Friday, April 24, 2026

ಸಿನಿಮಾ

ಸಂತಾಪಸಿನಿಮಾಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ ನಟ ಶ್ರೀಧರ್ ನಾಯಕ್ ಇನ್ನಿಲ್ಲ –ಕಹಳೆ ನ್ಯೂಸ್

ಬೆಂಗಳೂರು: ಜೀ ಕನ್ನಡದ 'ಪಾರು'‌ ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಂತಹ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿಸಿದ್ದ ಶ್ರೀಧರ್ ನಾಯಕ್ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೆರವನ್ನು ಕೋರಿದ್ದರು. ಕಿರುತೆರೆ ತಾರೆಯರು ಹಾಗೂ ಜನರು ಇವರ ಪರಿಸ್ಥಿತಿಯನ್ನು ನೋಡಿ ನೆರವನ್ನು ನೀಡಿದ್ದರು. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಶ್ರೀಧರ್ ನಾಯಕ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು....
ಜಿಲ್ಲೆಮಂಡ್ಯಸಿನಿಮಾಸುದ್ದಿ

ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾ*ವು: 3 ಎಎಸ್‌ಐಗಳು ಅಮಾನತು -ಕಹಳೆ ನ್ಯೂಸ್

ಮಂಡ್ಯ: ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಸೋಮವಾರ (ಮೇ 26) ನಡೆದಿದೆ. ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದಾಗ ಕೆಳಗೆ ಬಿದ್ದ ಮಗು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಪುತ್ರಿ ರಿತಿಕ್ಷಾ (3) ಮೃತಪಟ್ಟ ಮಗು. ಘಟನೆ ವಿವರ: ಮಹೇಶ್ ಅವರು ತನ್ನ ಪತ್ನಿ ಹಾಗೂ ತನ್ನ ಮೂರು ವರ್ಷದ ಮಗಳನ್ನು ಮಿಮ್ಸ್ ಆಸ್ಪತ್ರೆಗೆ ನಾಯಿ ಕಡಿತದ...
ದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಮಂಗಳೂರಿನ ಭಾರತ್ ಮಹಲ್ ನಲ್ಲಿ ಅದ್ಧೂರಿಯಾಗಿ ತೆರೆಕಂಡ “ಜೇವನ್” ಕೊಂಕಣಿ ಚಲನಚಿತ್ರ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಭಾರತ್ ಮಹಲ್ ನಲ್ಲಿ ಕೊಂಕಣಿ ಚಲನಚಿತ್ರ ಜೇವನ್ ಬಹಳ ಉತ್ಸಾಹ ವಿಜೃಂಭಣೆಯಿಂದ ತೆರೆಕಂಡಿತು. ಸಂದರ್ಭದಲ್ಲಿ ದೀಪ ಬೆಳಗಿಸುವ ಮುಖಾಂತರ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ , ದಾಯಿಜೀ ವಲ್ರ್ಡ್ ನ ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನಂದಳಿಕೆ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾ ರಿಸ್, ಯೂತ್ ಆಫ್ ಜಿ.ಎಸ್.ಬಿ. ಸ್ಥಾಪಕರಾದ ನರೇಶ ಶೆಣೈ...
ಸಿನಿಮಾಸುದ್ದಿ

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ ಗೆ ಕೋವಿಡ್-19 ಪಾಸಿಟಿವ್ – ಕಹಳೆ ನ್ಯೂಸ್

ನವದೆಹಲಿ: ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶಿರೋಡ್ಕರ್ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಏಷ್ಯಾದಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿ ಕೋವಿಡ್-19 ಮತ್ತೆ ಬರುತ್ತಿರುವಂತೆ ತೋರುತ್ತಿದೆ. ಹಾಂಗ್ ಕಾಂಗ್, ಸಿಂಗಾಪುರ, ಚೀನಾ ಮತ್ತು ಥೈಲ್ಯಾಂಡ್ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ವರದಿಯಾಗುತ್ತಿದ್ದಂತೆ, ಭಾರತದಲ್ಲಿಯೂ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್-19 ಪಾಸಿಟಿವ್ ಪರೀಕ್ಷೆಯ ನಂತರ ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ 2025 ರಿಂದ ಹೊರಗಿಡಲಾಗಿದೆ ಎಂಬ...
ಬೆಂಗಳೂರುಸಿನಿಮಾಸುದ್ದಿ

ಮೇ 21ರಂದು ಹಸೆಮಣೆ ಏರಲು ಸಜ್ಜಾದ ‘ಲಕ್ಷ್ಮಿ ಬಾರಮ್ಮ’ ನಟ ಬ್ರೋ ಗೌಡ ಶಮಂತ್ -ಕಹಳೆ ನ್ಯೂಸ್

ಲಕ್ಷ್ಮಿ ಬಾರಮ್ಮ ನಟ ಶಮಂತ್ ಬ್ರೋ ಗೌಡ  ಅವರು ಮೇ 21ರಂದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮೇಕಪ್ ಆರ್ಟಿಸ್ಟ್ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ  ಕಾಲಿಡಲಿದ್ದಾರೆ. ಇದೀಗ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಅರಿಶಿನ ಶಾಸ್ತ್ರದಲ್ಲಿ ನಟ ಮಿಂದೆದಿದ್ದಾರೆ. ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ...
ಸಿನಿಮಾಸುದ್ದಿ

ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಕಾಲಿವುಡ್ ನಟ ವಿಶಾಲ್ – ಕಹಳೆ ನ್ಯೂಸ್

ತಮಿಳು ಚಲನಚಿತ್ರ ನಟ ವಿಶಾಲ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಧಿಡೀರ್ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.. ಕಾರ್ಯಕ್ರಮ ನಡೆಯುತ್ತಿರುವಾಗ, ವಿಶಾಲ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ವೇದಿಕೆಯ ಮೇಲೆ ಕುಸಿದು ಬಿದ್ದ್ದರು. ಆಯೋಜಕರು ಮತ್ತು ಅಭಿಮಾನಿಗಳು ಸ್ಥಳದಲ್ಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಸ್ವಲ್ಪ ಸಮಯದ ನಂತರ ಅವರು ಪ್ರಜ್ಞೆ ಮರಳಿ ಪಡೆದರು. ಕಾರ್ಯಕ್ರಮದಲ್ಲಿ ಹಾಜರಿದ್ದ...
ಉಡುಪಿಸಂತಾಪಸಿನಿಮಾಸುದ್ದಿ

ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್, ಕಿರುತೆರೆ ನಟ ಉಡುಪಿ ಮೂಲದ ರಾಕೇಶ್ ಪೂಜಾರಿ ನಿಧನ – ಕಹಳೆ ನ್ಯೂಸ್

ಉಡುಪಿ : ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್, ಕಿರುತೆರೆ ಮತ್ತು ಚಲನಚಿತ್ರ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ (ಮೇ.11) ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಂಭವಿಸಿದೆ. ಮೂಲತಃ ಉಡುಪಿ ನಿವಾಸಿಯಾಗಿರುವ ರಾಕೇಶ್ ಪೂಜಾರಿ, ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ನಿಧನರಾಗಿದ್ದಾರೆ. ನಟ ರಾಕೇಶ್ ಪೂಜಾರಿ ಪ್ರಸ್ತುತ ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಕಾಮಿಡಿ...
ಉಡುಪಿಸಂತಾಪಸಿನಿಮಾಸುದ್ದಿ

ಉಡುಪಿ: ಕಾಂತಾರಾ-2 ಸೆಟ್‌ನಲ್ಲಿದ್ದ ಜೂನಿಯರ್‌ ಆರ್ಟಿಸ್ಟ್‌ ನದಿಯಲ್ಲಿ ಮುಳುಗಿ ಸಾವು-ಕಹಳೆ ನ್ಯೂಸ್

ಉಡುಪಿ: ಕಾಂತಾರ 2 ಸೆಟ್‌ನಲ್ಲಿದ್ದ ಜೂನಿಯರ್‌ ಆರ್ಟಿಸ್ಟ್‌ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಘಟನೆ ನಡೆದಿದೆ. ಕೊಲ್ಲೂರು ಸೌಪರ್ಣಿಕ ನದಿಯಲ್ಲಿ ಮುಳುಗಿ ಕಪಿಲ್‌ ಸಾವಿಗೀಡಾಗಿದ್ದಾರೆ. ಚಿತ್ರೀಕರಣ ಮುಗಿಸಿ ಈಜಾಡಲು ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ....
1 6 7 8 9 10 92
Page 8 of 92