ಗಾಯದ ಬಗ್ಗೆ ; ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ-ಕಹಳೆ ನ್ಯೂಸ್
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿನ ತೀವ್ರ ಗಾಯದಿಂದ ಸಿಡ್ನಿಯ ಆಸ್ಪತ್ರೆಗೆ ದಾಖಲಾಗಿದ್ದ ಶ್ರೇಯಸ್ ಅಯ್ಯರ್ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯ ನಂತರ ಐಸಿಯುಗೆ ದಾಖಲಾಗಿದ್ದ 29 ವರ್ಷದ ಬ್ಯಾಟ್ಸ್‌ಮನ್, ಅಭಿಮಾನಿಗಳ ಹಾರೈಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಧನ್ಯವಾದ ಅರ್ಪಿಸಿದರು. ಜತೆಗೆ ಸ್ಥಿರವಾದ ಪ್ರಗತಿ ಸಾಧಿಸುತ್ತಿರುವುದಾಗಿ ತಿಳಿಸಿದರು. "ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನನಗೆ ದೊರೆತ...







