ಭಕ್ತರ ಜೊತೆ ಕೆಂಡ ಹಾಯ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ..! -ಕಹಳೆ ನ್ಯೂಸ್
ಹಾಸನ: ಹಾಸನಾಂಬೆ ದೇವಾಲಯದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಹಾಸನದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಭಕ್ತರ ಜೊತೆ ಕೆಂಡ ಹಾಯ್ದು ಹರಕೆ ತೀರಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕಳಸ ಹೊತ್ತು ಮಹಿಳೆಯರು ಕೆಂಡ ಹಾಯುತ್ತಿರುವುದನ್ನು ನೋಡಿದೆ. ನನಗೂ ಕೂಡ ಕೆಂಡ ಹಾಯಬೇಕು ಎಂದು ಮನಸ್ಸಾಯಿತು. ನಾನು ಹಿಂದೆಂದೂ ಕೆಂಡ ಹಾಯ್ದಿರಲಿಲ್ಲ. ಈ ವರ್ಷದ ಹಾಸನಾಂಬೆ ಉತ್ಸವ ಕೊನೆಯಾಗಿದೆ. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಮಧ್ಯಾಹ್ನ ಗರ್ಭಗುಡಿಯ ಬಾಗಿಲು...







