ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ : MBBS ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್
ಬೆಂಗಳೂರು: ಕಾಲೇಜು ಮುಗಿಸಿ ಗೇಟ್‌ನಿಂದ ಹೊರಬರುತ್ತಿದ್ದಂತೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ನಡೆದಿದೆ. ಮೃತಳನ್ನು ಕೃತಿಕಾ (21) ಎಂದು ಗುರುತಿಸಲಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಹಂಸ (21) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಎಂಬಿಬಿಎಸ್ ಓದುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಆಕ್ಟೀವಾದಲ್ಲಿ ಕಾಲೇಜು ಮುಗಿಸಿ ಗೇಟ್ ಹೊರಗೆ ಬಂದಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ...






