ಇಂದು ಜೂನಿಯರ್ ಚಿರು ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ ಮೇಘನಾರಾಜ್-ಕಹಳೆ ನ್ಯೂಸ್
ಬೆಂಗಳೂರು : ಚಿರಂಜೀವಿ ಸರ್ಜಾ ಮತ್ತು ಮೇಘನಾ ದಂಪತಿಯ ಮುದ್ದು ಕಂದನ ಫೋಟೋ ಪ್ರೇಮಿಗಳ ದಿನವಾದ ಇಂದು ಬಹಿರಂಗಗೊಂಡಿದ್ದು, ಈ ಬಗ್ಗೆ ಮೇಘನಾ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದು, ಇಂದು ಜೂನಿಯರ್ ಚಿರು ನಿಮಗೆಲ್ಲರಿಗೂ ಹಲೋ ಹೇಳಲಿದ್ದಾನೆ ಎಂದು ಮೇಘನಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಅಂತೆಯೇ ಇಂದು ಜೂನಿಯರ್ ಚಿರು ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮೇಘನಾ ಗರ್ಭಿಣಿಯಾಗಿದ್ದ...







