ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿಬಿದ್ರೆ ಕ್ಷಮೆ ಇಲ್ಲ : ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ : ಖಾದರ್ ಖಡಕ್ ವಾರ್ನಿಂಗ್ – ಕಹಳೆ ನ್ಯೂಸ್

ಬೆಂಗಳೂರು: ಪಿಜಿ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ, ಖಾಸಗಿ ಹಾಸ್ಟೆಲ್ ಕೂಡ ಪರಿಶೀಲನೆ ಮಾಡ್ತೇವೆ ಎಂದು ಸಚಿವ ಯು.ಟಿ ಖಾದರ್ ಎಚ್ಚರಿಕೆ ನೀಡಿದರು.
ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ (Food Safety Officers) ಇಂದು ಆರೋಗ್ಯ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳಿಗೆ ಗೌರವ ಸಮರ್ಪಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಹಲವು ವಿಷಯಗಳನ್ನ ಪ್ರಸ್ತಾಪಿಸಿದರು.
ಪಿಜಿ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರಲ್ಲದೇ, ಪಿಜಿಗಳು ಮತ್ತೆ ತಪ್ಪು ಮಾಡಿದ್ರೆ ಕ್ಷಮಿಸುವ ಮಾತೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಚೆಕ್ ಮಾಡ್ತೇವೆ ಎಂದು ಹೇಳಿದರು.
ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಗಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
5 ಲಕ್ಷದ ವರೆಗೆ ದಂಡ
ರಾಜ್ಯಕ್ಕೆ ಫಾರಿನ್ ಕಂಪನಿ ಚಾಕೊಲೆಟ್‌ಗಳು ಬರುತ್ತವೆ, ಶುಗರ್‌ನಲ್ಲಿ ಭಾರೀ ವ್ಯತ್ಯಾಸ ಇದೆ. ಸೆಂಟ್ರಲ್ ಆಕ್ಟ್‌ನಲ್ಲಿ ಚೇಂಜ್ ಆಗಬೇಕು. ಕೇಂದ್ರ ಆಹಾರ ಸಚಿವರಿಗೆ ಸಚಿವರಿಗೆ ಮಾಹಿತಿ ಕೊಡ್ತೇವೆ. ಇನ್ನೂ ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್ ಜೊತೆಗೆ 5 ಲಕ್ಷದ ವರೆಗೂ ದಂಡ ಹಾಕ್ತೇವೆ. ದಂಡ ಹಾಕಿ ಕ್ರಮ ವಹುಸುತ್ತೇವೆ, ಕ್ಷಮಿಸುವ ಮಾತೇ ಇಲ್ಲ ಎಂದು ತಿಳಿಸಿದರು.
ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ. ಖಾಸಗಿ ಹಾಸ್ಟೆಲ್ ಕೂಡ ಪರಿಶೀಲನೆ ಮಾಡ್ತೇವೆ. ಬಸ್ ಸ್ಟಾಪ್ ಹೋಟೆಲ್, ಮದುವೆ ಮನೆ ಕೂಡ ಪರಿಶೀಲನೆ ಮಾಡ್ತೇವೆ. ರೈಲ್ವೇ ಕ್ಯಾಂಟೀನ್ ಮೇಲೂ ಪರಿಶೀಲನೆ ಮಾಡ್ತೇವೆ. ಫ್ಲೈಟ್ ನಲ್ಲೂ ಕೊಡುವ ಆಹಾರದ ಬಗ್ಗೆಯೂ ಪರಿಶೀಲನೆ ಮಾಡ್ತೇವೆ. ಅದಕ್ಕಾಗಿ ನ್ಯಾಷನಲ್ ಪ್ರಾಕ್ಟೀಸ್ ಟೀಂ ಸೆಟ್ ಮಾಡ್ತೇವೆ. ಕೂಲ್ ಡ್ರಿಂಕ್ಸ್ ಬೇರೆ ಕಡೆಗಳಲ್ಲಿ ಬೇರೆ, ಇಲ್ಲಿ ಬಂದಾಗ ಅದರ ರುಚಿಯೇ ಬೇರೆ. ಸೆಂಟ್ರಲ್ ಫುಡ್ ಸೇಫ್ಟಿ ನಿಯಮ ಬದಲಾಗಬೇಕು. ಬೇರೆ ದೇಶದ ಕ್ವಾಲಿಟಿ ಕೂಡ ಇಲ್ಲಿ ಅದೇ ಆಗಿರಬೇಕು. ಇದಕ್ಕಾಗಿ ಅಂತಾರಾಷ್ಟ್ರೀಯ ಆಲ್ ಇಂಡಿಯಾ ಫುಡ್ ಸೇಫ್ಟಿ ಕಾನ್ಕ್ಲೇವ್ ಮಾಡ್ತೀವಿ ಎಂದು ಹೇಳಿದರು.
ಸಮಸ್ಯೆ ತಿಳಿಸಲು ಕ್ಯೂ ಆರ್ ಕೋಡ್
ಇನ್ನೂ ಹೋಟೆಲ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಿಳಿಸಲು ಪ್ರತಿ ಹೊಟೆಲ್, ಮೆಡಿಕಲ್ ಶಾಪ್ ಮುಂದೆ ಕ್ಯೂರ್ ಕೋಡ್ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್ ಟೋಲ್ ಫ್ರೀ ನಂಬರ್ ಸಹ ಬಿಡುಗಡೆ ಮಾಡ್ತೇವೆ ಎಂದು ತಿಳಿಸಿದರು. ಇದೇ ವೇಳೆ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯಿಂದ ಕ್ಯೂ-ಆರ್ ಕೋಡ್ ಸಹ ಬಿಡುಗಡೆ ಮಾಡಲಾಯಿತು.
ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್
ಮುಂದುವರಿದು ಮಾತನಾಡಿದ ಸಚಿವರು… ಅಡುಗೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬರಲಿದೆ. ಹೋಟೆಲ್ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯವಾಗಿರುತ್ತೆ, ಅದಕ್ಕೆ ಶೀಘ್ರವೇ ಸೂಚನೆ ಕೊಡುತ್ತೇನೆ ಎಂದು ವಿವರಿಸಿದರು.
ಹೋಟೆಲ್‌ಗಳ ಮೇಲಿನ ದಾಳಿಯಲ್ಲಿ ವಶಕ್ಕೆ ಪಡೆದ ಪದಾರ್ಥಗಳು
* ಮಿಸ್ ಲೇಬ್ಡ್ ಆದ ಮಟನ್/ಚಿಕನ್ -378 ಕೆಜಿ
* ಅವಧಿ ಮೀರಿದ ಮಾಂಸ – 51 ಕೆಜಿ
* ಅವಧಿ ಮೀರಿದ ಫಿಶ್ -203 ಕೆಜಿ
* ಮಾಂಸಾಹಾರದ ಜೊತೆ ಸಸ್ಯಹಾರ ಮಿಶ್ರಣ – 200 ಕೆಜಿ
* ಹಾಳಾದ ತರಕಾರಿ – 76 ಕೆಜಿ
* ಅವಧಿ ಮೀರಿದ ಹಾಲು ಮೊಸರು – 45 ಲೀಟರ್
* ಬೇಕರಿ ಉತ್ಪನ್ನ – 12 ಕೆಜಿ
* ಬಳಸಿದ ಅಡುಗೆ ಎಣ್ಣೆ – 49 ಲೀಟರ್










