ಪತ್ನಿಯ ಪ್ಲ್ಯಾನ್‌ನಂತೆ ಪ್ರಿಯಕರನಿಂದ ಕೊಲೆ : ಲವ್ವರ್ಸ್ ಅರೆಸ್ಟ್ – ಕಹಳೆ ನ್ಯೂಸ್
ಮಂಡ್ಯ: ಅರ್ಚಕ ಅನುಮಾನಾಸ್ಪದವಾಗಿ ಸಾವನ್ನಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಕಾಮದಾಟಕ್ಕೆ ಅಡ್ಡಿಯಾಗಬಾರದೆಂದು ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ ಮರಳಗಾಲ ಬಳಿ ನಡೆದಿದೆ. ಮೃತ ಪತಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಪತ್ನಿ ಶಾಲಿನಿ ಹಾಗೂ ಪ್ರಿಯಕರನನ್ನು ಹರೀಶ್ ಎನ್ನಲಾಗಿದೆ. ಸಿದ್ದಲಿಂಗಪ್ಪ ಹಾಗೂ ಶಾಲಿನಿಗೆ ಎರಡು ಮಕ್ಕಳಿದ್ದವು ಎಂದು ತಿಳಿದುಬಂದಿದೆ. ಮಾ.6ರಂದು ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಿನಿ ಹಾಗೂ...






