Recent Posts

Monday, June 8, 2026
ಸುದ್ದಿ

ಕಡಬ: ಬಸ್ಸಿನಿಂದ ಹೊರಬಿದ್ದು ಮಹಿಳೆ ಸಾವು-ಕಹಳೆ ನ್ಯೂಸ್

ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ತಾಲೂಕಿನ ಬಳಿ ನಡೆದಿದೆ. ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು ಬೆಂಗಳೂರಿನ ದಾಸರಹಳ್ಳಿಯ ನಾಗರತ್ಮಮ್ಮ( 58) ಮೃತಪಟ್ಟವರು.

ಜಾಹೀರಾತು

ನಾಗರತ್ಮಮ್ಮ ತಮ್ಮ ಕುಟುಂಬಸ್ಥರೊAದಿಗೆ ಬೆಂಗಳೂರಿನಿAದ ಧರ್ಮಸ್ಥಳ ಯಾತ್ರೆಗೆ ರೈಲು ಮೂಲಕ ಬಂದಿದ್ದರು. ನೆಟ್ಟಣದಲ್ಲಿ ಬಂದಿಳಿದ ಅವರು ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಹತ್ತಿದ್ದರು. ಬಸ್ ಮುಂಭಾಗ ಕುಳಿತಿದ್ದ ಅವರು ತಿರುವು ರಸ್ತೆಯಲ್ಲಿ ಬಸ್ ಚಲಿಸಿದ ಹಿನ್ನೆಲೆ ಬಸ್‌ನ ಬಾಗಿಲು ಹಾಕದ ಕಾರಣ ಏಕಾಏಕಿ ಮಹಿಳೆ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಕರ್ತವ್ಯದ ವೇಳೆ ಅಜಾಗರೂಕತೆ ವಹಿಸಿದ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ದ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಇತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿ 25 ಸಾವಿರ ರೂ. ಮಧ್ಯಾಂತರ ಪರಿಹಾರ ಹಸ್ತಾಂತರಿಸಿದರು. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ವಿಮಾ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು