Thursday, June 11, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡದೆಹಲಿಪುತ್ತೂರುರಾಷ್ಟ್ರೀಯವಾಣಿಜ್ಯಸುದ್ದಿ

ಪುತ್ತೂರು ಗೇರು ಸಂಶೋಧನಾ ಕೇಂದ್ರದ ಎರಡು ತಳಿ ಪ್ರಧಾನಿ ನರೇಂದ್ರ ಮೋದಿಯಿಂದ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಕೇಂದ್ರ ಸರಕಾರವು 100 ದಿನಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಅಂಗವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಆಗಸ್ಟ್‌ ಎರಡನೇ ವಾರದಲ್ಲಿ ವಿವಿಧ ವಾರ್ಷಿಕ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಒಟ್ಟು 109 ಸುಧಾರಿತ, ಹವಾಮಾನ ಬದಲಾವಣೆಗೆ ಸ್ಪಂದಿಸುವ ಪೋಷಕಾಂಶ ಸಮೃದ್ಧ ತಳಿಗಳು ಬಿಡುಗಡೆಗೊಳ್ಳಲಿವೆ. ಇದರಲ್ಲಿ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನ ಕೇಂದ್ರದ ಎರಡು ಸುಧಾರಿತ ಗೇರು ಹೈಬ್ರಿಡ್‌ ತಳಿಗಳಾದ ನೇತ್ರಾ ಜಂಬೋ-1 ಮತ್ತು ನೇತ್ರಾ ಗಂಗಾ ಸೇರಿವೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ NATA ತರಗತಿ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಕನಸಿನ ಉದ್ಯೋಗವನ್ನು ಗಮನದಲ್ಲಿಟ್ಟುಕೊಂಡು ಪದವಿ ಪೂರ್ವ ಸಂದರ್ಭದಲ್ಲಿಯೇ ಸಮರ್ಪಕ ತಯಾರಿ ನಡೆಸಿಕೊಳ್ಳುವುದು ಉತ್ತಮ. ಉದ್ಯೋಗ ಗಳಿಸುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಿ ನೀಡಬಹುದಾದ ಕೊಡುಗೆಗಳ ಕುರಿತೂ ಯೋಚನೆ, ಯೋಜನೆ ರೂಪಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪ.ಪೂ.ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಓಂಖಿಂ ತರಗತಿಗಳ ಉದ್ಘಾಟನಾ ಕಾರ್ಯಕ್ರಮದ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ – ಕಹಳೆ ನ್ಯೂಸ್

ಪುತ್ತೂರು: ಪದವಿ ಪೂರ್ವ ದ್ವಿತೀಯ ವರ್ಷ ಎನ್ನುವುದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಿದೆ. ಪಿಯುದಲ್ಲಿ ನಡೆಸಲ್ಪಡುವ ಸಿ.ಇ.ಟಿ.ಯಲ್ಲಿ ಉತ್ತಮ ಅಂಕ ಪಡೆದಲ್ಲಿ ವಿದ್ಯಾರ್ಥಿಗಳ ಮುಂದಿನ ಜೀವನ ಸುಗಮವಾಗುವುದು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಹೇಳಿದರು. ಅವರು ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವವಿದ್ಯಾಲಯದ ಶಿಕ್ಷಕ -ರಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ವಿದ್ಯಾರ್ಥಿನಿ ದೃಶಾನ ಸುರೇಶ್ ಸರಳಿಕಾನ ಕರಾಟೆ ಚಾಂಪಿಯಷಿಪ್‍ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ವಿದ್ಯಾರ್ಥಿನಿ ದೃಶಾನ ಸುರೇಶ್ ಸರಳಿಕಾನ ಜಿಲ್ಲಾಮಟ್ಟದ ಕರಾಟೆ ಚಾಂಪಿಯಷಿಪ್‍ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ದೃಶಾನ ಸುರೇಶ್ ಸರಳಿಕಾನ ಅವರು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಆ. 8ರಂದು ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ 14 ವಯೋಮಿತಿ ಒಳಗಿನ (ಕಿಶೋರ ವರ್ಗ) ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ಇವರು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ- ವಿವೇಕಾನಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ- ಕಹಳೆ ನ್ಯೂಸ್

ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತದೆ. ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅದ್ವಿತ್‌ ಶರ್ಮ, ದುರ್ಗೇಶ್‌ ಮೌರ್ಯ ದ್ವಿತೀಯ ವಾಣಿಜ್ಯ ವಿಭಾಗದ ಸೃಜನ್‌ ಲಕ್ಕಪ್ಪ ಪ್ರಥಮ ವಾಣಿಜ್ಯ ವಿಭಾಗದ ಪ್ರಮಥ್‌ ಎಮ್‌ ಭಟ್‌, ರಾಮಪ್ರಸಾದ್‌ ಬಿ ಎನ್‌ ಪ್ರಥಮ ವಿಜ್ಞಾನ ವಿಭಾಗದ ರಿಷಿ ಬೆಳ್ಳಿಯ ಪದಕ ಗಳಿಸಿರುತ್ತಾರೆ....
ದಕ್ಷಿಣ ಕನ್ನಡಸುದ್ದಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಉಪ ವಿಭಾಗಾಧಿಕಾರಿಯವರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ – ಕಹಳೆ ನ್ಯೂಸ್

ಇತ್ತೀಚೆಗೆ ರಾಜ್ಯ ಸರಕಾರ ರಾಮನಗರದ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಖಂಡನೀಯ, ತನ್ನದೇ ಆದ ಇತಿಹಾಸ ಹೊಂದಿರುವ ರಾಮನಗರದ ಹೆಸರನ್ನು ಬದಲಾಯಿಸಬಾರದು. ಬದಲಾವಣೆಯ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು. ಮತ್ತು ರಾಜ್ಯ ರಾಜಧಾನಿಯಲ್ಲಿ ಅಕ್ರಮ ಮಾಂಸ ಸರಬರಾಜು ಆದದ್ದನ್ನು ಖಂಡಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿ ಮಾಡಿದ ರಾಷ್ಟ್ರ ರಕ್ಷಣೆ ಪಡೆಯ ಅಧ್ಯಕ್ಷರಾದ ಶ್ರೀ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಎಸ್. ಪಿ. ಚಂದನ್ ಅವರನ್ನು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ SSLC ವಿದ್ಯಾರ್ಥಿ – ಕಹಳೆ ನ್ಯೂಸ್

ಬಂಟ್ವಾಳ: ಸ್ಪಷ್ಟವಾದ ಕಾರಣವಿಲ್ಲದೆ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗಸ್ಟ್ 7 ರಂದು ಬುಧವಾರ ರಾತ್ರಿ ವೇಳೆನಡೆದಿದೆ. ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ ( 15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಬಡಕಬೈಲು ಸೈಂಟ್ ಡೊಮೊನಿಕ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ತಿಳಿಸಿದ್ದಾರೆ. ರಾತ್ರಿ...
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾಭಾರತಿ ಜಿಲ್ಲಾಮಟ್ಟದ ಶಟಲ್‌ ಬ್ಯಾಡ್ಮಿಂಟನ್‌- ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ – ಕಹಳೆ ನ್ಯೂಸ್

ಅಂಬಿಕಾ ಪದವಿಪೂರ್ವ ಕಾಲೇಜು ಇದರ ಸಹಯೋಗದಲ್ಲಿ ಸುದಾನ ಸ್ಪೋರ್ಟ್ಸ್ ಕ್ಲಬ್‌ ಸಾಮೆತ್ತಡ್ಕ, ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ನೇಹಶ್ರೀ, ಪುಲಕಿತ ಹಾಗೂ ದ್ವಿತೀಯ ಪಿಯುಸಿಯ ಹರ್ಷಿತ ಭಾಗವಹಿಸಿದ್ದರು. ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನ್ವಿತ್‌ ರೈ,...
1 344 345 346 347 348 739
Page 346 of 739