ಕೈ ಹೈಕಮಾಂಡ್ ಗೆ ಬ್ಲ್ಯಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಸಮಾವೇಶ: ಬಿ ವೈ ವಿಜಯೇಂದ್ರ – ಕಹಳೆ ನ್ಯೂಸ್
ಮೈಸೂರು: ಸಿದ್ದರಾಮಯ್ಯ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ದರಾಮಯ್ಯ. ಸಿಎಂ ಸ್ಥಾನ ಅಲ್ಲಾಡುವ ವೇಳೆಯಲ್ಲಿ ಈ ರೀತಿಯ ಸಮಾವೇಶ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಬೆದರಿಸುವ ತಂತ್ರ ಸಿದ್ದರಾಮಯ್ಯಗೆ ಸಿದ್ಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶುಕ್ರವಾರ (ಜು.18) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಸಮಯವೇ ಸಿಕ್ಕಿಲ್ಲ, ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಗೆ ಸವಾಲು ಹಾಕಲು...







