Recent Posts

Monday, August 17, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ.) ಬಂಟ್ವಾಳ ತಾಲೂಕು ಪಾಣೆಮಂಗಳೂರು ವಲಯದ ಅಮ್ಟಾರ್ ಹಾಗೂ ಪಾಣೆಮಂಗಳೂರು ಒಕ್ಕೂಟದ ಪದಗ್ರಹಣ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ.) ಬಂಟ್ವಾಳ ತಾಲೂಕು ಪಾಣೆಮಂಗಳೂರು ವಲಯದ
ಅಮ್ಟಾರ್ ಹಾಗೂ ಪಾಣೆಮಂಗಳೂರು ಒಕ್ಕೂಟದ ಒಕ್ಕೂಟ ಪದಗ್ರಹಣ ಹಾಗೂ ಸಾಧನ ಸಮಾವೇಶ ಆಗಸ್ಟ್ 16 ಭಾನುವಾರ ಬಿಸಿ ರೋಡಿನ ಲಯನ್ಸ್ ಕ್ಲಬ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಮಾತನಾಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನುಡಿಸುವಂತ ಕಾರ್ಯಕ್ರಮಗಳು ಸ್ವಾಸ್ಥ್ಯ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ವಸಂತಿ ಗಂಗಾಧರ ವಹಿಸಿದ್ದರು. ಒಕ್ಕೂಟ ಜವಾಬ್ದಾರಿಯ ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಧರ್ಮಸ್ಥಳದ ಮೀಡಿಯಾ ಹಾಗೂ ಸಂವಹನ ವಿಭಾಗದ ನಿರ್ದೇಶಕ ಪ್ರದೀಪ್ ಮಾಡಿದರು.

ಜಾಹೀರಾತು

ನ್ಯಾಯವಾದಿ ಶೈಲಜಾ ರಾಜೇಶ್ ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಚಿತ್ರ ಎಡಪಡಿತ್ತಾಯ,ವಲಯ ಜನಜಾಗೃತಿ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಮೆಲ್ಕಾರ್,ಗಣೇಶ ಶೆಟ್ಟಿಗಾರ್, ಚಿತ್ರಲೇಖ ಉಪಸ್ಥಿತರಿದ್ದರು. ಪಾಣೆಮಂಗಳೂರ ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ ಸ್ವಾಗತಿಸಿ,ಒಕ್ಕೂಟ ಸಾಧನ ವರದಿಯನ್ನು ಸೇವಾ ಪ್ರತಿನಿಧಿ ಸುಲೋಚನಾ ವಾಚಿಸಿದರು,ಆಂತರಿಕ ಲೆಕ್ಕ ಪರಿಶೋಧಕ ಸುಬ್ರಯ ನಾಯ್ಕ್, ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಕ್ಕೂಟ ಪದಾಧಿಕಾರಿಗಳು ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.