Thursday, March 12, 2026

ಸುದ್ದಿ

ಸುದ್ದಿ

ಕಾಡಾನೆ ದಾಳಿಗೆ ಮಹಿಳೆ ಬಲಿ ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ -ಕಹಳೆ ನ್ಯೂಸ್

ಚಿಕ್ಕಮಗಳೂರು: ಮದವೇರಿದ್ದ ಕಾಡಾನೆಗೆ ಮಹಿಳೆ ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ. ಇದೇ ಜಾಗದಲ್ಲಿ ಈ ಆನೆ ವಾರದ ಹಿಂದೆ ಕಾರ್ಮಿಕನೊಬ್ಬನನ್ನು ಬಲಿಪಡೆದಿತ್ತು. ಮೃತ ಮಹಿಳೆಯನ್ನು ಹಾವೇರಿಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ಸಮಯದಲ್ಲೇ ಈ ದಾಳಿ ನಡೆದಿದೆ. ಕಾಡಾನೆಗೆ ಮದವೇರಿದೆ ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಆನೆ ದಾಳಿ ನಡೆದಿದೆ. ಸ್ಥಳಕ್ಕೆ ಅರಣ್ಯ...
ಸುದ್ದಿ

ಪುಣಚ: ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವಕ್ಕೆ ಗೊನೆ ಮುಹೂರ್ತ -ಕಹಳೆ ನ್ಯೂಸ್

ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿರುವ ವಾರ್ಷಿಕ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಫೆ.22ರಂದು ಬೆಳಿಗ್ಗೆ ಗರಡಿ ಪರಿಸರದಲ್ಲಿ ನೆರವೇರಿತು. ಗರಡಿ ಆಡಳಿತ ಮೊಕ್ತೇಸರ  ನಾರಾಯಣ ಪೂಜಾರಿ ನೀರುಮಜಲು ಮುಹೂರ್ತ ವಿಧಿವಿಧಾನಗಳನ್ನು ನಡೆಸಿದರು. ಸಂಕಪ್ಪ ಪೂಜಾರಿ, ಸೀತಾರಾಮ ಪೂಜಾರಿ ಹಾಗೂ ಶರತ್ ಕುಮಾರ್ ನೀರುಮಜಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೇಮೋತ್ಸವವು ಮಾ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ....
ಸುದ್ದಿ

ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವು – ಕಹಳೆ ನ್ಯೂಸ್

ಮಂಗಳೂರು: ಲೂಡೋ (Ludo) ಬೋರ್ಡ್‍ನ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವನ್ನಪ್ಪಿದ್ದ ಘಟನೆ ಉಳ್ಳಾಲದ ಕೊಲ್ಯ ಗ್ರಾಮದಲ್ಲಿ ನಡೆದಿದೆ. ಕೇರಳದ (Kerala) ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ, ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ (8) ಮೃತ ಬಾಲಕಿ. ಸಹೋದರ, ಸಹೋದರಿ ಜೊತೆ ಲೂಡೋ ಆಟ ಆಡುತ್ತಿದ್ದಾಗ ಶಂಕು ಆಕಾರದ ಲೂಡೋ ಕಾಯಿನ್‍ನ್ನು ಬಾಲಕಿ ನುಂಗಿದ್ದಳು. ಇದರಿಂದ ಏಕಾಏಕಿ ಉಸಿರುಗಟ್ಟಿ, ಬಾಳಕಿ ಗಂಭೀರ ಸ್ಥಿತಿ ತಲುಪಿದ್ದಳು. ಬಾಲಕಿಯನ್ನು ತೊಕ್ಕೊಟ್ಟಿನ ಖಾಸಗಿ...
ಸುದ್ದಿ

ಅಫ್ಘಾನ್‌ ಮೇಲೆ ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿ – 12 ಮಕ್ಕಳು ಸೇರಿ ಒಂದೇ ಕುಟುಂಬದ 17 ಮಂದಿ ಸಾವು – ಕಹಳೆ ನ್ಯೂಸ್

ಕಾಬೂಲ್:‌ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಪಡೆ (PAF) ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿ ಇತ್ತೀಚಿನ ಆತ್ಮಹತ್ಯಾ ದಾಳಿಗಳಿಗೆ ಅಫ್ಘಾನ್ ಮೂಲದ ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌ ‘ನಿನ್ನೆ ರಾತ್ರಿ ಪಾಕ್‌ ವಾಯುಪಡೆ...
ಸುದ್ದಿ

16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶಾಲಾ – ಕಾಲೇಜುಗಳಲ್ಲಿ ಮೊಬೈಲ್‌ ಬ್ಯಾನ್‌ ಮಾಡಲು ಚಿಂತನೆ – ಕಹಳೆ ನ್ಯೂಸ್

ಬೆಂಗಳೂರು: ಸಣ್ಣ ವಯಸ್ಸಿನ ಮಕ್ಕಳಲ್ಲಿ ಮೊಬೈಲ್‌, ಸೋಷಿಯಲ್ ಮೀಡಿಯಾ ಗೀಳು ದಿನೇ ದಿನೆ ಹೆಚ್ಚುತ್ತಿದೆ. ಪಾಠ-ಆಟ-ಊಟದ ಕಡೆಗಿನ ಆಸಕ್ತಿ ಕಡಿಮೆಯಾಗಿ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಹಿಂದೆಲ್ಲಾ ಮಕ್ಕಳಿಗೆ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಪಾಠಪ್ರವಚನ, ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈಗ ಮೊಬೈಲ್, ಆನ್‌ಲೈನ್ ಗೇಮಿಂಗ್, ಸೋಷಿಯಲ್ ಮೀಡಿಯಾ ಇವುಗಳೇ ಅವರ ಪ್ರಪಂಚವಾಗಿಬಿಟ್ಟಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ....
ಸುದ್ದಿ

ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಪಾಕ್‌ನ ಐಸಿಸ್‌, ಬಾಂಗ್ಲಾದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಅರೆಸ್ಟ್‌ – ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಐಸಿಸ್‌ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿರುವ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉಡುಪು ಉತ್ಪಾದನಾ ಘಟಕಗಳಿಂದ ಮಿಜಾನೂರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂಬ ಆರು ಶಂಕಿತರನ್ನು ಬಂಧಿಸಲಾಗಿದ್ದು, ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಬಂಧಿತ ಶಂಕಿತರಲ್ಲಿ ಬಾಂಗ್ಲಾದೇಶಿ ಪ್ರಜೆಯೂ ಸೇರಿದ್ದಾರೆ. ಇದನ್ನೂ ಓದಿ: ದೆಹಲಿಯ ಕೆಂಪು...
ಸುದ್ದಿ

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮಕ್ಕಳ ಕಲಾ ಲೋಕ  2026-27 ನೇ ಸಾಲಿನ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು ಪುನರಾಯ್ಕೆ -ಕಹಳೆ ನ್ಯೂಸ್

ಬಂಟ್ವಾಳ : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮಕ್ಕಳ ಕಲಾ ಲೋಕ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ ಎಂ. ಬಾಯಾರು ಪುನರಾಯ್ಕೆ ಆಗಿದ್ದಾರೆ. ಫೆ.21 ರಂದು ವಿಟ್ಲ ಮಾದರಿ ಶಾಲೆಯಲ್ಲಿ ಜರಗಿದ ಮಕ್ಕಳ ಕಲಾ ಲೋಕದ ಮಹಾ ಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಾಯಾರು ಅವರು ಲೇಖಕರು, ಭಾಷಣಕಾರರು, ಸಂಪನ್ಮೂಲ ವ್ಯಕ್ತಿಯೂ...
ಸುದ್ದಿ

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಗರಾಜ ರಾಯಪ್ಪನಮಠ ಪುನರಾಯ್ಕೆ – ಕಹಳೆ ನ್ಯೂಸ್

ಕುಂದಾಪುರ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಾಪುರ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಯು ಚಾನೆಲ್ ನ ನಾಗರಾಜ ರಾಯಪ್ಪನಮಠ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ ದ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಅಸ್ಟ್ರೋ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕುಂದಾಪುರದ ಕೋಯ ಕುಟ್ಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ...
1 19 20 21 22 23 3,287
Page 21 of 3287