ಬಹುಭಾಷಾ ಹಿರಿಯ ನಟಿ ರಂಭಾ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ರಂಭಾ ಹಾಗೂ ಪುತ್ರಿ ಗಾಯಗೊಂಡ ಘಟನೆ ಚೆನ್ನೈನಲ್ಲಿ ಸಂಭವಿಸಿದೆ.
ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ರಂಭಾ ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ರಂಭಾ ಹಾಗೂ ಪುತ್ರಿ ಸಾಹಾಗೆ ಸಣ್ಣಪುಟ್ಟ ಗಾಯ ಆಗಿದೆ ಎಂದು ಸ್ವತಃ ರಂಭಾ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಅಪಘಾತಕ್ಕೀಡಾದ ರಂಭಾ ಅವರ ಕಾರಿನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರಿಂದ ರಂಭಾ ಆರೋಗ್ಯದ ಸ್ಥಿತಿ ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು. ಆದರೆ ರಂಭಾ ಸಣ್ಣಪುಟ್ಟ ಗಾಯವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂತಿಹಾರನ್ ಎಂಬ ಉದ್ಯಮಿಯನ್ನು ರಂಭಾ ಮದುವೆ ಆಗಿದ್ದು, ಎರಡು ಲಾವಣ್ಯ ಮತ್ತು ಸಾಷಾ ಎಂಬ ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಹೊಂದಿದ್ದಾರೆ.