ತುಪ್ಪದ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆ ಸುಳಿ ಕೊಟ್ಟ ಡಿ.ಕೆ.ಸುರೇಶ್ – ಕಹಳೆ ನ್ಯೂಸ್
ಬೆಂಗಳೂರು - ಬೇರೆ ರಾಜ್ಯಗಳಲ್ಲಿ ಹಾಲಿನ ದರ ನಮಗಿಂತಲೂ ಹೆಚ್ಚಿದೆ. ಹೀಗಾಗಿ ನಮಲ್ಲೂ ದರ ಪರಿಷ್ಕರಣೆಯಾಗಬೇಕೆಂದು ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಮಂಡಳಿಗೆ ಮನವಿ ಮಾಡಿದ್ದೇವೆ. ಅರ್ಧ ಲೀಟರ್ ಹಾಲು ಮಾರಿದರೆ ನಷ್ಟವಾಗುತ್ತಿದ್ದು, ಒಂದು ಲೀಟರ್ ಹಾಲು ಮಾರಿದರೆ ಲಾಭವಾಗುತ್ತದೆ. ತುಪ್ಪದ...







