Friday, April 24, 2026

ಮೈಸೂರು

ಜಿಲ್ಲೆಮೈಸೂರುಸುದ್ದಿಹೆಚ್ಚಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ನಾಡಹಬ್ಬ ದಸರಾದ ಅಧಿಕೃತ ಆಹ್ವಾನ ಪತ್ರಿಕೆ ನೀಡಿದ ಜಿಲ್ಲಾಡಳಿತ -ಕಹಳೆ ನ್ಯೂಸ್

ಮೈಸೂರು : ಸಿಎಂ ಸಿದ್ದರಾಮಯ್ಯಗೆ ಮೈಸೂರು ಜಿಲ್ಲಾಡಳಿತ ಇಂದು ನಾಡ ಹಬ್ಬ ದಸರಾದ ಆಹ್ವಾನ ಪತ್ರಿಕೆ ನೀಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಮೈಸೂರು ಜಿಲ್ಲಾಡಳಿತದವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡ ಹಬ್ಬ ದಸರಾದ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು. ನಾಡಹಬ್ಬ ದಸರಾದ ಅಧಿಕೃತ ಆಮಂತ್ರಣ ಪತ್ರಿಕೆ ಇಂದು ನನ್ನ ಕೈಸೇರಿತು....
ಜಿಲ್ಲೆಮೈಸೂರುಸುದ್ದಿಹೆಚ್ಚಿನ ಸುದ್ದಿ

ಚಾಮುಂಡಿ ಬೆಟ್ಟ ಮುಸಲ್ಮಾನರದ್ದು ಅಲ್ಲ ಸರಕಾರದ್ದು ಅಲ್ಲ. ಅದು ಹಿಂದೂಗಳದ್ದಾಗಿದೆ – ಹಿಂದೂ ಜನಜಾಗೃತಿ ಸಮಿತಿ – ಕಹಳೆ ನ್ಯೂಸ್

ಮೈಸೂರು ಚಾಮುಂಡಿ ಬೆಟ್ಟದ ಕುರಿತು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರು ನೀಡಿದ “ಚಾಮುಂಡಿ ಬೆಟ್ಟವು ಹಿಂದೂಗಳ ಸ್ವತ್ತಲ್ಲ” ಎಂಬ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಚಾಮುಂಡಿ ಬೆಟ್ಟವು ಸಾರ್ವಜನಿಕ ಸ್ವತ್ತು ಅಲ್ಲ, ಅದು ಅತೀ ಪ್ರಾಚೀನದಿಂದಲೂ ಹಿಂದೂಗಳ ಧಾರ್ಮಿಕ ಕೇಂದ್ರವಾಗಿದ್ದು, ಹಿಂದೂಗಳ ಸ್ವತ್ತಾಗಿದೆ ಎಂಬುದು ತ್ರಿಕಾಲ ಸತ್ಯ. ದೇಶ-ವಿದೇಶಗಳಿಂದ ಅನೇಕ ಹಿಂದೂ ಭಕ್ತರು ಭಕ್ತಿಭಾವದಿಂದ ಚಾಮುಂಡೇಶ್ವರಿ ದೇವಿಯನ್ನು ದರ್ಶನ ಮಾಡಲು ಆಗಮಿಸುವರು. ಈ ರೀತಿಯ ಹೇಳಿಕೆಗಳು...
ಜಿಲ್ಲೆಮೈಸೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ಮೈಸೂರಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು : ಸ್ವಾಗತಿಸಿದ ರಾಜ್ಯಪಾಲ, ಸಿಎಂ – ಕಹಳೆ ನ್ಯೂಸ್

ಮೈಸೂರು: ನಗರದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಂಜೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದರು. ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು. ಅಲ್ಲಿಂದ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತೆರಳಿದರು. ಅಂಗಡಿ ಮುಂಗಟ್ಟು ಬಂದ್, ಕಟ್ಟೆಚ್ಚರ: ರಾಷ್ಟ್ರಪತಿ ಅವರು ತೆರಳುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ....
ಜಿಲ್ಲೆಮೈಸೂರುಸುದ್ದಿಹೆಚ್ಚಿನ ಸುದ್ದಿ

ಚಾಮುಂಡಿ ತಾಯಿ ಹಿಂದೂ ದೇವರು, ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು : ಡಿಸಿಎಂ ಡಿಕೆಶಿಗೆ ಪ್ರಮೋದದೇವಿ ತಿರುಗೇಟು -ಕಹಳೆ ನ್ಯೂಸ್

ಮೈಸೂರು : ಬ್ರೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟ ಏನು ಹಿಂದೂಳ ಆಸ್ತಿ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇದೀಗ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಚಾಮುಂಡಿ ತಾಯಿ ಹಿಂದೂ ದೇವರು ಚಾಮುಂಡಿ ಬೆಟ್ಟ ಹಿಂದೂಗಳಿಗೆ...
ಜಿಲ್ಲೆಮೈಸೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ಮೈಸೂರು ದಸರಾ ಉದ್ಘಾಟನೆಗೆ ಬಾನೂ ಮುಷ್ತಾಕ್ ರವರಿಗೆ ಆಹ್ವಾನ ದುರದೃಷ್ಟಕರ; ಸರ್ಕಾರ ತಕ್ಷಣ ಮರುಪರಿಶೀಲಿಸಬೇಕು – ಹಿಂದೂ ಜನಜಾಗೃತಿ ಸಮಿತಿ -ಕಹಳೆ ನ್ಯೂಸ್

ಮೈಸೂರು ದಸರಾ ಕರ್ನಾಟಕದ ಅತ್ಯಂತ ಭವ್ಯವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿದ್ದು, ಕೋಟ್ಯಂತರ ಹಿಂದೂಗಳಿಗೆ ಭಕ್ತಿ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿದೆ. ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನಗಳ ಕಾಲ, ಹಿಂದೂಗಳು ಕಾಳಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ, 10 ನೇ ದಿನ ಚಾಮುಂಡೇಶ್ವರಿ ದೇವಿಯ ವಿಜಯೋತ್ಸವದ ಆಚರಣೆಯಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಅಂತಹ ಪವಿತ್ರ ಉತ್ಸವವನ್ನು ಉದ್ಘಾಟಿಸುವವರಿಗೆ ದೇವಿಯ ಮೇಲೆ ನಂಬಿಕೆ, ವಿಗ್ರಹ ಪೂಜೆಯನ್ನು ಗೌರವಿಸುವವರು ಮತ್ತು ಈ ನೆಲದ...
ಜಿಲ್ಲೆಮೈಸೂರುಸುದ್ದಿಹೆಚ್ಚಿನ ಸುದ್ದಿ

ಅರಣ್ಯ ವನ್ಯಜೀವಿಗಳ ಜೊತೆ ಪ್ರವಾಸಿಗರ ಹುಚ್ಚು ಸಾಹಸ: ಬಂಡೀಪುರದಲ್ಲಿ CCTV ಅಳವಡಿಕೆ -ಕಹಳೆ ನ್ಯೂಸ್

ಮೈಸೂರು: ಕಾಡಿನೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ಪ್ರಾಣಿಗಳನ್ನು ಕಂಡಾಕ್ಷಣ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕುವ ಬೆಳವಣಿಗೆಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಒಳಗೆ 20 ಕಿ.ಮೀ. ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಪ್ರವಾಸಿಗನೊಬ್ಬ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನದ ವೇಳೆ ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿದ ಘಟನೆ ಬೆನ್ನಲ್ಲೇ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ....
ಬೆಂಗಳೂರುಮೈಸೂರುಸುದ್ದಿ

ಮುಡಾ ಹಗರಣದಲ್ಲಿ ಸಿಎಂ ಪತ್ನಿಗೆ ರಿಲೀಫ್‌ – ಇ.ಡಿ ಗೆ ಚಾಟಿ ಬೀಸಿದ ಸುಪ್ರೀಂ!

ನವದೆಹಲಿ : ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ವಿರುದ್ದ ಪ್ರಕರಣದ ದಾಖಲಿಸಿದ್ದ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.   ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಗೆಲುವು ದೊರತಂತಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನಾಧರಿಸಿ ಜಾರಿ ನಿರ್ದೇಶನಾಲಯದ ತನಿಖೆ ಕೈಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಜಾರಿ...
ಮೈಸೂರುಸುದ್ದಿ

ಕೆ.ಆರ್.ಎಸ್ ಹಿನ್ನೀರಿನಲ್ಲಿ ದುರಂತ: ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು -ಕಹಳೆ ನ್ಯೂಸ್

ಮೈಸೂರು: ಪ್ರವಾಸಕ್ಕೆ ಬಂದಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಕೆ.ಆರ್.ಎಸ್ ಹಿನ್ನೀರಿನಲ್ಲಿ ನೀರುಪಾಲಾಗಿರುವ ಘಟನೆ ಮೈಸೂರಿನ ಮೀನಾಕ್ಷಿಪುರದಲ್ಲಿ ನಡೆದಿದೆ. ಮಂಡ್ಯದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ್, ಸಿದ್ದ ಹಾಗೂ ಕೃಷ್ಣ ನೀರು ಪಾಲಾಗಿರುವ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಕೆ.ಆರ್. ಎಸ್ ಹಿನ್ನೀರಿಗೆ ಇಳಿದವರು ನೀರಿನಲ್ಲಿ ಮುಳುಗಿ ನೀರು ಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲವಾಲ ಪೊಲೀಸ್ ಠಾಣೆ...
1 4 5 6 7 8 19
Page 6 of 19