*ಬಂದಾರು : ಆ.17 ಜನ ಮೆಚ್ಚಿದ ಜನಪ್ರಿಯ ಶ್ರಮಿಕ ಶಾಸಕರಾದ ಹರೀಶ್ ಪೂಂಜಾರವರ ಜನುಮದಿನದ ಸಲುವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶಾಶ್ವತ ಪೂಜೆ, ವಿಶೇಷ ಪ್ರಾರ್ಥನೆ – ಕಹಳೆ ನ್ಯೂಸ್

ಬಂದಾರು : ಆ.17 ಜನ ಮೆಚ್ಚಿದ ಜನಪ್ರಿಯ ಶ್ರಮಿಕ ಶಾಸಕರಾದ ಹರೀಶ್ ಪೂಂಜಾರವರ ಜನುಮದಿನದ ಸಲುವಾಗಿ ಪೆರ್ಲ -ಬೈಪಾಡಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜಾರವರಿಗೆ ದೀರ್ಘಾಯುಷ್ಯ, ಆಯುರಾರೋಗ್ಯ, ಸಂಪತ್ತು, ಪ್ರಾಪ್ತಿಯಾಗಲಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮೂರನೇ ಭಾರಿ ಶಾಸಕರಾಗಿ, ಸಚಿವ ಸ್ಥಾನ ಲಭಿಸಲಿ ಎಂದೂ ಅಭಿಮಾನಿಗಳು ಶಾಶ್ವತ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕರಾದ ಲೋಕ್ಷತ್ ಗೌಡ ಅನಿಲ,ಪೆರ್ಲ -ಬೈಪಾಡಿ ಬೂತ್ ಸಮಿತಿ ಕಾರ್ಯದರ್ಶಿ ಲೋಹಿತ್ ಗೌಡ ಸೋನಕುಮೇರು, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಆಡಳಿತ ಮೊಕ್ತೇಸರರಾದ ಹರೀಶ್ ಗೌಡ ಕೊಡಿಮಜಲು,ಮಾಜಿ ಬೂತ್ ಕಾರ್ಯದರ್ಶಿ ಲಕ್ಷ್ಮೀಕಾಂತ ಗೌಡ ಕೀಲಾರ್, ನಾರಾಯಣ ಗೌಡ ಪಯ್ಯೋಡಿ, ದೇವಪ್ಪ ಪರ್ಲಾರ್, ಪವನ್ ಒಲಕ್ಕುಡೆ , ಕೇಶವ ಏಕ, ರಂಜಿತ್ ಬಲಿಪೆ, ತೀವರ್ಲೆಸ್ ಬಲಿಪೆ, ಭರತ್ ಕುಕ್ಕಿಲ, ದೀಪಕ್ ಕೀಲಾರ್ ಹಾಗೂ ಇನ್ನಿತರ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.










