ಬರೋಬ್ಬರೀ ಆರು ದಶಕಗಳ ನಂತರ ಮೈಸೂರು ರಾಜ ಮನೆತನದಲ್ಲಿ ಸೀಮಂತ ಸಂಭ್ರಮ!
ಮೈಸೂರು: ಮೈಸೂರು ರಾಜಮನೆತನ ಸಂತೋಷದಲ್ಲಿ ತೇಲುತ್ತಿದೆ. ಭಾನುವಾರ ಮೈಸೂರಿನ ಅಂಬವಿಲಾಸ ಅರಮನೆಯಲ್ಲಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ದೇವಿಗೆ ಸೀಮಂತ ಶಾಸ್ತ್ರ ನಡೆಯಿತು. ಇನ್ನೆರಡು ತಿಂಗಳಲ್ಲಿ ರಾಜ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅರಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರನ್ನು ಹೊರಗಿಡಲಾಗಿತ್ತು, ಕೇವಲ ಕುಟುಂಬದ ಆಪ್ತರಷ್ಟೆ ಭಾಗಿಯಾಗಿದ್ದರು. 2016ರ ಜೂನ್ ನಲ್ಲಿ ರಾಜ್ ಕೋಟ್ ನ ರಾಜಮನೆತನದ ತ್ರಿಷಿಕಾ ಕುಮಾರಿ ಯಧುವೀರ್ ಅವರನ್ನು ವಿವಾಹವಾಗಿದ್ದರು,...







