Saturday, June 20, 2026

ಸುದ್ದಿ

ಸುದ್ದಿ

ಕೆಂಪೇಗೌಡ ಏರ್ಪೋರ್ಟ್ ನಲ್ಲಿ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ, ಮೂವರು ಅರೆಸ್ಟ್ -ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಥಾಯ್ಲೆಂಡ್​ನ ಪುಕೆಟ್​ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ ಮೂವರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳನ್ನು ಇಮಿಗ್ರೇಷನ್​ ವಿಭಾಗದಲ್ಲಿ ಪರಿಶೀಲಿಸಿದಾಗ, ಪ್ಯಾಕೆಟ್‌ಗಳಾಗಿ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಫೈಲ್‌ಗಳನ್ನು ಹೊಸ ಅಧಿಕಾರಿಗಳಿಗೆ ಕೊಡ್ಬೇಡಿ :ವರ್ಗಾವಣೆಯಾದ್ರೂ ಅಧಿಕಾರಿಗಳಿಗೆ ವರ್ತಿಕಾ ಕರೆ – ಕಹಳೆ ನ್ಯೂಸ್

ಬಳ್ಳಾರಿ: ಬ್ಯಾನರ್‌ ಗಲಭೆ ಬಳಿಕ ವರ್ಗಾವಣೆ ಆಗಿದ್ದ ಡಿಐಜಿ (DIG) ಆಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಫೈಲ್‌ಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಬೆದರಿಕೆ ಹಾಕಿದ್ದಾರೆ. ಬಳ್ಳಾರಿ: ಬ್ಯಾನರ್‌ ಗಲಭೆ ಬಳಿಕ ವರ್ಗಾವಣೆ ಆಗಿದ್ದ ಡಿಐಜಿ ಆಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಫೈಲ್‌ಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಬೆದರಿಕೆ ಹಾಕಿದ್ದಾರೆ.   ವರ್ತಿಕಾ ಅವರನ್ನು...
ಜಿಲ್ಲೆರಾಜ್ಯಸುದ್ದಿ

ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ : ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸೊಸೆ -ಕಹಳೆ ನ್ಯೂಸ್

ಬೀದರ್‌: ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ. ಅಂಜನಾಬಾಯಿ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ...
ಜಿಲ್ಲೆಶಿವಮೊಗ್ಗಸುದ್ದಿ

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃಗಾಲಯದ ಚಿರತೆಗೆ ಸ್ಕ್ಯಾನಿಂಗ್ -ಕಹಳೆ ನ್ಯೂಸ್

ಶಿವಮೊಗ್ಗ: ತ್ಯಾವರೆಕೊಪ್ಪ ಮೃಗಾಲಯದಲ್ಲಿ ಅನಾರೋಗ್ಯಕ್ಕೀಡಾದ 15 ವರ್ಷದ ಗಂಡು ಚಿರತೆಗೆ ಕಳೆದ ರಾತ್ರಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಲಾಗಿದೆ. ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್‌ನ ಅಗತ್ಯ ಇದ್ದಿದ್ದರಿಂದ ಚಿರತೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಕಳೆದ ಎರಡು ದಿನದಿಂದ ಚಿರತೆ ನಿತ್ರಾಣಗೊಂಡಿತ್ತು. ಚಿಕಿತ್ಸೆ ನಡೆಸುತ್ತಿದ್ದ ಮೃಗಾಲಯದ ವೈದ್ಯರು ತುರ್ತಾಗಿ ಸ್ಕ್ಯಾನಿಂಗ್‌ ಅಗತ್ಯವಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಮೃಗಾಲಯದ ಸಿಬ್ಬಂದಿ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆತಂದಿದ್ದರು. ಶಿವಮೊಗ್ಗದ ಮೃಗಾಲಯದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ವ್ಯವಸ್ಥೆ...
ಜಿಲ್ಲೆಬಳ್ಳಾರಿಬೆಂಗಳೂರುರಾಜ್ಯಸುದ್ದಿ

ಬಳ್ಳಾರಿಯಲ್ಲಿ ಉತ್ಖನನ ವೇಳೆ 3,000 ವರ್ಷಗಳಷ್ಟು ಹಳೆಯ ಮಾನವನ ಪಳೆಯುಳಿಕೆ ಪತ್ತೆ -ಕಹಳೆ ನ್ಯೂಸ್

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ವೇಳೆ 3,000 ವರ್ಷದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ ಪತ್ತೆಯಾಗಿದೆ. ಸುಮಾರು 3,000 ವರ್ಷದಿಂದ 5,000 ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಇದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ಅವರಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ವಾರದ ಹಿಂದೆ ಉತ್ಪನನದ ವೇಳೆ ಮಾನವನ ಮೂಳೆಯೊಂದು ಸಿಕ್ಕಿತ್ತು. ಮಣ್ಣನ್ನು...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಕೈ ಕೊಟ್ಟ ಪ್ರೇಯಸಿ :  ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಆತ್ಮಹತ್ಯೆ ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆ ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ (26) ಮೃತ ಬಾಡಿ ಬಿಲ್ಡರ್. ಕಿರಣ್ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಬೇರೆ ಯುವಕನೊಂದಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಳು. ಇದರಿಂದ ಮನನೊಂದ ಕಿರಣ್ ಮನೆಗೆ ಬಂದು ರೂಂನ ಬಾಗಿಲು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಅರ್ಕುಳದಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನಾ ಸಮಾರಂಭ : ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗಿ-ಕಹಳೆ ನ್ಯೂಸ್

ಮಂಗಳೂರು  : ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳ ತುಪ್ಪೆಕಲ್ಲಿನಲ್ಲಿ ಫೆ.7 ರಂದು ಜ್ಞಾನರತ್ನ ಸಾರ್ವಜನಿಕ ಗೃಂಥಾಲಯ ಮತ್ತು ಜ್ಞಾನರತ್ನ ಅಂಗನವಾಡಿ ಕೇಂದ್ರ ತುಪ್ಪೆಕಲ್ಲು ಇದರ ನೂತನ ಕಟ್ಟಡದ ಉದ್ಘಾಟನಾ ಕರ್ಯಕ್ರಮದಲ್ಲಿ, ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಭಾಗವಹಿಸಿ ಶುಭ ಹಾರೈಸಿದರು. ನೂತನ ಸುಸಜ್ಜಿತ ಕಟ್ಟಡವನ್ನು ಧರ್ಮದರ್ಶಿಗಳಾದ ಅರ್ಕುಳಬೀಡು ವಜ್ರನಾಭ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್‌ ಅಧ್ಯಕ್ಷರು,ಸ್ಥಳೀಯ ಸದಸ್ಯರುಗಳು ಕಾರ್ಯಕರ್ತರು ,ಪ್ರಮುಖರು ಉಪಸ್ಥಿತರಿದ್ದರು....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಆರ್ಯಾಪು: ಕೊಲ್ಯ ಕಾಲನಿಯಲ್ಲಿ ೨ ಕೋಟಿ ರೂ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ; ಚುನಾವಣೆಯ ವೇಳೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಅಶೋಕ್ ರೈ -ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ಕಾಲನಿಗೆ ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಇಲ್ಲಿನ ನಿವಾಸಿಗಳು ತಡೆಗೋಡೆಯ ಬೇಡಿಕೆಯನ್ನು ಮುಂದಿಟ್ಟಿದ್ದರು. ತಡೆಗೋಡೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿರಲಿಲ್ಲ, ಇಲ್ಲಿಗೆ ತಡೆಗೋಡೆ ಅಗತ್ಯವಿದೆ ಎಂದು ಹೇಳಿದ್ದೆ ಆದರೆ ಶಾಸಕನಾದ ಬಳಿಕ ಈ ಭಾಗದ ಜನರ ಬೇಡಿಕೆಯನ್ನು ಮರೆಯಲಿಲ್ಲ ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨ ಕೋಟಿ ಅನುದಾನ ಮಂಜೂರು ಮಾಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಲ್ಯ ಕಾಲನಿಯಲ್ಲಿ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಹಿಂದೆ ಇಲ್ಲಿ ಶಾಸಕರೋರ್ವರು ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ ವೋಟು ಪಡೆದು ಹೋಗಿದ್ದರು, ಜನರು ಇವರ ಮಾತನ್ನು ನಂಬಿ ಅವರಿಗೇ ವೋಟು ಹಾಕಿದ್ದರು ಆದರೆ ಕೇವಲ ತೆಂಗಿನ ಕಾಯಿ ಒಡೆದು ಹೋಗಿದ್ದು ಮಾತ್ರ ಇಲ್ಲಿಗೆ ಶಾಶ್ವತ ತಡೆಗೋಡೆ ಮಾಡಿದ್ದು ನಾವು ಕಾಂಗ್ರೆಸ್ ಸರಕಾರ ಎಂಬುದು ಜನ ಅರಿತುಕೊಂಡಿದ್ದಾರೆ. ಕಾಂಗ್ರೆಸ್ ಎಂದೂ ಬಡವರಿಗೆ ಅನ್ಯಾಯ ಮಾಡುವುದಿಲ್ಲ, ಕೊಟ್ಟ ಮಾತನ್ನು ಎಂದೂ ಉಳಿಸಿಕೊಳ್ಲುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ ಎಂದು ಶಾಸಕರು ಹೇಳಿದರು. ಅಪಾಯದಲ್ಲಿ ದಿನ ದೂಡುತ್ತಿದ್ದರು ಪ್ರತೀ ಮಳೆಗಾಲದಲ್ಲಿ ಇಲ್ಲಿನ ಮನೆಯವರು ಭಯದಲ್ಲೇ ದಿನ ದೂಡುತ್ತಿದ್ದರು. ಧರೆ ಯಾವಾಗ ಕುಸಿಯುತ್ತದೆ ಎಂಬ ಭಯ ಪ್ರತೀ ಮನೆಯವರಲ್ಲಿತ್ತು. ಸಣ್ಣ ಮನೆಯನ್ನು ಕಟ್ಟಿಕೊಂಡು , ಮಕ್ಕಳೊಂದಿಗೆ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ಇಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇನೆ. ಬಡವರ ಪರ ಕೆಲಸ ಮಾಡುವವರು ಇಂದು ಕಡಿಮೆಯಾಗಿದ್ದಾರೆ. ಉಳ್ಳವರು ಎಲ್ಲವನ್ನೂ ಮಾಡಿಕೊಳ್ಳುತ್ತಾರೆ ಆದರೆ ಅರಿವಿನ ಕೊರತೆ ಇರುವ ಬಡವರು ಮನವಿ ಮಾಡುತ್ತಲೇ ಇದ್ದು ಅವರು ಕೊಡುವ ಭರವಸೆಯನ್ನು ನಂಬಿಕೊಂಡಿರುತ್ತಾರೆ. ಬಡವರಿಗೆ ವಂಚನೆ ಮಾಡುವ ಮನಸ್ಸು ಯಾರಿಗೂ ಇರಬಾರದು. ಇಂದು ಇಲ್ಲಿನ ಎಲ್ಲಾ ಮನೆಯವರಿಗೂ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದೇನೆ ಎಂದು ಶಾಸಕರು ಹೇಳಿದರು. ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಯಲಿದೆ ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಸುವಂತೆ ಸೂಚನೆಯನ್ನು ನೀಡಿದ್ದೇನೆ. ಕಳೆದ ೧೭ ವರ್ಷಗಳಿಂದ ಇಲ್ಲಿನ ಬಡ ಕುಟುಂಬಗಳು ನಿತ್ಯ ಕಣ್ಣೀರು ಹಾಕುತ್ತಿದ್ದರು ಇನ್ನು ಯಾರೂ ಆತಂಕದಿಂದ ಮಳೆಗಾಲ ಕಳೆಯುವುದು ಬೇಡ ಎಂದ ಶಾಸಕರು ಅಭಿವೃದ್ದಿ ಮಾಡಿದವರನ್ನು ಜನ ಮರೆಯಬಾರದು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುವ ಮೂಲಕ ಇನ್ನಷ್ಟು ಬಡವರ ಸೇವೆ ಮಾಡಲು ಶಕ್ತಿ ತುಂಬ ಬೇಕು ಎಂದು ಮನವಿ ಮಾಡಿದರು. ಅಶೋಕ್ ರೈ ಶಾಸಕರಾಗಿದ್ದು ಬಡವರ ಭಾಗ್ಯ: ಕಾವು ಹೇಮನಾಥ ಶೆಟ್ಟಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅಶೋಕ್ ರೈ ಶಾಕರಾಗಿದ್ದು ಬಡವರ ಪಾಲಿನ ಭಾಗ್ಯವಾಗಿದೆ. ಈ ಹಿಂದೆ ಎಷ್ಟೋ ಮಂದಿ ಇಲ್ಲಿ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ, ಎಂಎಲ್ಸಿಗಳಾಗಿದ್ದಾರೆ ಯರೂ ಕೊಲ್ಯದ ಕಾಲನಿಯ ಜನರ ಕಣ್ಣೀರೊರೆಸುವ ಕೆಲಸ ಮಾಡಿಲ್ಲ. ಇಲ್ಲಿನ ಜನರ ಸಂಕಷ್ಟ ಅರಿತ ಶಾಸಕರು ೨ ಕೋಟಿ ಅನುದಾನ ಮಂಜೂರು ಮಾಡಿಸುವ ಮೂಲಕ ಬೇಡಿಕೆ ಈಡೇರಿಸಿದ್ದಾರೆ . ಅಶೋಕ್ ರೈ ಅವರಿಗೆ ನಾವೆಲ್ಲರೂ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಇವರ ಸಿದ್ದಾಂತಕ್ಕೆ ಬಿಜೆಪಿಯವರೂ ಸೋತಿದ್ದಾರೆ. ಶಾಶಕರೆದುರು ಪುತ್ತೂರು ಬಿಜೆಪಿ ಮಣ್ಣು ಪಾಲಾಗಲಿದೆ. ರಾಜಕೀಯ ರಹಿತ ಕೆಲಸ ಮಾಡುವ ಶಾಸಕರನ್ನು ಕಂಡ ಪುತತೂರು ಧನ್ಯವಾಗಿದೆ. ಕೊಲ್ಯದ ಜನರ ಪಾಲಿಗೆ ಶಾಸಕರು ಆಶಾಕಿರಣವಾಗಿದ್ದಾರೆ. ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬೆಚ್ಚಿ ಬಿದ್ದ ಬಿಜೆಪಿ ಬಾಯಿಗೆ ಬಂದಂತೆ ಮಾತನಾಡತೊಡಗಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಅಶೋಕ್ ರೈಗೆ ಬೆಂಬಲ ನೀಡಲಿದೆ ಎಂದು ಹೇಳಿದರು. ಕಂದಾಯ ಇಲಾಖೆಯ ಅಮಾನವೀಯತೆ: ಆಲಿ ದ ಕ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ ಈ ಹಿಂದೆ ನಿವೇಶನ ಕೇಳಿದ ಬಡ ಕುಟುಂಬಗಳಿಗೆ ಬೆಟ್ಟ, ಗುಡ್ಡದಲ್ಲಿ ಜಾಗ ನೀಡುವ ಮೂಲಕ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅಮಾನವೀಯತೆ ತೋರಿದ್ದರ ಪರಿಣಾಮ ಇಂದು ಕೊಲ್ಯದ ಬೆಟ್ಟದಲ್ಲಿ ಮನೆ ಮಾಡಬೇಕಾದ ಸ್ಥಿತಿ ಬಡವರಿಗೆ ಬಂದಿದೆ. ಸಾಕಷ್ಟು ಸರಕಾರಿ ಜಾಗವಿದ್ದರೂ ಅಲ್ಲಿ ಇವರಿಗೆ ನಿವೇಶನ ನೀಡಿರಲಿಲ್ಲ ಇದು ಅಮಾನವೀಯತೆಯಲ್ಲವೇ ಎಂದು ಪ್ರಶ್ನಿಸಿದ ಆಲಿಯವರು ಎಷ್ಟೋ ವರ್ಷಗಳ ಬಳಿಕ ಪುತ್ತೂರು ಶಾಸಕರು ಬಡವರಿಗೆ ನಿವೇಶನ ನೀಡಲು ೩೮೦ ಎಕ್ರೆ ಜಾಗ ಗುರುತಿಸಿದ್‌ದು ಆ ನಿವೇಶನವನ್ನು ಸುಸಜ್ಜಿತ ನಿವೇಶನವನ್ನಾಗಿ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಶಾಸಕರಿಗಲ್ಲದೆ ಇಲ್ಲಿಗೆ ಎರಡು ಕೋಟಿ ಅನುದಾನ ತರಲು ಯಾರಿದಂಲೂ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿನ ಮಾಜಿ ಸಂಸದ ನಳಿನ್ ಇಲ್ಲಿಗೆ ಅನುದಾನ ನೀಡಿಲ್ಲ, ಸಂಜೀವ ಮಠಂದೂರು ನೀಡಿಲ್ಲ.ಚುನಾವಣೆಯ ಸಮಯದಲ್ಲಿ ಜನರ ಭಾವನೆಯನ್ನು ಕೆರಳಿಸಿ ಮತ ಪಡೆಯುವ ಇವರಿಗೆ ಜನರ ನೋವಿಗೆ ಸ್ಪಂದಿಸುವ ಆಸಕ್ತಿ ಇರಲಿಲ್ಲ ಎಂದು ಆಲಿ ದೂರಿದರು. ಮಠಂದೂರು ಶಾಸಕರಾಗಿದ್ದ ವೇಳೆ ಅನೇಕ ಮಂದಿ ಬಂಡವಾಳ ಶಾಹಿಗಳಿಗೆ, ಶ್ರೀಮಂತ ವ್ಯಕ್ತಿಗಳ ಮನೆಗೆ ಹೋಗುವ ರಸ್ತೆ ಬದಿ, ತೋಟದ ಬದಿಗೆ ತಡೆಗೋಡೆ ಮಾಡಿದ ಬಗ್ಗೆ ನನ್ನಲ್ಲಿ ದಾಖಲೆ ಇದೆ ಅವರಿಗೆ ಕೊಲ್ಯದ ಸಮಸ್ಯೆ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ. ಗ್ಯಾರಂಟಿ ಯೋಜನೆಯಿಂದ ಬಡವರ ಬದುಕು ಹಸನಾಗಿದೆ , ಕಾಂಗ್ರೆಸ್ ಯೋಜನೆಯನ್ನು ಜನ ಮರೆಯಬಾರದು, ಮುಂದಿನ ಗ್ರಾಪಂ, ತಾಪಂ , ಜಿಪಂ< ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಅಶೋಕ್ ರೈ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿಯವರಲ್ಲಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ಬಿಜೆಪಿ ಬಿಟ್ಟು ಹೊರಬಂದೆ: ಪೂರ್ಣಿಮಾ ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಕೊಲ್ಯ ಕಾಲನಿಗೆ ತಡೆಗೋಡೆ ಮಾಡಿ ಎಂದು ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದ್ದೆ ಆದರೆ ಅವರು ಕ್ಯಾರೇ ಮಾಡಿರಲಿಲ್ಲ. ಹೇಳಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ನಾನೇ ಬಿಜೆಪಿಯನ್ನು ಬಿಟ್ಟು ಹೊರಬಂದೆ ಎಂದು ಆರ್ಯಾಪು ಗ್ರಾಪಂ ಸದಸ್ಯೆ ಪೂರ್ಣಿ ಮಹೇಳಿದರು. ಬಿಜಪಿಯವರಿಂದ ಜನ್ಮದಲ್ಲಿ ಇಲ್ಲಿ ತಡೆಗೋಡೆ ಮಾಡ್ಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ ಅಶೋಕ್ ರೈ ಮಾಡಿ ಕೊಡುತ್ತಾರೆ ಎಂಬ ನಂಬಿಕೆ ಇತ್ತು ಆದೇ ರೀತಿ ಆಗಿದೆ ಎಂದ ಅವರು ನಾನು ಬಿಜೆಪಿ ಬಿಟ್ಟು ಹೊರ ಬಂದ ಕಾರಣ ಇಲ್ಲಿನ ಜನರಿಗೆ ಮುಖ ತೋರಿಸಲು ಸಾಧ್ಯವಾಗಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿಗೆ ಕೊಳವೆ ಬಾವಿ ತೆಗೆಯುವಾಗಲೂ ಬಿಜೆಪಿಯವರು ಅಡ್ಡಗಾಲಿಟ್ಟಿದ್ದರು ಕೊನೆ ಗೆ ಶಾಸಕ ಅಶೋಕ್ ರೈಗಳು ಪೊಲೀಸ್ ಇಟ್ಟು ಬೋರ‍್ವೆಲ್ ತೆಗೆಸಿದ್ದಾರೆ ಅಂಥಹ ಮನಸ್ಸಿತಿಯವರು ಬಿಜೆಪಿಯವರು ಎಂದು ದೂರಿದರು. ಯೋಗೀಶ್ ಸಾಮಾನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಲ್ಯ ನಿವಾಸಿಗಳ ಸಮಸ್ಯೆ ಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯ ಪವಿತ್ರಾ ರೈ, ಪಕ್ಷದ ಮುಖಂಡರಾದ ಸಲಾಂ ಸಂಪ್ಯ, ಹಾರಿಸ್ ಸಂಠ್ಯಾರ್, ಕೇಶವ ಸುವರ್ಣ, ಅಣ್ಣಿ ಕಲ್ಲರ್ಪೆ ಸ್ಥಳೀಯರಾದ ಪದ್ಮನಾಭ ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಸಂಟ್ಯಾರ್ ಸ್ವಾಗತಿಸಿ, ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಮಗಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ...
1 150 151 152 153 154 3,399
Page 152 of 3399