ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಉಲ್ಲಾಳ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1801ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ–ಕಹಳೆ ನ್ಯೂಸ್
ನಮ್ಮ ನಿರ್ಧಾರ ನಮ್ಮ ಕೈಯಲ್ಲಿದೆ,ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಹವ್ಯಾಸಗಳನ್ನು ಬದಲಾಯಿಸಬಹುದು, ಹವ್ಯಾಸಗಳು ನಮ್ಮ ಭವಿಷ್ಯವನ್ನೇ ಬದಲಾಯಿಸಬಲ್ಲದು. ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ (ರಿ )ಧರ್ಮಸ್ಥಳ,ಉಡುಪಿ ಪ್ರಾದೇಶಿಕ ವಿಭಾಗದ,ಮಂಜೇಶ್ವರ ತಾಲೂಕಿನ,ಪೆರ್ಲ ವಲಯದ, ಕಾಸರಗೋಡು ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಉಲ್ಲಾಳ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1801 ನೇ ಮಧ್ಯವರ್ಜನ ಶಿಬಿರದ ಕುಟುಂಬ...







