ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ರನ್ವೇಯಲ್ಲಿ ಮಂಗಗಳ ಹಾವಳಿ ; ಇಂಡಿಗೋ ವಿಮಾನ ಟೇಕ್ ಆಫ್ ರದ್ದು! – ಕಹಳೆ ನ್ಯೂಸ್
ಲಖನೌ: ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪು ರನ್ವೇ ದಾಟುತ್ತಿರುವುದು ಕಂಡುಬಂದ ನಂತರ ಇಂಡಿಗೋ ವಿಮಾನ ಟೇಕ್ ಆಫ್ ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಲಖನೌ ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪೊಂದು ರನ್ ದಾಟುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್ ಆಫ್ ನ್ನು ಸ್ಥಗಿತಗೊಳಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಸುಮಾರು 150 ಪ್ರಯಾಣಿಕರನ್ನು ಹೊತ್ತ 6E 6521 ವಿಮಾನ...







