ಬೆಳ್ತಂಗಡಿ : ಚಿನ್ನದ ಸರ ತೊಳೆದು ಕೊಡುವುದಾಗಿ ನಂಬಿಸಿ, ರಾಸಾಯನಿಕದ ಮೂಲಕ ಕರಗಿಸಿ ವಂಚನೆ
ಬೆಳ್ತಂಗಡಿ : ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿದ್ದ ಸಂದರ್ಭದಲ್ಲಿ ಚಿನ್ನವನ್ನು ತೊಳೆದು ಕೊಡುವುದಾಗಿ ಅವರ ಎರಡು ಮುಕ್ಕಾಲು ಪವನ್ ಚಿನ್ನದ ಸರವನ್ನು ರಾಸಾಯನಿಕದ ಮೂಲಕ ಕರಗಿಸಿ ಚಿನ್ನವನ್ನು ವಂಚಿಸಿದ ಘಟನೆ ಸಂಭವಿಸಿದೆ. ಘಟನೆಯ ಕುರಿತು ಪಣಿಲಾಜೆ ನಿವಾಸಿ 90ರ ಹರೆಯದ ರುಕ್ಮಿಣಿ ಶೆಟ್ಟಿಗಾರ್ ಅವರು ದೂರು ನೀಡಿದ್ದು, ಅವರು ಫೆ. 10ರಂದು ಬೆಳಗ್ಗೆ 11.15ರ ಸುಮಾರಿಗೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಚಿನ್ನಾಭರಣ ತೊಳೆದು...





