ್

ಮಂಗಳೂರು : ಶಿಯಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಭರತ್ ಶೆಟ್ಟಿ ನಿರ್ದೇಶನ ಮತ್ತು ಚಿತ್ರಕಥೆ ಬರೆದು ಯುವ ನಿರ್ಮಾಪಕ ಪ್ರತೀಕ್ ಯು ಪೂಜಾರಿ ನಿರ್ಮಿಸಿರುವ ಬಹು ನಿರೀಕ್ಷಿತ ತುಳು ಚಿತ್ರ 'ಪಿಲಿ ಪಂಜ' ಡಿ.12 ರಂದು ಬಿಡುಗಡೆಯಾಗಲಿದೆ. ನ.14 ರಂದು ಬಿಡುಗಡೆಯಾಗಲಿರುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನದ ಮತ್ತೊಂದು ತುಳು ಚಿತ್ರ 'ಜೈ' ಜೊತೆ ಘರ್ಷಣೆಯನ್ನು ತಪ್ಪಿಸಲು ಬಿಡುಗಡೆಯನ್ನು ಮುಂದೂಡಲಾಗಿದೆ. ತುಳು ಚಲನಚಿತ್ರೋದ್ಯಮದಲ್ಲಿನ ಸಹಯೋಗದ ಆರೋಗ್ಯಕರ ಮನೋಭಾವವನ್ನು ಪರಿಗಣಿಸಿ,...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಪುತ್ತೂರಿನ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಡಿ.4 ರಿಂದ ಡಿ.6 ರವರೆಗೆ “ಆವಿಷ್ಕಾರ -2025” ಅಂತರ್ ಶಾಲಾ ವಿಜ್ಞಾನ ಮೇಳ ಹಾಗೂ ಚಿಣ್ಣರ ಚಿತ್ತಾರ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರಿನ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಡಿಸೆಂಬರ್ 4, 5 ಮತ್ತು 6, ಈ ಮೂರು ದಿನಗಳಂದು, ಅವಿಷ್ಕಾರ - 2k25', ಅಂತರ್ ಶಾಲಾ ವಿಜ್ಞಾನ ಮೇಳ ಹಾಗೂ ಚಿಣ್ಣರ ಚಿತ್ತಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020, ಇದರ ಆಶಯಗಳಿಗೆ ಪೂರಕವಾಗಿ; ವಿಶೇಷವಾದ ಅನುಭವದಿಂದ ಕಲಿಯುವುದು, ದೈನಂದಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು ಮತ್ತು ಸೃಜನಶೀಲತೆಯ ಮೇಲೆ ಈ ಕಾರ್ಯಕ್ರಮಗಳು ಕೇಂದ್ರೀಕೃತವಾಗಿವೆ. ಈ...
1 36 37 38 39 40 725
Page 38 of 725