Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ವತ್ರೆಯಲ್ಲಿ ಕೋವಿಡ್ ಲಸಿಕೆ ಲಭ್ಯ-ಕಹಳೆ ನ್ಯೂಸ್

ಉಜಿರೆ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ವತ್ರೆಯಲ್ಲಿ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಕೊರೊನಾ ನಿಯಂತ್ರಣ ಕೋವಿಡ್ ಲಸಿಕೆಯನ್ನು ಸರಕಾರದ ಆದೇಶದಂತೆ ನೀಡಲಾಗುತ್ತಿದೆ. ತಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ರೂಪಾಯಿ 250 ಪಾವತಿಸಿ ಲಸಿಕೆ ಪಡೆಯಬಹುದಾಗಿದೆ. ಲಸಿಕೆ ಪಡೆಯಲಿಚ್ಚಿಸುವವರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ಮೊಬೈಲ್ ಸಂಖ್ಯೆ 9071145369 ಅಥವಾ 9945923743 ಗೆ ಸಂಪರ್ಕಿಸಬಹುದಾಗಿದೆ ರಂದು ಆಸ್ವತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ....
ಹೆಚ್ಚಿನ ಸುದ್ದಿ

ಖಾಸಗಿ ಬಸ್ಸೊಂದು ಆಳವಾದ ಕಮರಿಗೆ ಬಿದ್ದ ಪರಿಣಾಮ 8 ಮಂದಿಯ ಸಾವು, 11 ಮಂದಿಗೆ ಗಾಯ-ಕಹಳೆ ನ್ಯೂಸ್

ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಬುಧವಾರ ಖಾಸಗಿ ಬಸ್ಸೊಂದು ಆಳವಾದ ಕಮರಿಗೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿ, 11 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಬಾದಿಂದ ಟೀಸಾಗೆ ಬರುತ್ತಿದ್ದ ಸಂದರ್ಭದಲ್ಲಿ ಖಾಸಗಿ ಬಸ್ ಸಮೀಪದ ಆಳವಾದ ಕಮರಿಗೆ ಬಿದ್ದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ ಚಂಬಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಅರುಲ್ ಕುಮಾರ್ ಹೇಳಿದ್ದಾರೆ. ಹಿರಿಯ ಪೊಲೀಸರು ಘಟನಾ ಸ್ಥಳಕ್ಕೆ...
ಹೆಚ್ಚಿನ ಸುದ್ದಿ

ಕೋಟ ದೇವಸ್ಥಾನದ ಬಾವಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ-ಕಹಳೆ ನ್ಯೂಸ್

ಕೋಟ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯಲ್ಲಿರುವ ಶಿರಸಿ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಬಾವಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು ಕೋಟತಟ್ಟು ಪಡುಕರೆ ನಿವಾಸಿ 51 ವರ್ಷದ ಚೆನ್ನಯ್ಯ ಪೂಜಾರಿ ಎಂದು ಗುರುತಿಸಲಾಗಿದೆ. ಪಡುಕರೆ ಸಮುದ್ರ ತೀರದಲ್ಲಿ ಬೀಡಾ ಅಂಗಡಿಯೊಂದನ್ನು ಇರಿಸಿಕೊಂಡು ಜೀವನ ಸಾಗಿಸುತ್ತಿದ್ದ ಚೆನ್ನಯ್ಯ ಪೂಜಾರಿ ಇಂದು ಮುಂಜಾನೆ ಬಾವಿಯ ಹಗ್ಗಕ್ಕೆ ನೇಣು ಬಿಗಿದು, ಬಾವಿಯಲ್ಲಿಯೇ ಆತ್ಮಹತ್ಯೆ...
ಹೆಚ್ಚಿನ ಸುದ್ದಿ

ಬಿಜೆಪಿ ಧರ್ಮದೊಂದಿಗೆ ಆಟವಾಡುತ್ತಿದೆ ; ಮಮತಾ ಬ್ಯಾನರ್ಜಿ ಕಿಡಿ-ಕಹಳೆ ನ್ಯೂಸ್

ಕೋಲ್ಕತಾ : ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಧರ್ಮದೊಂದಿಗೆ ಆಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿರುವ ನಂದಿಗ್ರಾಮದಲ್ಲಿ ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ದುರ್ಗಾ ಮಂತ್ರವನ್ನು ವೇದಿಕೆಯಲ್ಲೇ ಪಠಿಸಿದರು. ತನ್ನನ್ನು ಹೊರಗಿನವಳು ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಬಂಗಾಳ ರಾಜ್ಯವನ್ನು ವಿಭಜಿಸುತ್ತಿದೆ. ಆ ಪಕ್ಷದವರು ನನ್ನನ್ನು ಹೊರಗಿನವಳು ಎಂದು ಕರೆಯುತ್ತಿದ್ದಾರೆ. ನಾನು ಹೊರಗಿನವಳಾಗಿದ್ದರೆ ಹೇಗೆ ಮುಖ್ಯಮಂತ್ರಿಯಾಗುತ್ತಿದ್ದೆ? ನಂದಿಗ್ರಾಮ ನನಗೆ...
ಹೆಚ್ಚಿನ ಸುದ್ದಿ

ಕೋಲಾರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು-ಕಹಳೆ ನ್ಯೂಸ್

ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲಿನ ಹೊಸಪಾಳ್ಯದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದಿರುವ ಘಟನೆ ನಡೆದಿದೆ. ಕೊಲೆಯಾದ ದುರ್ದೈವಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ 18 ವರ್ಷದ ವಿದ್ಯಾರ್ಥಿನಿ ಪ್ರಿಯಾಂಕ ಎಂಬಾಕೆ. ಶ್ರೀನಿವಾಸಪುರ ಮೂಲದ ಯುವತಿಯ ಕುಟುಂಬದವರು ಹೊಸಪಾಳ್ಯ ದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇರಲಿಲ್ಲ. ಯುವತಿ ಮನೆಯಲ್ಲಿ ಅಡ್ಡಾಡಿಕೊಂಡಿರುವುದನ್ನು ನೆರೆ ಹೊರೆಯವರು ನೋಡಿದ್ದಾರೆ. ಆದರೆ ಪಾಲಕರು ಮನೆಗೆ...
ಹೆಚ್ಚಿನ ಸುದ್ದಿ

ಕಲ್ಲಡ್ಕದ ಯುವಕ ಮುತ್ತಲಿಬ್ ದುಬೈನಲ್ಲಿ ನಿಗೂಢ ಸಾವು-ಕಹಳೆ ನ್ಯೂಸ್

ವಿಟ್ಲ : ಬೋಳಂತೂರು ನಾರ್ಶದ ನಿವಾಸಿ ಸೂಫಿ ಮುಕ್ರೀಕರ ಅವರ ಪುತ್ರ ಮುತ್ತಲಿಬ್ ದುಬೈಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮುತ್ತಲಿಬ್ ಅವರ ಮೊಬೈಲ್ ಹಲವಾರು ದಿನಗಳಿಂದ ಸ್ವಿಚ್ ಆಫ್ ಆಗಿತ್ತು. ಯಾರಿಗೂ ಸಂಪರ್ಕಕ್ಕೆ ಸಿಗದಿದ್ದುದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು. ಆದರೆ ದುಬೈನ ಅಲ್-ರಫಾದಲ್ಲಿ ಭಾನುವಾರ ಅವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆ ನಂತರ ಮುತ್ತಲಿಬ್ ಅವರ ಪಾಸ್‌ಪೋರ್ಟ್ ಸಂಖ್ಯೆ ಆಧರಿಸಿ, ಭಾರತೀಯ ಪ್ರಜೆ ಎಂದು ಖಚಿತ ಪಡಿಸಿಕೊಂಡ...
ಹೆಚ್ಚಿನ ಸುದ್ದಿ

ಹೆಣ್ಣು ಮಕ್ಕಳಿರುವ ಮನೆಯ ಮುಂದೆ ಚಪ್ಪಲಿ ತಂದಿಡುತ್ತಿರುವ ಸೈಕೋ! ; ಏನಿದು ವಿಚಿತ್ರ ಪ್ರಕರಣ?-ಕಹಳೆ ನ್ಯೂಸ್

ಕೊಲ್ಲಂ : ಇದೊಂದು ವಿಚಿತ್ರ ಪ್ರಕರಣ. ಹೆಣ್ಣು ಹೆತ್ತವರು ಈ ಪ್ರಕರಣದಿಂದಾಗಿ ಬೆಚ್ಚಿ ಬಿದ್ದಿದ್ದು, ತಮ್ಮ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವಂತಾಗಿದೆ. ಕೇರಳದ ಕೊಟ್ಟಿಯಂ ಪೊಲೀಸ್ ಠಾಣೆಯಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯ ಎರಡು ಪ್ರದೇಶಗಳಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು! ಅದು ಅವನೋ ಅವಳೋ ಎನ್ನುವುದು ತಿಳಿದಿಲ್ಲ. ಆದರೆ, ಯಾರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೋ ಅವರ ಮನೆಯ ಮುಂಭಾಗದಲ್ಲಿ ಹೆಣ್ಣು ಮಕ್ಕಳು ಧರಿಸುವ ಚಪ್ಪಲಿಗಳು ಪತ್ತೆಯಾಗುತ್ತಿವೆ....
ಹೆಚ್ಚಿನ ಸುದ್ದಿ

ತೋಟದ ಕೆಲಸದ ವೇಳೆಯಲ್ಲಿ ಗುಡ್ಡ ಕುಸಿತ ; 4 ಕಾರ್ಮಿಕರ ದುರಂತ ಸಾವು-ಕಹಳೆ ನ್ಯೂಸ್

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಇಡಗುಂದಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮಣ್ಣು ಕುಸಿದು ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ನಿವಾಸಿ ಗೌಳಿವಾಡದ 38 ವರ್ಷದ ಭಾಗ್ಯ ಲಕ್ಷ್ಮಿ, 18 ವರ್ಷದ ಸಂತೋಷ್ ಡೋಯಿಪಡೆ ಮತ್ತು 21 ವರ್ಷದ ಮಾಲು ಡೋಯಿಪಡೆ, 21 ವರ್ಷದ ಭಾಗ್ಯಶ್ರೀ ಎಡಗೆ ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೋಟದ...
1 83 84 85 86 87 174
Page 85 of 174