ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ -ಕಹಳೆ ನ್ಯೂಸ್
ದಾವಣಗೆರೆ: ನಗರದ (Davanagere) ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ...







