Monday, June 15, 2026
ಸುದ್ದಿ

ಮನೆಗೆ ನುಗ್ಗಿದ ಕಳ್ಳರು ನಗ-ನಗದನ್ನು ದೋಚಿ ಪರಾರಿ : ಕಹಳೆ ನ್ಯೂಸ್

ವಿಟ್ಲ: ವಿದೇಶಕ್ಕೆ ತೆರಳಲಿದ್ದ ಮಗಳನ್ನು ಏರ್‌ಪೋರ್ಟ್ ಗೆ ಬಿಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ನಗ-ನಗದನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಬದಲ್ಲಿ ನಡೆದಿದೆ.

ಜಾಹೀರಾತು

ವೀರಕಂಬ ಬೊಣ್ಯಕುಕ್ಕು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಮುಸ್ಲಿಯಾರ್ ರವರು ಕುಟುಂಬ ಸಮೇತರಾಗಿ ಮಾ.27ರಂದು ರಾತ್ರಿ ವಿದೇಶಕ್ಕೆ ತೆರಳಲಿದ್ದ ಮಗಳನ್ನು ಮಂಗಳೂರು ಏರ್‌ಪೋರ್ಟ್ ಗೆ ಬಿಟ್ಟು ಬರಲು ತೆರಳಿದ್ದರು. ಅವರು ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತಲ್ಲದೇ ಮನೆಯ ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು