ಮತಾಂತರಗೊಂಡು ಹೆಣವಾದ ಯುವತಿ! -ಕಹಳೆ ನ್ಯೂಸ್
ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು ನ್ಯಾಯಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೋರಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಲಾರದೇ ಉತ್ತರ ಪ್ರದೇಶದ ವಿಧಾನಸಭಾ ಕಟ್ಟಡದ ಎದುರೇ ಮೊನ್ನೆ ಬೆಂಕಿಹಚ್ಚಿಕೊಂಡಿದ್ದ ಈ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಂಜನಾ ತಿವಾರಿ ಅಲಿಯಾಸ್ ಆಯೇಷಾ ಈ ದುರ್ದೈವಿ. ಗಂಡನ ಮನೆಯವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಮುಖ್ಯಮಂತ್ರಿಗಳನ್ನೇ...







